ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪೇ ಕಾರ್ಡ್ ಸೌಲಭ್ಯ ವಿಸ್ತರಣೆ

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಇನ್ನು ಮುಂದೆ ಎಲ್ಲ `ಎಟಿಎಂ' ಕೇಂದ್ರ ಮತ್ತು `ಪಾಯಿಂಟ್ ಆಫ್ ಸೇಲ್ ಟರ್ಮಿನಲ್'ಗಳಲ್ಲಿ(ಪಿಒಎಸ್) `ರೂಪೇ' ಡೆಬಿಟ್ ಕಾರ್ಡ್ ಬಳಸಬಹುದು' ಎಂದು ವಿಜಯ ಬ್ಯಾಂಕ್  ಅಧ್ಯಕ್ಷ ಎಚ್.ಎಸ್.ಉಪೇಂದ್ರ ಕಾಮತ್ ಹೇಳಿದರು.

ಶುಕ್ರವಾರ ಇಲ್ಲಿ ಹೊಸ ಸೌಲಭ್ಯಕ್ಕೆ ಚಾಲನೆ ನೀಡಿದ ಅವರು, ಈವರೆಗೆ `ಎಟಿಎಂ'ಗಳಲ್ಲಷ್ಟೇ ರೂಪೇ ಕಾರ್ಡ್ ಬಳಸಬಹುದಿತ್ತು. ಇನ್ನು ಮುಂದೆ ಎಲ್ಲ ವಾಣಿಜ್ಯ ಸೇವೆಗಳಿಗೂ ರೂಪೇ ಕಾರ್ಡ್ ಮೂಲಕ ಹಣ ಪಾವತಿಸಬಹುದು ಎಂದರು.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ) ಈ ಕಾರ್ಡ್‌ಗಳನ್ನು ಅಭಿವೃದ್ಧಿಪಡಿಸಿದೆ. ವಿಜಯ ಬ್ಯಾಂಕ್ ಮೂರು ಮಾದರಿ ರೂಪೇ ಕಾರ್ಡ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT