ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಹಾಗೆ ಹೇಳಿಲ್ಲ: ಬಿಜೆಪಿ

ಪ್ರಿಯಾಂಕಾ ನನ್ನ ಮಗಳಂತೆ
Last Updated 2 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ/ವಾರಾಣಸಿ: ‘ದೂರ­ದರ್ಶನಕ್ಕೆ  ನೀಡಿದ ಸಂದರ್ಶನದಲ್ಲಿ  ಪ್ರಿಯಾಂಕಾ ನನ್ನ ಮಗಳಂತೆ ಎಂದು ನರೇಂದ್ರ ಮೋದಿ ಹೇಳಿಲ್ಲ. ಈ ಸಂದರ್ಶನವನ್ನು ತಿರುಚಿ ಪ್ರಸಾರ ಮಾಡಲಾಗಿದೆ’ ಎಂದು ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ಶುಕ್ರವಾರ  ಹೇಳಿದ್ದಾರೆ.

ವಾರಾಣಸಿಯಲ್ಲಿ ಸುದ್ದಿಗೋಷ್ಠಿ­ಯಲ್ಲಿ ಮಾತನಾಡಿ, ‘ಯಾರ ಒತ್ತಡದ ಮೇಲೆ ಸಂದರ್ಶನದ ಕೆಲವು ಭಾಗವನ್ನು ತಿರುಚ­ಲಾಗಿದೆ ಎನ್ನುವು­ದರ ತನಿಖೆಗೆ ಆದೇಶ ನೀಡಬೇಕು’ ಎಂದು ಆಗ್ರಹಿಸಿದರು.

ಈ ನಡುವೆ, ಗುಜರಾತ್‌್ ಮುಖ್ಯ­ಮಂತ್ರಿ ನರೇಂದ್ರ ಮೋದಿ ಕಚೇರಿಯು, ಸಂದರ್ಶನದ ಪೂರ್ಣ ಪಾಠ ಬಿಡುಗಡೆ ಮಾಡಿದೆ. ‘ಸಂದರ್ಶನದ ಯಾವ ಭಾಗವನ್ನೂ ಉದ್ದೇಶಪೂರ್ವಕವಾಗಿ ಪರಿಷ್ಕರಿಸಿಲ್ಲ ಅಥವಾ ಕತ್ತರಿ ಹಾಕಿಲ್ಲ’ ಎಂದು ಡಿಡಿ ಸುದ್ದಿವಾಹಿನಿ ನಿರ್ದೇಶಕ ಎಸ್‌.ಎಂ.­ಖಾನ್‌್ ಹೇಳಿಕೆ ನೀಡಿದ ಬಳಿಕ  ಮೋದಿ ಈ ಸಂದರ್ಶನದ ಪೂರ್ಣ ಪಾಠ ಬಿಡು­ಗಡೆ ಮಾಡಲು ನಿರ್ಧರಿಸಿದರು.

‘ಸರ್ಕಾರ ಒತ್ತಡದ ಮೇರೆಗೆ ಈ ಸಂದ­ರ್ಶನದ ಕೆಲವು ಭಾಗವನ್ನು ತಿರುಚ­ಲಾಗಿದೆ’ ಎಂದು ಬಿಜೆಪಿ ಆರೋಪಿಸಿದೆ.

ಮೋದಿ ಹೇಳಿದ್ದೇನು?
ಮಗಳು ತಾಯಿ ಹಾಗೂ ಸಹೋದರನ ಜಯಕ್ಕಾಗಿ ಎಲ್ಲವನ್ನೂ ಮಾಡುತ್ತಾಳೆ. ಎಷ್ಟೇ ಆದರೂ ಮಗಳು ಮಗಳೇ. ಮಗಳು ತಾಯಿ ಪರವಾಗಿ ಕೆಲಸ ಮಾಡದೇ ಇನ್ನ್ಯಾರ ಪರವಾಗಿ ಮಾಡುತ್ತಾಳೆ? ಅಮ್ಮನಿ­­ಗಾಗಿ, ಸಹೋದರನಿಗಾಗಿ ಕೆಲಸ ಮಾಡು­ವುದು ಆಕೆಯ ಹಕ್ಕು. ಎಷ್ಟೇ ಬೈಯ್ದರೂ ಮಗಳು ಮಗಳೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT