ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋಲಿಗೆ ಬಣ್ಣ ಹಾಕಿದ ಬಾಲೆಯರು

Last Updated 6 ಜನವರಿ 2012, 9:20 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕೆಂಪು, ಹಸಿರು, ಹಳದಿ, ನೀಲಿ ಮುಂತಾದ ಬಣ್ಣಗಳಿಂದ ಹೆಣ್ಣುಮಕ್ಕಳು ಚಿತ್ತಾಕರ್ಷಕ ರಂಗೋಲಿಗಳನ್ನು ಒಂದೆಡೆ ಬಿಡಿಸುತ್ತಿದ್ದರೆ, ಇನ್ನೊಂದೆಡೆ ಕಾಲೇಜಿನ ಸಮಯವಾದರೂ ಅತ್ತ ಹೋಗದೆ ಬಣ್ಣದ ಆಕರ್ಷಣೆಗೆ ಒಳಗಾದವರಂತೆ ವಿದ್ಯಾರ್ಥಿಗಳು ರಂಗೋಲಿಗಳ ಸುತ್ತ ಸುತ್ತುವರೆದಿದ್ದರು.

ಪಟ್ಟಣದ ಡಾಲ್ಫಿನ್ ಶಾಲೆಯ ಆವರಣದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ತಾಲ್ಲೂಕು ಮಟ್ಟದ ರಂಗೋಲಿ ಸ್ಪರ್ಧೆ ಯನ್ನು ಬುಧವಾರ ಆಯೋಜಿಸ ಲಾಗಿತ್ತು. ನಕ್ಷತ್ರ ಆಕಾರದ ರಂಗೋಲಿ ಒಬ್ಬರದಾದರೆ, ಹೂವಿನ ಆಕಾರ ಒಬ್ಬರದ್ದು. ಯಕ್ಷಗಾನದ ಪಾತ್ರಧಾರಿ ಯಂತಿದ್ದ ರಂಗೋಲಿ ಒಬ್ಬರು ಬಿಡಿ ಸಿದ್ದರೆ, ಶಂಖ ಚಕ್ರಗಳ ಸರಮಾಲೆ ಯನ್ನೇ ಇನ್ನೊಬ್ಬರು ಚಿತ್ರಿಸಿದ್ದರು. ವಿವಿಧ ಬಣ್ಣಗಳನ್ನು ರಂಗೋಲಿಗೆ ಹೊಂದುವಂತೆ ನಿಗದಿತ ಸಮಯ ದೊಳಗೆ ತುಂಬಿಸಲು ಎಲ್ಲ ಸ್ಪರ್ಧಿಗಳೂ ಉತ್ಸುಕರಾಗಿದ್ದರು.

 ದೊಡ್ಡತೇಕಹಳ್ಳಿಯ ದಿವ್ಯಾ ಅವರು ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಸ್ಥಾನವನ್ನು ವರದನಾಯಕನಹಳ್ಳಿಯ ವಿ.ಶಿಲ್ಪಾ ಮತ್ತು ದೇಶದಪೇಟೆಯ ಟಿ. ದೇವಿಕಾ ಪಡೆದರು. ತೃತೀಯ ಸ್ಥಾನ ವನ್ನು ಕುರುಬರಪೇಟೆಯ ನಳಿನಿ ಪಡೆದರು.

`ತಾಲ್ಲೂಕು ಮಟ್ಟದ ಈ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ನಮ್ಮ ಸಂಸ್ಕೃತಿಯ ಭಾಗವಾದ ರಂಗೋಲಿ ಬಿಡಿಸುವಲ್ಲಿ ಸಿದ್ದಹಸ್ತರಾಗಿರುತ್ತಾರೆ. ಆದರೆ ಈ ಬಾರಿ ಸ್ಪರ್ಧೆಗೆ ಮಾತ್ರ ಹೆಚ್ಚು ಮಂದಿ ಭಾಗವಹಿಸಿಲ್ಲ~ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಸಿ.ಶ್ರೀನಿವಾಸ್ ತಿಳಿಸಿದರು.ಮುಖ್ಯಶಿಕ್ಷಕಿ ಶ್ರೀಲಕ್ಷ್ಮಿ, ಉಪನ್ಯಾಸಕಿ ಮೀನಾ ನಾಗೇ ಂದ್ರ,  ಶಿಕ್ಷಕಿ ಪ್ರಿಯದರ್ಶಿನಿ ತೀರ್ಪುಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT