ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 2.5 ಕೋಟಿ-ರಸ್ತೆಗೆ ಚಾಲನೆ

Last Updated 4 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಗಂಗಾವತಿ: ಐದನೇ ಹಂತದ ಸುವರ್ಣಗ್ರಾಮ ಯಜನೆಯಡಿಯಲ್ಲಿ ಕನಕಗಿರಿ ಕ್ಷೇತ್ರದ ಎಂಟು ಗ್ರಾಮಗಳು ಆಯ್ಕೆಯಾಗಿವೆ. ಯೋಜನೆಯಡಿ ವಿವಿಧ ಸೌಲಭ್ಯಕ್ಕೆ ಒಟ್ಟು 7.32 ಕೋಟಿ ರೂಪಾಯಿ ಅನುದಾನ ದೊರೆತಿದೆ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು.

ತಾಲ್ಲೂಕಿನ ಆಚಾರ ನರಸಾಪುರ ಗ್ರಾಮದಲ್ಲಿ ಬುಧವಾರ ಲೋಕೋಪಯೋಗಿ ಇಲಾಖೆಯ 5054ರ ಯೋಜನೆಯಲ್ಲಿ 2.5 ಕೋಟಿ ಮೊತ್ತದಲ್ಲಿ ಕೈಗೊಂಡ 11 ಕಿ.ಮೀ, ರಸ್ತೆ ಡಾಂಬರೀಕರಣ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಮರಳಿಯ ಆರ್.ಜಿ. ರಸ್ತೆಯಿಂದ ಆಚಾರ ನರಸಾಪುರ, ಮುಷ್ಟೂರು, ಕುಂಟೋಜಿ ಮೂಲಕ ಬರಗೂರಿಗೆ ಸಂಪರ್ಕ ಕಲ್ಪಿಸುವ ರಿಂಗ್‌ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಒಂಭತ್ತು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಗುಣಮಟ್ಟದಲ್ಲಿ ರಾಜೀಯಿರದು ಎಂದರು.

ಸುವರ್ಣ ಗ್ರಾಮಕ್ಕೆ ಆಯ್ಕೆಯಾದ ಚಿಕ್ಕಜಂತಕಲ್ ರೂ, 98 ಲಕ್ಷ, ಢಣಾಪುರ 82.81, ಉಳೇನೂರು 77.22, ಚಿಕ್ಕಮಾದಿನಾಳ 64.51, ಸಿಂಗನಾಳ 81.62, ಹುಲಸನಹಟ್ಟಿ 24.81 ಲಕ್ಷ ಹಾಗೂ ಯರಡೋಣಿ 1.72 ಮರ್ಲಾನಹಳ್ಳಿ, 1.30 ಕೋಟಿಗೆ ಮಂಜೂರಾತಿ ದೊರೆತಿದೆ ಎಂದರು.   


ಕ್ಷೇತ್ರದ ಕನಕಗಿರಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ನಿತ್ಯ ಕನಿಷ್ಠ 16 ಮೆಗಾವ್ಯಾಟ್ ವಿದ್ಯುತ್ ಬೇಕು. ಆದರೆ ಕುಷ್ಟಗಿ ವಿತರಣಾ ಕೇಂದ್ರದಿಂದ ಪೂರೈಕೆ ಆಗುತ್ತಿರುವುದು 6 ಮೆ.ವ್ಯಾ ಮಾತ್ರ ಹೀಗಾಗಿ ಕ್ಷೇತ್ರದಾದ್ಯಂತ ಸಮಸ್ಯೆ ತಲೆದೋರಿದೆ ಎಂದರು.

ಈ ಬಗ್ಗೆ ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಲು ಹೋದಾಗ ಸೌಜನ್ಯಕ್ಕೂ ಸ್ಪಂದಿಸುವ ಯತ್ನ ಮಾಡಲಿಲ್ಲ. ಬೇಜವಾಬ್ದಾರಿಯ ಮತನ್ನಾಡಿದರು. ಸರ್ಕಾರ ರೈತರೊಂದಿಗೆ ಆಟವಾಡುತ್ತಿದೆ ಎಂದು ಶಾಸಕ ದೂರಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿಲ್ಲಿ ಕೊಂಡಯ್ಯ, ಅಮರೇಶ ಕುಳಗಿ, ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತಪ್ಪ ಮುಷ್ಟೂರು, ಗುತ್ತಿಗೆದಾರರಾದ ಜಿ. ಹರಿಬಾಬು, ರಾಜಶೇಖರ,  ರಾಜಶೇಖರಪ್ಪ ಮುಷ್ಟೂರು, ಮುಷ್ಟೂರು ಸತೀಶ ಇತರರಿದ್ದರು.


`ಎಂಪಿ ವರ್ತನೆ ಸರಿಯಲ್ಲ~

ವಿದ್ಯುತ್ ಸಮಸ್ಯೆ ನಿವೇದಿಸಿಕೊಳ್ಳಲು ಹೋದ ನನ್ನ ಕ್ಷೇತ್ರದ ರೈತರೊಂದಿಗೆ ಸಂಸದ ಶಿವರಾಮಗೌಡ ಇತ್ತೀಚೆಗೆ ನಡೆದುಕೊಂಡ ರೀತಿ ಸರಿಯಲ್ಲ. ಯಾವುದೇ ಚುನಾಯಿತರಿಗೆ ಈ ವರ್ತನೆ ಶೋಭೆ ತರುವುದಿಲ್ಲ ಎಂದು ಶಾಸಕ ಶಿವರಾಜ ತಂಗಡಗಿ ಸಂಸದರ ವರ್ತನೆಯನ್ನು ಟೀಕಿಸಿದ್ದಾರೆ.


ತಾಲ್ಲೂಕಿನ ಮರಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಸಾಮಾನ್ಯರ ಸಮಸ್ಯೆಯನ್ನು ಆಲಿಸಬೇಕಾದದ್ದು ಚುನಾಯಿತನಾದವನ ಕರ್ತವ್ಯ. ಆದರೆ ಸಂಸದ ಏಕೆ ಈ ರೀತಿ ನಡೆದುಕೊಂಡರೋ ನನಗೆ ಗೊತ್ತಿಲ್ಲ. ಅದು ಸರಿಯೂ ಅಲ್ಲ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT