ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯರ ಮಧ್ಯಾರಾಧನಾ ಮಹೋತ್ಸವದಲ್ಲಿ

Last Updated 14 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿ: ಬೆಳಿಗ್ಗೆ 7.30 ವಿಶೇಷ ಫಲ ಪಂಚಾಮೃತಾಭಿಷೇಕ. ಸಂಜೆ 7ಕ್ಕೆ ಶಂಕರ್ ಶಾನುಬೋಗ್ ಅವರಿಂದ ಭಕ್ತಿಗೀತೆಗಳು.ಸ್ಥಳ: 1106, 6ನೇ ಮುಖ್ಯ ರಸ್ತೆ, ಪ್ರಕಾಶ ನಗರ. ಸಂಜೆ 6.

ದೇವಗಿರಿ ಶ್ರೀ ಗುರುಸೇವಾ ಸಮಿತಿ: ಆರಾಧನಾ ಮಹೋತ್ಸವ  ಪ್ರಯುಕ್ತ ಸೋಮವಾರ ತೇಜಸ್ವಿ ರಘುನಾಥ್ ಅವರಿಂದ ವೇಣು ವಾದನ.
ಸ್ಥಳ: 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30.

ಶ್ರೀ ರಾಘವೇಂದ್ರ ಸೇವಾ ಸಮಿತಿ: ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 340ನೇ ಆರಾಧನಾ ಮಹೋತ್ಸವ ಮತ್ತು ಶ್ರೀಕೃಷ್ಣ ಜಯಂತಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜೆ. ಸಂಜೆ 6.30ಕ್ಕೆ ಡಾ. ವಿನಾಯಕಾಚಾರ್ ಅವರಿಂದ `ಶ್ರೀ ರಾಘವೇಂದ್ರ ವೈಭವ~ ಪ್ರವಚನ.
ಸ್ಥಳ: 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ. ಸಂಜೆ 6.

ಶ್ರೀ ರಾಘವೇಂದ್ರ ಗುರುಸೇವಾ ಮಂಡಳಿ: ಬೆಳಿಗ್ಗೆ 7ಕ್ಕೆ `ಸುಮದ್ವ ವಿಜಯ~ ಪಾರಾಯಣ, 7.30ಕ್ಕೆ ಪಂಚಾಮೃತ ಅಭಿಷೇಕ, 11ಕ್ಕೆ ಅಲಂಕಾರ ಸೇವೆ. ಸಂಜೆ 6.30ಕ್ಕೆ ಭಾಗ್ಯಲಕ್ಷ್ಮಿ ಮತ್ತು ತಂಡದಿಂದ ಸಂಗೀತ. ರಾತ್ರಿ 8.30ಕ್ಕೆ ಪ್ರಹ್ಲಾದರಾಜರ ಪಲ್ಲಕ್ಕಿ ಉತ್ಸವ.  ಸ್ಥಳ; 145, 13ನೇ ಎ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಗೋಕುಲ 1ನೇ ಹಂತ, ಮತ್ತಿಕೆರೆ.

ಗುರುರಾಜ ಸೇವಾ ಸಮಿತಿ: ವಿಶೇಷ ಪೂಜೆ, ಸಂಜೆ 6.30ಕ್ಕೆ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸವಾಣಿ ವಿಶೇಷ ಕಾರ್ಯಕ್ರಮ. ಸ್ಥಳ: ಯಲಹಂಕ ಉಪನಗರ.

ನವ ಮಂತ್ರಾಲಯ ಮಂದಿರ: ತ್ರಿಕಾಲ ಪೂಜೆ. ಸಂಜೆ 6.30ಕ್ಕೆ ಪದ್ಮಾ ಅಡಿಗ ಮತ್ತು ಕುಮಾರಿ ಹಿರಣ್ಮಯಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಸ್ಥಳ: ನಂ.52, ದೊಡ್ಡ ಬಸವಣ್ಣ ಗುಡಿ ರಸ್ತೆ, ಬಸವನಗುಡಿ.

ಶ್ರೀ ಕೃಷ್ಣ ಮತ್ತು ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ: ಬೆಳಿಗ್ಗೆ 10ಕ್ಕೆ ಹರಪನಹಳ್ಳಿಯ ಪರಿಮಳ ಭಜನಾ ಮಂಡಳಿಯಿಂದ ಭಜನೆ. ಸಂಜೆ 6.30ಕ್ಕೆ ಕೃಷ್ಣೇಂದ್ರ ವಾಡೇಕರ್ ಅವರಿಂದ ದಾಸವಾಣಿ. ಸ್ಥಳ: ನಂ.770/ಎ 8ನೇ ಅಡ್ಡ ರಸ್ತೆ, ಗಿರಿನಗರ.

ಶ್ರೀ ರಾಘವೇಂದ್ರ ಸೇವಾ ಸಮಿತಿ: ಬೆಳಿಗ್ಗೆ 9.30ಕ್ಕೆ ಶ್ರೀನಿವಾಸ ತಂತ್ರಿ ಮತ್ತು 10.30ಕ್ಕೆ ಆಯನೂರು ಮಧುಸೂದನಾಚಾರ್ಯ ಅವರಿಂದ ಪ್ರವಚನ. ನಂತರ ಜಯತೀರ್ಥಚಾರ್ ಮಳಗಿ ಅವರಿಗೆ `ಶ್ರೀ ಪ್ರಹ್ಲಾದ~ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ. ಸಂಜೆ 6.30ಕ್ಕೆ ವೀಣಾ ದೊರೆಸ್ವಾಮಿ ಅಯ್ಯಂಗಾರ್ ಅವರ ಮಗ ಡಿ. ಬಾಲಕೃಷ್ಣ ಅವರಿಂದ ವೀಣಾವಾದನ. ಸ್ಥಳ: 6ನೇ ಅಡ್ಡ ರಸ್ತೆ, ಎನ್‌ಜಿಇಎಫ್ ಬಡಾವಣೆ, ರಾಜಮಹಲ್ ವಿಲಾಸ್ 2ನೇ ಹಂತ. ಸಂಜಯನಗರ.

ಉಡುಪಿ ಶ್ರೀ ಫಲಿಮಾರು ಮಠ: ಬೆಳಿಗ್ಗೆ 10.30ಕ್ಕೆ ಕಟೀಲು ಲಿಂಗಪ್ಪ ಸೇರಿಗಾರ ಮತ್ತು ತಂಡದವರಿಂದ ನಾದಸ್ವರ ವಾದನ. ಸಂಜೆ 6ಕ್ಕೆ ಶ್ರೀಧರ್ ಸಾಗರ್ ಮತ್ತು ಬಳಗದವರಿಂದ ಸ್ಯಾಕ್ಸೋಪೋನ್. ಸಂಜೆ 7.30ಕ್ಕೆ ವಿದ್ಯದೀಶ ಶ್ರೀಗಳಿಂದ ಪ್ರವಚನ.
ಸ್ಥಳ: ಶ್ರೀರಾಮಾಂಜನೇಯ ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿ, ನಂ.330, 13ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರ.

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ: ಬೆಳಿಗ್ಗೆ 10ಕ್ಕೆ ಪಂಡಿತ ಮಾದನೂರು ಪವಮಾನಾಚಾರ್ಯ ಅವರಿಂದ `ಶ್ರೀ ರಾಘವೇಂದ್ರ ವಿಜಯ~ ಪ್ರವಚನ. ಸಂಜೆ 6ಕ್ಕೆ ರಜತ ಮಹೋತ್ಸವ, ಸ್ವಸ್ತಿವಾಚನ. ಅನುರಾಧಾ ಅವರಿಂದ ವೀಣಾವಾದನ. ಸ್ಥಳ: ಸೀತಾಪತಿ ಅಗ್ರಹಾರ.

ಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ: ರಜತ ಪಲ್ಲಕ್ಕಿ ಉತ್ಸವ. ಸಂಜೆ 7.30ಕ್ಕೆ ರಾಯಚೂರು ಶೇಷಗಿರಿದಾಸ ಅವರಿಂದ ದಾಸವಾಣಿ.
ಸ್ಥಳ; ಶೇಷಾದ್ರಿಪುರ ಪ್ಲಾಟ್‌ಫಾರಂ ರಸ್ತೆ.

ವ್ಯಾಸರಾಜ ಮಠ (ಸೋಸಲೆ): ಬೆಳಿಗ್ಗೆ ವಿಶೇಷ ಪೂಜೆ. 10ಕ್ಕೆ ಪ್ರವಚನ. ಸಂಜೆ 5ಕ್ಕೆ ಅಖಿಲ ಭಾರತ ಮಾಧ್ವ ಮಹಾ ಮಂಡಳಿಯಿಂದ ದಾಸರ ಪದಗಳು. ಸಂಜೆ 7ಕ್ಕೆ ಹರಿಕಥಾ ವಿದ್ವಾನ್ ಎಸ್.ಎನ್.ಸುರೇಶ್ ಅವರಿಂದ `ಕಲಿಯುಗ ಕಲ್ಪತರು ಶ್ರೀರಾಘವೇಂದ್ರ ತೀರ್ಥರ ಚರಿತೆ~್ರ ಹರಿಕಥೆ. ಸ್ಥಳ: ಸುಬ್ರಹ್ಮಣ್ಯನಗರ. ಮಾಹಿತಿಗೆ: 2337 3059.

ವ್ಯಾಸರಾಜ ಮಠ (ಸೋಸಲೆ):  ಬೆಳಿಗ್ಗೆ ವಿಶೇಷ ಪೂಜೆ. 10ಕ್ಕೆ ಶ್ರೀಪಾದಾಚಾರ್ ಅವರಿಂದ `ರಾಘವೇಂದ್ರ ವಿಜಯ~ ಪ್ರವಚನ. 11ಕ್ಕೆ ರಾಜಬೀದಿ ರಥೋತ್ಸವ. ಸಂಜೆ 6.30ಕ್ಕೆ ನಾಟ್ಯ ಮಂಜರಿ ತಂಡದವರಿಂದ `ಭಕ್ತೆ ಕುಸುಮಾಂಜರಿ~ ಭರತನಾಟ್ಯ. ಸ್ಥಳ: ನಂ.1, ಬೆಣ್ಣೆ ಗೋವಿಂದಪ್ಪ ರಸ್ತೆ, ಬಸವನಗುಡಿ.

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ: ಬೆಳಿಗ್ಗೆ ವಿಶೇಷ ಪೂಜೆ. ಹರಿವಾಯು ಭಜನಾ ಮಂಡಳಿ, ವಿದ್ಯಾಮಾನ್ಯ ಭಜನಾ ಮಂಡಳಿಯಿಂದ ಭಜನೆ. ಸಂಜೆ 5.30ಕ್ಕೆ ಶಾಂತಾ ಕಿಶೋರ ರಾವ್ ಅವರಿಂದ ವೀಣಾವಾದನ. ಎಚ್. ಬದರಿನಾಥಾಚಾರ್ಯ ಮತ್ತು ಮಳಗಿ ಜಯತೀರ್ಥಾಚಾರ್ಯ ಅವರಿಂದ ಪ್ರವಚನ.  ಸ್ಥಳ; ಪೂರ್ಣಪ್ರಜ್ಞ ನಗರ. ಮಾಹಿತಿಗೆ: 2669 3974.

ಮುಖ್ಯ ಪ್ರಾಣ ರಾಘವೇಂದ್ರ ಸ್ವಾಮಿ  ಸನ್ನಿಧಿ: ಆನಂದ ಬಳಗ ಮಹಿಳಾ ಸದಸ್ಯರಿಂದ ದೇವರನಾಮ, ಚಾಮರಾಜಪೇಟೆ ನೃತ್ಯ ಕುಟೀರದ ದೀಪಾ ಭಟ್ ಅವರ ಶಿಷ್ಯರಿಂದ ನೃತ್ಯ. ಸ್ಥಳ; ಕಾಣಿಯೂರು ಮಠ, ನಂ.137/4ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ. ಸಂಜೆ 5.30. ಮಾಹಿತಿಗೆ: 94805 31005

ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ: ಬೆಳಿಗ್ಗೆ ವಿಶೇಷ ಪೂಜೆ. ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ. ಸಂಜೆ 5.30ಕ್ಕೆ ವೇಣುಗೋಪಾಲಾಚಾರ್ಯ ಅವರಿಂದ `ರಾಯರ ಮಹಿಮೆ~ ಪ್ರವಚನ ಮತ್ತು ಇಂದಿರಾ ದತ್ತಾತ್ರೇಯ ಶರ್ಮಾ  ಮತ್ತು ತಂಡದಿಂದ ದೇವರನಾಮಗಳು.  ಸ್ಥಳ: 2ಸಿಎ 13ನೇ ಮುಖ್ಯ ರಸ್ತೆ, 4ನೇ ಟಿ ಬಡಾವಣೆ, ಜಯನಗರ.

ಅಕ್ನೂರು ಶ್ರೀ ರಾಘವೇಂದ್ರಸ್ವಾಮಿಗಳ ಸನ್ನಿಧಿ: ಬೆಳಿಗ್ಗೆ ಕನಕಾಭಿಷೇಕ, ವಿಶೇಷ ಪೂಜೆ. ಸಂಜೆ 6ಕ್ಕೆ ಕಡಪ ಹನುಮೇಶಾಚಾರ್ ಮತ್ತು ತಂಡದಿಂದ ಕೊಳಲು ವಾದನ. ಸ್ಥಳ: 3ನೇ ಕ್ರಾಸ್, ಗವಿಪುರಂ ಬಡಾವಣೆ. 

ಬನಶಂಕರಿ ಶ್ರೀ ಸರ್ವಜ್ಞ ಸೇವಾ ಬಳಗ: ವೀಣಾ ವಾರುಣಿ ಮತ್ತು ತಂಡದಿಂದ ವೀಣಾ ವಾದನ, ಗಾಯನ. ಸ್ಥಳ: ಬನಶಂಕರಿ 3ನೇ ಘಟ್ಟ, 2ನೇ ಹಂತ, ಹೊಸಕೆರೆಹಳ್ಳಿ. ಸಂಜೆ 7.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT