ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ. 114 ಕೋಟಿ ಬಿಡುಗಡೆ: ಬೊಮ್ಮಾಯಿ

Last Updated 12 ಫೆಬ್ರುವರಿ 2011, 9:00 IST
ಅಕ್ಷರ ಗಾತ್ರ


ಕೃಷ್ಣರಾಜಪೇಟೆ: ತಾಲ್ಲೂಕಿನ ಹೇಮಗಿರಿ ಮತ್ತು ಮಂದಗೆರೆ ನಾಲೆ ಗಳ ದುರಸ್ತಿಗೆ ರಾಜ್ಯ ಸರ್ಕಾರ 114 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಈ ಕಾಮಗಾರಿಗಳನ್ನು ಮಳೆಗಾಲ ಕಳೆದ ನಂತರ ಆರಂಭಿಸಲಾಗುವುದು ಎಂದು ರಾಜ್ಯದ ಭಾರಿ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.ತಾಲ್ಲೂಕಿನ ಹೊಸಹೊಳಲು ಮೇಲ್ಗಾಲುವೆ, ಉದ್ದೇಶಿತ ಚಟ್ಟಂಗೆರೆ ಏತ ನೀರಾವರಿ ಯೋಜನೆ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದಿರುವ ನೀರಾವರಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ನಂತರ ಚಟ್ಟಂಗೆರೆಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಈ ಎರಡು ನಾಲೆಗಳನ್ನು ಆಧುನೀ ಕರಣಗೊಳಿಸಲು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಸಂಕಲ್ಪ ಮಾಡಿದ್ದಾರೆ. ಈ ಕಾಮಗಾರಿಯಿಂದ ಸುಮಾರು 21 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಆದ್ದರಿಂದ ಈ ಭಾಗದ ರೈತರು ತಮ್ಮ ಬೇಸಿಗೆ ಬೆಳೆಯ ನಂತರ, ಬೇರೆ ಬೆಳೆ ಬೆಳೆಯದೆ ಕಾಮಗಾರಿ ನಡೆಸಲು ಅನುವು ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.

ಹೊಸಹೊಳಲು ಮೇಲ್ಗಾಲುವೆ ಕಾಮಗಾರಿಯ ಉಳಿದ ಕೆಲಸವನ್ನು ಶೀಘ್ರವಾಗಿ ಮುಗಿಸಿ, ಮುಂದಿನ 15 ದಿನಗಳ ಒಳಗಾಗಿ ರೈತರ ಕೃಷಿಭೂಮಿಗೆ ನೀರು ಹರಿಸಬೇಕು. ತೆಂಡೆಕೆರೆ ಗ್ರಾಮದಲ್ಲಿರುವ ನಂ.13ನೇ ಹೇಮಾವತಿ ಕಚೇರಿ ಇದ್ದ ಸ್ಥಳವನ್ನು ಗ್ರಾ.ಪಂ ಕಚೇರಿ ಹಾಗೂ ಸರ್ಕಾರಿ ಪ್ರೌಢ ಶಾಲೆ ನಿರ್ಮಾಣಕ್ಕೆ ಅನುಕೂಲ ವಾಗುವಂತೆ ಸಂಬಂಧಿಸಿದ ಇಲಾಖೆ ಗಳಿಗೆ ವರ್ಗಾಯಿಸಬೇಕು. ಪಟ್ಟಣದ ಹೊಸಹೊಳಲು ರಸ್ತೆಯಲ್ಲಿನ ಹೇಮಾ ವತಿ ವಸತಿ ಗೃಹ ಕಟ್ಟಡದಲ್ಲಿ ನಡೆಯುತ್ತಿರುವ ಮಹಿಳಾ ಸರ್ಕಾರಿ ಕಾಲೇಜಿನ ನೂತನ ಕಟ್ಟಡ ನಿರ್ಮಾ ಣಕ್ಕೆ ಸೂಕ್ತ ಸ್ಥಳವನ್ನು ಗುರುತಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಕೆ.ಬಿ.ಚಂದ್ರಶೇಖರ್, ಹೇಮಾವತಿ ಜಲಾಶಯದ ಮುಖ್ಯ ಎಂಜಿನಿಯರ್ ಜಯಪ್ರಕಾಶ್, ಚನ್ನ ಾಯ ಪಟ್ಟಣ ವಿಭಾಗದ ಅಧೀಕ್ಷಕ ಎಂಜಿನಿಯರ್ ಬಾಲಸುಬ್ರಹ್ಮಣ್ಯ, ಮೈಸೂರು ವಿಭಾಗದ ಆಧೀಕ್ಷಕ ಎಂಜಿನಿಯರ್ ಪ್ರಸನ್ನ, ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜು, ಮುಖಂಡರಾದ ಎಸ್.ಸಿ.ಅರವಿಂದ್, ಬಿ.ವರದರಾಜೇಗೌಡ, ಬಿ.ಜವರಾಯಿ ಗೌಡ, ಕೆ.ಟಿ.ಗಂಗಾಧರ್, ಬ್ಯಾಂಕ್ ಪರಮೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT