ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಕಬಡ್ಡಿ ಟೂರ್ನಿ: ವಿಜಯಾ ಬ್ಯಾಂಕ್, ಎಸ್‌ಬಿಎಂಗೆ ಜಯ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯಾ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ತಂಡಗಳು ವಿಜಯಾ ಬ್ಯಾಂಕ್ ಆಶ್ರಯದಲ್ಲಿ ಶುಕ್ರವಾರ ಆರಂಭವಾದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದವು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ `ಎ~ ಗುಂಪಿನಲ್ಲಿರುವ ವಿಜಯಾ ಬ್ಯಾಂಕ್ 63-31 ಪಾಯಿಂಟ್ಸ್‌ನಿಂದ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಂಡವನ್ನು ಮಣಿಸಿತು. ವಿಜಯಿ ತಂಡ ಮೊದಲಾರ್ಧದ ವೇಳೆಗೆ 26-13ರಲ್ಲಿ ಮುನ್ನಡೆ ಸಾಧಿಸಿತ್ತು.

ದ್ವಿತೀಯಾರ್ಧದಲ್ಲಿ 18 ಪಾಯಿಂಟ್ಸ್ ಗಳಿಸಿದ ಕ್ರೀಡಾ ಪ್ರಾಧಿಕಾರ ಸೋಲಿನಲ್ಲೂ ಗಮನ ಸೆಳೆಯಿತು. ಒಳಾಂಗಣ ಕ್ರೀಡಾಂಗಣದಲ್ಲಿ ರಬ್ಬರ್ ಮ್ಯಾಟ್ ಮೇಲೆ ಕರ್ನಾಟಕದಲ್ಲಿ ನಡೆದ ರಾಜ್ಯ ಮಟ್ಟದ ಮೊದಲ ಕಬಡ್ಡಿ ಟೂರ್ನಿ ಇದಾಗಿದೆ. ಮ್ಯಾಟ್ ಮೇಲೆ ಆಡಿ ಅಭ್ಯಾಸವಿರುವ ಪ್ರಾಧಿಕಾರದ ಆಟಗಾರರ ಚುರುಕಾದ ಕ್ಯಾಚಿಂಗ್ ಹಾಗೂ ರೈಡಿಂಗ್‌ಗಳು ಗಮನ ಸೆಳೆದವು. ಈ ತಂಡದ ಸಂತೋಷ್ ಕೊನೆಯಲ್ಲಿ ಉತ್ತಮ ದಾಳಿ ನಡೆಸಿ ಸತತ ಮೂರು ಪಾಯಿಂಟ್ ಕಲೆ ಹಾಕಿದರು.

ಎಸ್‌ಬಿಎಂಗೆ ಗೆಲುವು: ಮಾಜಿ ಅಂತರರಾಷ್ಟ್ರೀಯ ಆಟಗಾರ ರಮೇಶ್ ನೇತೃತ್ವದ ಎಸ್‌ಬಿಎಂ ತಂಡ 36-14ರಲ್ಲಿ ವಿಜಯನಗರ ತಂಡದ ಎದುರು ಸುಲಭ ಗೆಲುವು ಸಾಧಿಸಿತು. `ಬಿ~ ಗುಂಪಿನ ಈ ಪಂದ್ಯದಲ್ಲಿ ಎಸ್‌ಬಿಎಂ ಮೊದಲಾರ್ಧ ಕೊನೆಗೊಂಡಾಗ 23 ಪಾಯಿಂಟ್ಸ್ ಗಳಿಸಿದ್ದರೆ, ವಿಜಯನಗರ ಕೇವಲ ಐದು ಪಾಯಿಂಟ್ ಕಲೆ ಹಾಕಿತ್ತು.

ಇತರ ಪಂದ್ಯಗಳಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) 33-15ರಲ್ಲಿ ಎಚ್‌ಎಂಟಿ ತಂಡದ ಮೇಲೂ, ಆರ್‌ಡಬ್ಲ್ಯುಎಫ್ 54-19   ಪಾಯಿಂಟ್ಸ್‌ನಿಂದ ಎಚ್‌ಎಂಟಇ ಕಾಲೋನಿ  ಬಾಯ್ಸ ವಿರುದ್ಧವೂ, ಕೆಪಿಟಿಸಿಎಲ್ 65-40ರಲ್ಲಿ ಎಸ್‌ಎಐ ಮೇಲೂ ಗೆಲುವು ಸಾಧಿಸಿತು.

ಇನ್ನೊಂದು ಪಂದ್ಯದಲ್ಲಿ ಚುರುಕಿನ ಪ್ರದರ್ಶನ ನೀಡಿದ ಕರ್ನಾಟಕ ಪೊಲೀಸ್ ತಂಡ (ಕೆಎಪಿ) 22-16ರಲ್ಲಿ ವಿಜಯ ನಗರ ಎದುರು ಗೆಲುವು ಸಾಧಿಸಿತು. 50,000 ಬಹುಮಾನ: ಲೀಗ್ ಕಮ್ ನಾಕ್‌ಔಟ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಚಾಂಪಿಯನ್ ತಂಡ 50,000 ಬಹುಮಾನ ಹಾಗೂ ಟ್ರೋಫಿ ಪಡೆಯಲಿದೆ. ಎರಡನೇ ಸ್ಥಾನ ಪಡೆದ ತಂಡಕ್ಕೆ 30,000 ರೂಪಾಯಿ ಲಭಿಸಲಿದೆ.

ಮ್ಯಾಟ್ ಮೇಲೆ ನಡೆದ ಮೊದಲ ಟೂರ್ನಿ:ಕರ್ನಾಟಕದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿ ಒಳಾಂಗಣ ಕ್ರೀಡಾಂಗಣದ ರಬ್ಬರ್ ಮ್ಯಾಟ್ ಮೇಲೆ ನಡೆದಿರುವುದು ಇದೇ ಮೊದಲು. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಹಾಗೂ ಎಸ್‌ಎಐ ತಂಡಗಳ ಆಟಗಾರರು ಅಭ್ಯಾಸ ನಡೆಸುವುದು ರಬ್ಬರ್ ಮ್ಯಾಟ್ ಮೇಲೆಯೇ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ ರಾಜ್ಯದ ಕೆಲ ಆಟಗಾರರಿಗೆ ಮಾತ್ರ ಮ್ಯಾಟ್ ಮೇಲೆ ಆಡಿದ ಅನುಭವವಿದೆ.
`ವಿಜಯಾ ಬ್ಯಾಂಕ್, ಎಚ್‌ಎಎಲ್ ಸೇರಿದಂತೆ ಇತರ ತಂಡಗಳ ಕೆಲ ಆಟಗಾರರಿಗೆ ಮಾತ್ರ ಮ್ಯಾಟ್ ಮೇಲೆ ಆಡಿ ಅಭ್ಯಾಸವಿದೆ. ರಾಜ್ಯದಲ್ಲೂ ಮ್ಯಾಟ್ ಮೇಲೆ ಕಬಡ್ಡಿ ಟೂರ್ನಿ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ~ ಎಂದು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT