ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಪತ್ರೆ

Last Updated 16 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಹೆಚ್ಚಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಹೆಚ್ಚಾಗಿದೆ. ಅಡಿಕೆಯ ಮೇಲೆ ಅವಲಂಬನೆಯಾದ ರೈತರು ಕಷ್ಟದಲ್ಲಿದ್ದಾರೆ. ಆದರೆ ಅಡಿಕೆಯ ಜತೆಯಲ್ಲಿ ತೆಂಗು, ಹಲಸು, ಬಾಳೆ, ಮಾವು, ರಾಮಪತ್ರೆ, ಜಾಯಿಕಾಯಿ, ಅನಾನಸ್ ಮತ್ತು ತರಕಾರಿ ಇತ್ಯಾದಿ ಹಲವು ಬೆಳೆಗಳನ್ನು ಬೆಳೆಯುತ್ತಿರುವ ರೈತರು ಸ್ವಲ್ಪಮಟ್ಟಿಗೆ ನೆಮ್ಮದಿಯಿಂದ ಇದ್ದಾರೆ.

ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಕೈ ಹಿಡಿಯುತ್ತದೆ. ಉಪ ಬೆಳೆಗಳಿಂದ ಬರುವ ಆದಾಯ ಜೀವನ ನಿರ್ವಹಣೆಗೆ ಸಾಕಾಗುತ್ತದೆ.  ಸ್ವಲ್ಪ ಆದರೆ ಉಪ ಬೆಳೆಗಳ ಮೇಲೆ ಅವಲಂಬನೆಯಾಗಿರುವ ರೈತ ಮೊಗ್ಗುರು ಗ್ರಾಮದ ಸರಳಿ ಕೃಷ್ಣ ಭಟ್ ಅವರ ಮುಖದಲ್ಲಿ ಆ ಚಿಂತೆ ಕಾಣುತ್ತಿಲ್ಲ.

ಭಟ್ಟರು ಒಂದೂವರೆ ಎಕರೆ ಜಮೀನಿನಲ್ಲಿ ಐವತ್ತಕ್ಕೂ ಹೆಚ್ಚು ರಾಮ ಪತ್ರೆ ಮರಗಳನ್ನು ಬೆಳೆಸಿದ್ದಾರೆ. ರಾಮಪತ್ರೆ ಅವರ ಚಿಂತೆಯನ್ನು ಸ್ವಲ್ಪಮಟ್ಟಿಗೆ ದೂರಾಗಿಸಿದೆ.
ಮಾರುಕಟ್ಟೆಯಲ್ಲಿ ಈಗ ಒಂದು ಕೇಜಿ ರಾಮ ಪತ್ರೆ ಹೂವಿಗೆ 420 ರೂ ಬೆಲೆ ಇದೆ.

ಮರಗಳ ನಿರ್ವಹಣೆ ವೆಚ್ಚ ಕಡಿಮೆ ಇರುವುದರಿಂದ ರಾಮಪತ್ರೆ ಬೆಳೆಯುವುದು ಲಾಭದಾಯಕ. ಮರಗಳಿಗೆ ಗೊಬ್ಬರದ ಅವಶ್ಯಕತೆ ಇಲ್ಲ. ಮಳೆಯ ನೀರು ಮತ್ತು ಉಳಿದ ಸಮಯದಲ್ಲಿ ತೋಟದ ಇತರ ಬೆಳೆಗಳಿಗೆ ಕೊಡುವ ನೀರು ಬಳಸಿಕೊಂಡು ರಾಮಪತ್ರೆ ಗಿಡಗಳು ಬೆಳೆಯುತ್ತವೆ.

ರಾಮ ಪತ್ರೆ ಗಿಡವನ್ನು ನೆಟ್ಟ ಬಳಿಕ ಸುಮಾರು ಹತ್ತರಿಂದ ಹದಿನೈದು ವರ್ಷದಲ್ಲಿ ಫಸಲು ಬರಲು ಪ್ರಾರಂಭವಾಗುತ್ತದೆ. ಒಂದು ಮರ ಸುಮಾರು ನೂರಾಐವತ್ತು ವರ್ಷ ಬಾಳಿಕೆ ಬರುವುದಲ್ಲದೆ ಪ್ರತಿ ಎರಡು ವರ್ಷಕ್ಕೊಮ್ಮೆ ಫಲ ನೀಡುತ್ತವೆ. ರಾಮ ಪತ್ರೆ ಸಸಿಯನ್ನು ಜೂನ್ ನಿಂದ ಜುಲೈ ತಿಂಗಳಲ್ಲಿ ನಾಟಿ ಮಾಡಬೇಕು.
 
ಒಂದು ಬೆಳೆದ ಮರದಿಂದ ಸುಮಾರು 65ಕೆ.ಜಿಯಷ್ಟು ಹೂ ಪಡೆಯಬಹುದು. ರಾಮಪತ್ರೆ ಮರಗಳನ್ನು ಬೆಳೆಸುವುದರಿಂದ ಕಾಡು ಉಳಿದಂತೆ ಆಗುತ್ತದೆ. ಬೆಳೆದ ರೈತರಿಗೆ ಇದು ಪೂರಕ ಆದಾಯ ಸಿಗುತ್ತದೆ. ರಾಮಪತ್ರೆ  ಹೂಗಳಿಂದ ಎಣ್ಣೆ ತೆಗೆಯಬಹುದು. ಎಣ್ಣೆಗೂ ಮಾರುಕಟ್ಟೆಯಲ್ಲಿ ಬೆಲೆ ಇದೆ.

ಭಟ್ಟರ ಆರು ಎಕರೆ ತೋಟದಲ್ಲಿ 2,500 ಮಂಗಳ, ಶ್ರಿ ಮಂಗಳ, ಮೋಹಿತ್ ನಗರ ತಳಿಯ ಅಡಿಕೆ ಮರಗಳಿವೆ. ನೂರಕ್ಕೂ ಹೆಚ್ಚು ಏಲಕ್ಕಿ ಗಿಡಗಳಿವೆ. ತೋಟದಲ್ಲಿ  ಔಷಧೀಯ ಸಸ್ಯಗಳು ಹಾಗೂ ಗಜನಿಂಬೆ, ಜಾಯಿಕಾಯಿ ಮರಗಳಲ್ಲದೆ ವಿವಿಧ ತಳಿಯ ತೆಂಗು, ಹಲಸು, ವೆನಿಲ್ಲಾ, ಮೆಣಸು, ಚಿಕ್ಕು, ಅನಾನಸ್ ಸೇರಿದಂತೆ ತರಕಾರಿ ಬೆಳೆಗಳಿವೆ. ಮೂರು ಎಕರೆಯಲ್ಲಿ 600 ರಬ್ಬರ್ ಗಿಡಗಳನ್ನೂ ಬೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT