ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಪಿಂಚಣಿ ಅದಾಲತ್‌ ಆರಂಭ

Last Updated 17 ಸೆಪ್ಟೆಂಬರ್ 2013, 6:16 IST
ಅಕ್ಷರ ಗಾತ್ರ

ಬೆಳಗಾವಿ: ರಕ್ಷಣಾ ಪಿಂಚಣಿಯ ವಿಲೇ ವಾರಿ ಹಾಗೂ ಅನುದಾನದ ಕುರಿತ ದೂರುಗಳನ್ನು ಆಲಿಸಿ ಸ್ಥಳದಲ್ಲಿಯೇ ನಿರ್ಣಯ ಕೈಗೊಳ್ಳುವ ಸಲುವಾಗಿ ಚೆನ್ನೈನ ಕಂಟ್ರೋಲರ್‌ ಆಫ್‌ ಡಿಫೆನ್ಸ್‌ ಅಕೌಂಟ್ಸ್‌ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ 119ನೇ ರಕ್ಷಣಾ ಪಿಂಚಣಿ ಅದಾಲತ್‌ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸೋಮವಾರ ಆರಂಭಗೊಂಡಿತು.

ಪಿಂಚಣಿ ಅದಾಲತ್‌ಗೆ ಚಾಲನೆ ನೀಡಿದ ಇಂಡಿಯನ್‌ ಡಿಫೆನ್ಸ್‌ ಅಕೌಂಟ್ಸ್‌ ಸರ್ವೀಸ್‌ (ಐಡಿಎಎಸ್‌)ನ ಎಡಿಶನಲ್‌ ಕಂಟ್ರೋಲರ್‌ ಜನರಲ್‌ ಆಫ್‌ ಡಿಫೆನ್ಸ್‌ ಅಕೌಂಟ್ಸ್‌ ಎನ್‌.ಆರ್‌. ಡಾಶ್‌, ‘ದೇಶದ ರಕ್ಷಣೆಗಾಗಿ ಹುತಾತ್ಮ ರಾದ ಯೋಧರ ಕುಟುಂಬದವರ ಹಾಗೂ ಸೇವೆಯಿಂದ ನಿವೃತ್ತರಾದ ಯೋಧರ ಪಿಂಚಣಿ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ರಕ್ಷಣಾ ಲೆಕ್ಕಪತ್ರ ವಿಭಾಗವು ಅದಾಲತ್‌ ಹಮ್ಮಿಕೊಂಡಿದೆ’ ಎಂದು ತಿಳಿಸಿದರು.

‘ದೇಶದಲ್ಲಿ 24.50 ಲಕ್ಷ ರಕ್ಷಣಾ ಪಿಂಚಣಿದಾರರಿಗೆ ಸರ್ಕಾರವು ವಾರ್ಷಿಕ `40,000 ಕೋಟಿ ಇಲಾಖೆಗೆ ನೀಡುತ್ತಿದೆ. ಇಷ್ಟೊಂದು ಪಿಂಚಣಿ ದಾರರ ಪಿಂಚಣಿ ನಿರ್ವಹಣೆ ಮಾಡು ವಾಗ ಕೆಲವು ಲೋಪದೋಷಗಳು ಉಂಟಾಗುತ್ತವೆ. ಅಲ್ಲದೇ ಭಾರಿ ಪ್ರಮಾಣದ ಹಣವೂ ಅಗತ್ಯವಿದೆ. ಹೀಗಿದ್ದರೂ ಪಿಂಚಣಿದಾರರ ಸಮಸ್ಯೆ ಗಳನ್ನು ನಿವಾರಿಸಲು ಇಲಾಖೆಯು ಬದ್ಧವಾಗಿದೆ’ ಎಂದು ಹೇಳಿದರು.

‘ಇಲಾಖೆಯು ಗಣಕಿಕರಣದಂತಹ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ‘ಸುವಿಗ್ಯಾ’ ಎಂಬ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳ ಲಾಗಿದ್ದು, ಪಿಂಚಣಿದಾರರು ನೀಡುವ ದಾಖಲೆಯ ಆಧಾರದ ಮೇಲೆ ಅದು ಪಿಂಚಣಿಯನ್ನು ನಿರ್ಧರಿಸುತ್ತದೆ. ಹೀಗಿದ್ದರೂ ಸಮಸ್ಯೆ ಆಗಿದ್ದರೆ, ಅದಾ ಲತ್‌ನಲ್ಲಿ ಪಿಂಚಣಿದಾರರ ಸಮಸ್ಯೆ ಗಳನ್ನು ಪರಿಹರಿಸಲಾಗುವುದು’ ಎಂದು ಹೇಳಿದರು.

‘ಜಲಂದರ್‌ನಲ್ಲಿ 1987ರಲ್ಲಿ ಮೊದಲ ಪಿಂಚಣಿ ಅದಾಲತ್‌ ನಡೆ ದಿತ್ತು. ಇದು ಬೆಳಗಾವಿಯಲ್ಲಿ 2ನೇ ಮತ್ತು ಕರ್ನಾಟಕದಲ್ಲಿ 7ನೇ ರಕ್ಷಣಾ ಪಿಂಚಣಿ ಅದಾಲತ್‌ ಆಗಿದೆ. ಇಲಾ ಖೆಯು 664 ಅರ್ಜಿಗಳನ್ನು ಸ್ವೀಕರಿ ಸಿದ್ದು, 288 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಿದೆ. ಫಲಾನುಭವಿ ಗಳಿಗೆ `1.06 ಕೋಟಿ ಬಾಕಿ ವಿತರಿಸಿದೆ’ ಎಂದು ವಿವರಿಸಿದರು.

ಮೃತ ಲೆಫ್ಟಿನಂಟ್‌ ಕರ್ನಲ್‌ ಜಿ. ನಾರಾಯಣನ್‌ ಅವರ ಪತ್ನಿಯು ` 29.47 ಲಕ್ಷ ಬಾಕಿ ಪಿಂಚಣಿಯನ್ನು ಅದಾಲತ್‌ನಲ್ಲಿ ಪಡೆದುಕೊಂಡರು. ಅದೇ ರೀತಿ ` 1 ಲಕ್ಷಕ್ಕಿಂತಲೂ ಹೆಚ್ಚಿನ ಬಾಕಿ ಹಣವನ್ನು 10 ಫಲಾನುಭವಿಗಳು ಪಡೆದುಕೊಂಡರು.

ಅಲಹಾಬಾದ್‌ನ ಐಡಿಎಎಸ್‌ನ ಸಿಡಿಎ (ಪಿಂಚಣಿ) ಲಾಲೂ ರಾಮ್‌ ಮಾತನಾಡಿದರು. ಆಂಧ್ರಪ್ರದೇಶದ ಮೇಜರ್‌ ಜನರಲ್‌ ಆರ್‌.ಜಿ. ಕೃಷ್ಣನ್‌, ಎಡಿಶನಲ್‌ ಸಿಡಿಎ ಜಾನ್‌ ಪ್ರಸಾದ್‌, ಎಂಎಲ್‌ಐಆರ್‌ಸಿ ಕಮಾಂಡಂಟ್‌ ಬ್ರಿಗೇಡಿಯರ್‌ ಸಂತೋಷ ಕುರುಪ್‌ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT