ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಉದ್ದಿಮೆ: ಖಾಸಗಿ ಸಹಭಾಗಿತ್ವ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಮೂಲಗಳಿಂದ ಅತ್ಯುನ್ನತ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ದಿಮೆಗಳು ಖಾಸಗಿ ಉದ್ದಿಮೆಗಳೊಂದಿಗೆ ಸಹಭಾಗಿತ್ವ ಹೊಂದಲು ಕೇಂದ್ರ ಸಂಪುಟ ಅನುಮತಿ ನೀಡಿದೆ.

ರಕ್ಷಣಾ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಈ ಅನುಮೋದನೆ ನೀಡಲಾಗಿದೆ. ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ದಿಮೆಗಳು ಖಾಸಗಿ ಉದ್ದಿಮೆಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ಉದ್ದಿಮೆಗಳನ್ನು ನಡೆಸಲು ಇದರಿಂದ ಅನುಮತಿ ದೊರೆತಂತಾಗಿದೆ. ಪ್ರಮುಖವಾಗಿ ವಿದೇಶಿ ಮೂಲಗಳ ಉನ್ನತ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಸಂಪುಟದ ಈ ನಡೆ ಅವಕಾಶ ಕಲ್ಪಿಸಿದೆ.

ಸಂಪುಟದ ಈ ನಿರ್ಧಾರದಿಂದಾಗಿ ದೇಶದ ರಕ್ಷಣಾ ಮಾರುಕಟ್ಟೆಯಲ್ಲಿ ಸುಮಾರು ಹತ್ತು ಶತಕೋಟಿ ಡಾಲರ್ ವ್ಯವಹಾರ ಹೆಚ್ಚಾಗಲಿದೆ. ಇದರಿಂದ ಮೊದಲು ಲಾಭ ಪಡೆಯಲಿರುವ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಫ್ರಾನ್ಸ್‌ನ ಶಸ್ತ್ರಾಸ್ತ್ರ ಉತ್ಪಾದನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಥಾಲೆಸ್ ಜತೆ ಸಹಭಾಗಿತ್ವ ಹೊಂದಲಿದೆ ಎಂದು ರಕ್ಷಣಾ ಇಲಾಖೆ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ದೇಶದ ಭದ್ರತೆಗೆ ಕಾರಣವಾಗುವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ರಕ್ಷಣಾ ಇಲಾಖೆ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದೆ.

ಈಗಿರುವ ಉಪಕರಣಗಳನ್ನು ಇನ್ನಷ್ಟು ನಿಟ್ಟಿನಲ್ಲಿ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಳ್ಳಲಾಗುವುದು. ಅದಕ್ಕಾಗಿ ಖಾಸಗಿ ಸಹಭಾಗಿತ್ವದ ಮೂಲಕ ವಿದೇಶದ ಅತ್ಯುನ್ನತ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುವುದು. ಹಾಗಾಗಿಯೇ ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ದಿಮೆಗಳಿಗೆ ಖಾಸಗಿ ಸಹಭಾಗಿತ್ವ ಹೊಂದಲು ಅವಕಾಶ ಕಲ್ಪಿಸಲಾಗಿದೆ.

ರಕ್ಷಣಾ ಇಲಾಖೆಯ ಉಪಕರಣಗಳ ಉತ್ಪಾದನೆಗೆ ಖಾಸಗಿ ಸಹಭಾಗಿತ್ವ ಬೇಕು ಎಂದು ಕಳೆದ ವರ್ಷ ನಿರ್ಧರಿಸಲಾಗಿತ್ತು. ಕಳೆದ ವರ್ಷ ರಕ್ಷಣಾ ಇಲಾಖೆ ಮೆಝಗಾನ್ ಡಕ್‌ಯಾರ್ಡ್ ಲಿಮಿಟೆಡ್ (ಎಂಡಿಎಲ್)ನೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿತ್ತು. ಆದರೆ ಕೆಲವು ಕಂಪೆನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT