ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಪಿಂಚಣಿ ನೀಡಲು ಆಗ್ರಹಿಸಿ ಪ್ರತಿಭಟನೆ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: 60 ವರ್ಷ ಮೇಲ್ಪಟ್ಟ ರೈತರಿಗೆ ಜೀವನ ನಡೆಸಲು ಪ್ರತಿ ತಿಂಗಳೂ ರೂ 2,000 ಮಾಸಾಶನ ನೀಡುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ದೇಶಕ್ಕೆ ಆಹಾರ ಬೆಳೆದುಕೊಡುವ ಅನ್ನದಾತರು ವೃದ್ಧಾಪ್ಯ ಜೀವನದಲ್ಲಿ ಸಾಕಷ್ಟು ತೊಂದರೆ ಪಡುತ್ತಾರೆ. ಅವರ ನೆರವಿಗೆ ಸರ್ಕಾರ ಬರುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ರೈತರ ಬದುಕು ಸಹನೀಯಗೊಳಿಸಲು ಪ್ರತಿ ತಿಂಗಳೂ ಪಿಂಚಣಿ ಮಂಜೂರು ಮಾಡುವ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

ಜಾಗತೀಕರಣದಿಂದ ರೈತರು ಹಲವು ತೊಂದರೆಗಳಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಕಷ್ಟಪಟ್ಟು ದುಡಿದರೂ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ದಿನೇದಿನೇ ಸಮಸ್ಯೆ ಉಲ್ಬಣಗೊಂಡು, ಕೆಲವರು ಆತ್ಮಹತ್ಯೆ ಮೊರೆ ಹೋಗಿದ್ದಾರೆ. ಬೇರೆ ವಿಭಾಗಗಳ ಜನರು ಸಂಕಷ್ಟಕ್ಕೆ ಸಿಲುಕಿದಾಗ ಸರ್ಕಾರ ಅವರ ನೆರವಿಗೆ ಧಾವಿಸುತ್ತದೆ; ಆದರೆ ರೈತರತ್ತ ನಿರ್ಲಕ್ಷ್ಯ ತೋರುತ್ತದೆ. ಇದರಿಂದ ಕಂಗಾಲಾಗಿ, ಕೃಷಿ ಕ್ಷೇತ್ರವನ್ನು ತೊರೆಯುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಇದು ಮುಂದುವರಿದರೆ, ಆಹಾರ ಉತ್ಪಾದನಾ ಕೊರತೆ ತೀವ್ರಗತಿಯಲ್ಲಿ ದೇಶವನ್ನು ಕಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಯಾವುದೇ ಸರ್ಕಾರಿ ಉದ್ಯೋಗ ಮಾಡಿ, ನಿವೃತ್ತಿಯಾದವರಿಗೆ ಪಿಂಚಣಿ ನೀಡುವ ಮಾದರಿಯನ್ನು ಕೃಷಿ ಕ್ಷೇತ್ರಕ್ಕೂ ಅಳವಡಿಸಬೇಕು. ಕೃಷಿ ಕ್ಷೇತ್ರದಲ್ಲಿ  ಉಳಿದುಕೊಂಡಿರುವ ರೈತರಿಗೆ ನೆರವಿನ ಹಸ್ತ ಚಾಚಲು ಸರ್ಕಾರ ಕೂಡಲೇ ವಿಶಿಷ್ಟ ಯೋಜನೆ ಪ್ರಕಟಿಸಬೇಕು. 60 ವರ್ಷ ವಯಸ್ಸಿಗೂ ಮೇಲ್ಪಟ್ಟ ರೈತರಿಗೆ ಜೀವನ ನಡೆಸಲು ರೂ 2,000 ಮಾಸಾಶನ ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

 ಪಕ್ಷದ ಜಿಲ್ಲಾ ಕಾರ್ಯದರ್ಶಿ ಮೌಲಾಮುಲ್ಲಾ, ನಗರ ಕಾರ್ಯದರ್ಶಿ ಪದ್ಮಾಕರ ಜಾನಿಬ್, ಸಹ ಕಾರ್ಯದರ್ಶಿಗಳಾದ ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT