ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರಾಮಕಥಾ' ಆರಂಭ

Last Updated 12 ಡಿಸೆಂಬರ್ 2012, 9:13 IST
ಅಕ್ಷರ ಗಾತ್ರ

ಕುಮಟಾ: ` ಈ ಜಗತ್ತಿನಲ್ಲಿ ರಾಮಾಯಣ ಮಹಾ ಕಾವ್ಯಕ್ಕೆ ಸಮನಾದ  ಕಾವ್ಯ ಮತ್ತೊಂದಿಲ್ಲ. ರಾಮನಂಥ ನಾಯಕನಿಲ್ಲ, ಸೀತೆಯಂಥ ಸತಿಯಿಲ್ಲ. ರಾಮಸಾಗರವನ್ನು ಮಾತುಗಳ ಹರಿಗೋಲಿನಿಂದ ದಾಟುವ ಪ್ರಯತ್ನವೇ ರಾಮಕಥಾ' ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಜಿ  ಹೇಳಿದರು.

ತಾಲ್ಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯದ ರಾಮ ಲೀಲಾ ಮೈದಾನದಲ್ಲಿ ಸೋಮವಾರ ಆರಂಭವಾದ `ರಾಮಕಥಾ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರಾಮ ಕಥೆ'ಯಲ್ಲಿ ಪ್ರಾಣವಾಯುವಾದ ಮುಖ್ಯಪ್ರಾಣನೇ ರಾಮ ಕಥೆಯ ಕೇಂದ್ರ ಎಂದರು. 

ಆರಂಭದಲ್ಲಿ ಗಜಾನನ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂ.ಕೆ.ಹೆಗಡೆ, ಜಿ.ಎಸ್.ಹೆಗಡೆ, ಡಾ.ಜಿ.ಜಿ.ಹೆಗಡೆ, ಡಾ. ಸೀತಾಲಕ್ಷ್ಮಿ ಹೆಗಡೆ, ನಿವೃತ್ತ ಪ್ರಾಚಾರ್ಯ ಎಸ್. ಶಂಭು ಭಟ್ಟ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಟಿ.ಹೆಗಡೆ. ಉದ್ಯಮಿ ಮುರಳೀಧರ ಪ್ರಭು, ವಿ.ಆರ್.ನಾಯಕ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT