ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರಿಯ ಉತ್ಪಾದನೆ ಕುಸಿತ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):ಕೃಷಿಕರಿಗೆ ಸ್ವಲ್ಪ ಆತಂಕ ಮತ್ತು ಸಮಾಧಾನ ಎರಡನ್ನೂ ಉಂಟು ಮಾಡುವ ಸಂಗತಿ.
 ಮಾರ್ಚ್ ತಿಂಗಳಲ್ಲಿ ದೇಶದಲ್ಲಿನ ಯೂರಿಯ ಉತ್ಪಾದನೆ ನಿಗದಿತ ಗುರಿಗಿಂತ ಕಡಿಮೆಯಾಗಿದೆ. ಇದೇ ವೇಳೆ ಡಿಎಪಿ(ಡೈ ಅಮೋನಿಯಂ ಫಾಸ್ಪೇಟ್) 7 ಸಾವಿರ ಟನ್ ಹೆಚ್ಚು ಉತ್ಪಾದನೆಯಾಗಿದೆ.

ಮಾರ್ಚಿಯಲ್ಲಿ 18.93 ಲಕ್ಷ ಟನ್ ಯೂರಿಯ ಉತ್ಪಾದನೆ ಗುರಿ ಇದ್ದಿತು. ಆದರೆ, ದೇಶದ ಯೂರಿಯ ಘಟಕಗಳಿಂದ 17.28 ಲಕ್ಷ ಟನ್ ಮಾತ್ರ ಉತ್ಪಾದನೆಯಾಗಿದೆ.

ಡಿಎಪಿ ಮಾತ್ರ ನಿಗದಿತ 3.03 ಲಕ್ಷ ಟನ್‌ಗಳ ಗುರಿ ಮೀರಿ 3.10 ಲಕ್ಷ ಟನ್ ಉತ್ಪಾದನೆ ಆಗಿದೆ.
ಇದೇ ವೇಳೆ ಓಮನ್‌ನಿಂದ 1.59 ಲಕ್ಷ ಟನ್ ಯೂರಿಯ, 25 ಸಾವಿರ ಟನ್ ಡಿಎಪಿ ಮತ್ತು 1.18 ಲಕ್ಷ ಟನ್ ಎಂಒಪಿ (ಮ್ಯೂರಿಯೇಟ್ ಅಫ್ ಪೊಟಾಶ್) ಆಮದು ಮಾಡಿಕೊಳ್ಳಲಾಗಿತ್ತು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT