ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರೋ ರಾತ್ರಿ ತಲೆ ಎತ್ತಿದ ಮಳಿಗೆ

Last Updated 20 ಜುಲೈ 2012, 8:25 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾಧಿಕಾರಿಗಳು ಜಿಲ್ಲೆಗೆ ಮುಖ್ಯಸ್ಥರಾದರೂ ಅವರು ಹಾವೇರಿ ನಗರಕ್ಕೆ ಮುಖ್ಯಸ್ಥರಲ್ಲವೇ. ನಗರ ವ್ಯಾಪ್ತಿ ಯಲ್ಲಿ ಅವರೊಬ್ಬ ಆಟಕ್ಕುಂಟು ಲೆಕ್ಕಕ್ಕಿಲ್ಲದ ಅಧಿಕಾರಿಗಳೇ, ನಗರಸಭೆ ಆಯುಕ್ತರೇ ಈ ನಗರದ ಜಿಲ್ಲಾಧಿಕಾರಿ ಗಳೇ..?

ನಗರದ ಸ್ವಾತಿ ಹೋಟೆಲ್ ಪಕ್ಕದ ಖುಲ್ಲಾ ಜಾಗೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ ನಂತರವೂ ಯಾವುದೇ ಆತಂಕವಿಲ್ಲದೇ ನಗರಸಭೆ ಅಧಿಕಾರಿಗಳ ಸುಪರ್ದಿಯಲ್ಲಿಯೇ ಕಟ್ಟಡ ನಿರ್ಮಾಣ ಕಾಮಕಾರಿ ನಡೆದಿರುವುದು ಇಂತಹದೊಂದು ಪ್ರಶ್ನೆ ಹುಟ್ಟಿಗೆ ಕಾರಣವಾಗಿದೆ. 

`ಜಿಲ್ಲಾಧಿಕಾರಿಗಳ ಯಾವುದೇ ಆದೇಶಕ್ಕೆ ನಗರಸಭೆಯಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ನಗರಸಭೆ ಆಡಳಿತ ಮಂಡಳಿ ಹಾಗೂ ಆಯುಕ್ತರೇ ಸುಪ್ರೀಂ ಆಗಿದ್ದಾರೆ ಎಂಬುದು ಈ ಹಿಂದಿನ ಹಲ ವಾರು ಪ್ರಕರಣಗಳಲ್ಲಿ ಸಾಬೀತಾಗಿದೆ. ಈಗ ಸ್ವಾತಿ ಹೋಟೆಲ್ ಪಕ್ಕದ ಕಟ್ಟಡಗಳು ಜಿಲ್ಲಾಧಿಕಾರಿಗಳ ಆದೇಶದ ನಂತರವೂ ಯಾವುದೇ ಅಡೆತಡೆ ಯಿಲ್ಲದೇ ರಾತ್ರೋ ರಾತ್ರಿ ತಲೆ ಎತ್ತಿ ರುವುದು ಜಿಲ್ಲಾಧಿಕಾರಿಗಳ ಆದೇಶಕ್ಕೆ ಯಾವ ಬೆಲೆಯಿಲ್ಲ ಎಂಬುದು ಸ್ಪಷ್ಟವಾ ಗುತ್ತದೆ~ ಎಂದು ಹೇಳುತ್ತಾರೆ ರಮೇಶ ಮಾಳವದೆ.

ಇಲ್ಲಿನ ಸ್ವಾತಿ ಹೋಟೆಲ್ ಪಕ್ಕದಲ್ಲಿ ರುವ ಕಂದಾಯ ಇಲಾಖೆಯ ಖುಲ್ಲಾ ಜಾಗೆಯನ್ನು ಸಾರ್ವಜನಿಕ ಉದ್ದೆೀಶ ಕ್ಕಾಗಿ ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಧಿಕಾರಿಗಳು ನಗರಸಭೆಗೆ ಹಸ್ತಾಂತರಿ ಸಿದ್ದರು. ಆದರೆ, ನಗರಸಭೆ ಕೆಲ ಸದಸ್ಯರು ಹಾಗೂ ಅಧಿಕಾರಿಗಳು ಆ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡು ವುದನ್ನು ಬಿಟ್ಟು ವ್ಯಾಪಾರಸ್ಥರಿಗೆ ಮಳಿಗೆ ಗಳನ್ನು ನಿರ್ಮಿಸಿಕೊಡಲು ಮುಂದಾ ಗಿದ್ದರು.

ಇದೇ ವಿಷಯವನ್ನು ಇಟ್ಟುಕೊಂಡು ಕರೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿದರೂ ಯಾವುದೇ ತೀರ್ಮಾ ನಕ್ಕೆ ಬರಲಾಗದಿದ್ದರೂ ಠರಾವಿನಲ್ಲಿ ಮಾತ್ರ 14 ಜನ ಅಂಗಡಿಕಾರರಿಗೆ 1500 ರೂಪಾಯಿಗಳಿಗೆ ಭೂಬಾಡಿಗೆ ನೀಡಿ ಕಟ್ಟಡ ನಿರ್ಮಿಸಿಕೊಳ್ಳಲು ಅನು ಮತಿ ನೀಡಿರುವುದನ್ನು ಪ್ರಸ್ತಾಪಿಸಿ ರುವುದು ಈಗ ಇತಿಹಾಸ.

ನಗರಸಭೆ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ಮಳಿಗೆ ನಿರ್ಮಿಸುವುಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರಲ್ಲದೇ. ಕೆಲ ನಾಗರಿಕರು ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಬಾರದು. ವಾಹನ ನಿಲುಗಡೆಗೆ ಆ ಜಾಗವನ್ನು ಬಳಕೆ ಮಾಡಬೇಕೆಂಬ ಮನವಿಯೊಂದಿಗೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಭೂಬಾಡಿಗೆ ಆಧಾರದ ಮೇಲೆ ಜಾಗೆ ಪಡೆದುಕೊಂಡ ವ್ಯಾಪಾರಸ್ಥರು, ಕಳೆದ ಶನಿವಾರದಿಂದ ತರಾತುರಿಯಿಂದ ಮಳಿಗೆ ನಿರ್ಮಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಮಂಗಳ ವಾರ ಹಾವೇರಿ ನಗರದ ಸಿಟಿಎಸ್ ನಂ.752 ರ ಖುಲ್ಲಾ ಜಾಗೆ ಕುರಿತು ಉಚ್ಚ ನ್ಯಾಯಾಲಯದಲ್ಲಿ ಹಾಗೂ ಹಾವೇರಿ ಜೆಎಂಎಫ್‌ಸಿ ನ್ಯಾಯಾಲಯ ದಲ್ಲಿ ಪ್ರಕರಣದ ವಿಚಾರಣೆ ಇರುವುದ ರಿಂದ ಯಾವುದೇ ಕಾಮಗಾರಿ ಕೈಗೊ ಳ್ಳದೇ ಯಥಾಸ್ಥಿತಿ ಕಾಯ್ದುಕೊಳ್ಳ ಬೇಕೆಂದು ಆದೇಶ ಹೊರಡಿಸಿದ್ದರು.

ಆದರೆ, ನಗರಸಭೆ ಅದನ್ನು ಜಾರಿ ಗೊಳಿಸುವ ಗೋಜಿಗೆ ಹೋಗದ ಕಾರಣ, ವ್ಯಾಪಾರಸ್ಥರು ಮಂಗಳವಾರ ತಡರಾತ್ರಿವರೆಗೂ ಕಟ್ಟಡ ಕಾಮಗಾರಿ ಯನ್ನು ಪೂರ್ಣಗೊಳಿಸಿ ಬುಧವಾರ ಬೆಳಿಗ್ಗೆಯಿಂದ ಅದೇ ಕಟ್ಟಡದಲ್ಲಿ ಹಣ್ಣುಗಳನ್ನಿಟ್ಟುಕೊಂಡು ವ್ಯಾಪಾರ ಆರಂಭಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.

ಖುಲ್ಲಾ ಜಾಗೆಯನ್ನು ನಗರಸಭೆಗೆ ಹಸ್ತಾಂತರಿಸಿರುವುದು ಯಾವ ಉದ್ದೆೀಶಕ್ಕೆ ಎಂಬುದನ್ನು ಜಿಲ್ಲಾಧಿಕಾರಿ ಗಳು ನಗರದ ಜನತೆಗೆ ಸ್ಪಷ್ಟಪಡಿಸಬೇಕು. ನಾಲ್ಕೈದು ದಿನಗಳಿಂದ ಕಟ್ಟಡ ಕಾಮ ಗಾರಿ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನ ವಹಿಸಿದ್ದೇಕೆ ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸ ಬೇಕಲ್ಲದೇ, ತಮ್ಮ ಆದೇಶವನ್ನು ಪಾಲನೆ ಮಾಡದ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರದ ನಾಗರಿಕರು ಒತ್ತಾಯಿಸಿದ್ದಾರೆ.

ಕಾಮಗಾರಿ ನಡೆದಿಲ್ಲ: ಜಿಲ್ಲಾಧಿಕಾರಿ ಗಳು ಆದೇಶ ಹೊರಡಿಸಿದ ನಂತರ ಯಾವುದೇ ಕಾಮಗಾರಿ ಸ್ಥಗಿತಗೊಳಿಸಿ ಯಥಾಸ್ಥಿತಿಗೆ ಕಾಯ್ದುಕೊಳ್ಳಲಾಗಿದೆ. ವ್ಯಾಪಾರಸ್ಥರು ಅಂಗಡಿಗಳನ್ನು ಇಟ್ಟು ಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಅಷ್ಟೆ ಎಂದು ನಗರಸಭೆ   ಆಯುಕ್ತ     ಎಚ್.ಕೆ.ರುದ್ರಪ್ಪ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT