ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದವ ಸಮುದಾಯದ ಅಭಿವೃದ್ಧಿ ಅಗತ್ಯ

Last Updated 20 ಜೂನ್ 2011, 9:50 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ಯಾದವ ಸಮುದಾಯದ ಅಭಿವೃದ್ಧಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಬೇಕು ಎಂದು ತಾ. ಪಂ. ಸದಸ್ಯ ತಾಲ್ಲೂಕು ಯಾದವ ಮಾಹಾ ಸಂಘದ ಹಾಲಿ ಅಧ್ಯಕ ಮಾರಸಂದ್ರ ಪುಟ್ಟಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಯಾದವ ಮಹಾ ಸಭಾ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಮಾತನಾಡಿದರು.

ರಾಜ್ಯವನ್ನಾಳಿದ ಪ್ರತಿ ಸರ್ಕಾರ  ಸಮುದಾಯವನ್ನು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸಿಲ್ಲ ಎಂದು ಟೀಕಿಸಿದ ಅವರು, ಇತರೆ ಸಮುದಾಯಗಳಿಗೆ ನೀಡಿದ  ಪ್ರಾಮುಖ್ಯತೆ ಯಾದವ ಸಮುದಾಯಕ್ಕೆ ಸರ್ಕಾರ ನೀಡದೇ ಇರುವುದು ವಿಷಾದನೀಯ ಎಂದರು.

ನೂತನ ಪದಾಧಿಕಾರಿಗಳು : ಆಲಗೊಂಡಹಳ್ಳಿ  ಗೋವಿಂದಪ್ಪ (ಗೌರವ ಅಧ್ಯಕ್ಷ), ತಾ.ಪಂ.ಸದಸ್ಯ ಪುಟ್ಟಸ್ವಾಮಿ (ಅಧ್ಯಕ್ಷ), ಲಕ್ಷ್ಮಿ ನಾರಾಯಣ್, ಎಂ.ಆರ್. ನಾರಾಯಣಸ್ವಾಮಿ (ಉಪಾಧ್ಯಕ್ಷ), ಎಂ.ಆರ್. ವೆಂಕಟಾಚಲಪತಿ (ಪ್ರಧಾನ  ಕಾರ್ಯದರ್ಶಿ),  ಮಾದನಹಟ್ಟಿ ಕೆ. ವೆಂಕಟೇಶಪ್ಪ (ಖಜಾಂಚಿ), ನಾರಾಯಣಸ್ವಾಮಿ ಮೇಸ್ತ್ರೀ (ಸಂಘಟನಾ ಮಹಾ ಕಾರ್ಯದರ್ಶಿ), ಎಂ.ಆರ್.ಗೋಪಾಲಕೃಷ್ಣ (ಸಂಘಟನಾ ಕಾರ್ಯದರ್ಶಿ), ಚೇತನ್(ಸಂಘಟನಾ ಸಹಕಾರ್ಯದರ್ಶಿ), ಟಿ.ಎಂ.ರಮೇಶ್ (ಕಾರ್ಯದರ್ಶಿ), ಬಿ.ಕೃಷ್ಣಪ್ಪ (ನಗರ ಕಾರ್ಯದರ್ಶಿ), ಎಂ.ಆರ್.ಚನ್ನರಾಯಪ್ಪ (ಕಸಬಾ ಕಾರ್ಯದರ್ಶಿ), ವಿ.ಕೆ.ಆಂಜಿನಪ್ಪ (ಟೇಕಲ್ ಹೋಬಳಿ ಕಾರ್ಯದರ್ಶಿ) ಲೋಕೇಶ್ (ಲಕ್ಕೂರು ಹೋಬಳಿ  ಕಾರ್ಯದರ್ಶಿ), ವಕೀಲ ವಿಜಯಕುಮಾರ್ (ಕಾನೂನು ಸಲಹೆಗಾರರು), ಎಚ್.ಎನ್.ಕೃಷ್ಣಪ್ಪ (ನಿರ್ದೇಶಕ) ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT