ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಬಾಗ: ಬೆಳ್ಳುಳ್ಳಿ ಕುಸಿದ ಬೆಲೆ

Last Updated 1 ಮೇ 2012, 7:50 IST
ಅಕ್ಷರ ಗಾತ್ರ

ರಾಯಬಾಗ: ಭೀಕರ ಬರಗಾಲದಲ್ಲಿ  ಕಾಯಿಪಲ್ಲೆಗಳ ಬೆಲೆ ಗಗನಮುಖಿಯಾಗಿ ಕೆ.ಜಿಗೆ ರೂ 60ಕ್ಕಿಂತ ಹೆಚ್ಚಿದ್ದರೂ  ಸಹ ಬೆಳ್ಳುಳ್ಳಿ ಕೇವಲ ಕೆ.ಜಿ.ಗೆ ರೂ 20 ಮಾರಾಟವಾಗುತ್ತಿದೆ.

ಸಂತೆಯಲ್ಲಿ ಯಾವುದೇ ಕಾಯಿಪಲ್ಲೆ ಕಾಲ ಕೆ.ಜಿ.ಗೆ ರೂ 10ರಿಂದ 15 ವರೆಗೆ ಬೆಲೆ ಇದೆ. ಆದರೆ ಬೆಳ್ಳುಳ್ಳಿಯನ್ನು ಯಾರೂ ಕೇಳುವರಿಲ್ಲ.  ಇದೇ ಬೆಳ್ಳುಳ್ಳಿ ಜನವರಿ ತಿಂಗಳಲ್ಲಿ ಕೆ.ಜಿ.ಗೆ ರೂ 150ರಿಂದ 200 ಮಾರಾಟ ವಾಗುತ್ತಿತ್ತು.

ಈ ಸಲ ಮಹಾರಾಷ್ಟ್ರದಲ್ಲಿ ಅತಿಯಾಗಿ ಬೆಳೆದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಸಾಂಗಲಿಯಿಂದ ತಾಲ್ಲೂಕಿನ  ಸಂತೆಗೆ ಬೆಳ್ಳುಳ್ಳಿ ಮಾರಾಟಕ್ಕೆ ತರುತ್ತಾರೆ.

 `ಸೋಮವಾರದಂದು  5 ಕ್ವಿಂಟಾಲ್ ತಂದಿದ್ದು ಗ್ರಾಹಕರು ಬಹಳ ಕಡಿಮೆ ಖರೀದಿಸುತ್ತಿದ್ದಾರೆ. ಅನೇಕ ಬೆಳ್ಳುಳ್ಳಿ ವ್ಯಾಪಾರಸ್ಥರು  ಸಾಂಗಲಿ ಯಿಂದ ಬೆಳ್ಳುಳ್ಳಿ ವ್ಯಾಪಾರಕ್ಕೆ ತಂದಿದ್ದಾರೆ.  ತಾನು ಶನಿವಾರ ಬಾಗಲಕೋಟಿಯ ವಾರದ ಸಂತೆಯಲ್ಲಿ 18 ಕ್ವಿಂಟಾಲ್ ಬೆಳ್ಳುಳ್ಳಿ ಮಾರಾಟ ಮಾಡಿದ್ದು, ರಾಯಬಾಗದಲ್ಲಿ 5 ಕ್ವಿಂಟಾಲ್ ಬೆಳ್ಳುಳ್ಳಿ ಮಾರಾಟ ಮಾಡುವುದಾಗಿ  ವ್ಯಾಪಾರಿ ಅಲಿಸಾಬನ ಹೇಳುತ್ತಾನೆ .

ಬರಗಾಲದಲ್ಲಿ ತರಕಾರಿಗಳ ಬೆಲೆ ವಿಪರೀತವಾಗಿ ಏರಿರುತ್ತಿರುವಾಗ ಬೆಳ್ಳುಳ್ಳಿಗೆ ಮಾತ್ರ ಬೆಲೆ ಇಲ್ಲದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT