ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಉಳಿದರೆ ಬ್ಯಾಂಕ್ ಉಳಿದೀತು

Last Updated 25 ಜನವರಿ 2011, 10:55 IST
ಅಕ್ಷರ ಗಾತ್ರ

ಶೃಂಗೇರಿ: ವಿದರ್ಭ ಪ್ಯಾಕೇಜ್ ಅವಧಿ 2012ರವರೆಗೂ ಇರುವುದರಿಂದ ರೈತರಿಂದ ಬಲತ್ಕಾರವಾಗಿ ಸಾಲ ವಸೂಲಿ ಮಾಡುವಂತಿಲ್ಲ ಎಂಬ ಕಾನೂನಿನ ಅರಿವು ಅಧಿಕಾರಿಗಳಿಗೆ ತಿಳಿದಿಲ್ಲ. ರೈತರು ಉಳಿದರೆ ಬ್ಯಾಂಕ್ ಉಳಿದೀತು ಎಂಬ ಸತ್ಯವನ್ನು ಸರ್ಕಾರ ಮನಗಾಣಬೇಕು ಎಂದು ರಾಜ್ಯ ಜೆಡಿಎಸ್‌ನ ಉಪಾಧ್ಯಕ್ಷ ಎಚ್. ಟಿ.ರಾಜೇಂದ್ರ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ತಾಲ್ಲೂಕು ರೈತ ಸಂಘ ಹಸಿರು ಸೇನೆ ಹಾಗೂ ಹಳದಿ ಎಲೆರೋಗ ಹೋರಾಟ ಸಮಿತಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.  ಜಿಲ್ಲಾ ಕಾಂಗ್ರೆಸ್ ಘಟಕದ ಟಿ.ಡಿ. ರಾಜೇಗೌಡ ಮಾತನಾಡಿ, ರೈತರ ಸಾಲ ವಸೂಲಿತಿಗೆ ಸರ್ಕಾರದ ಆದೇಶವಿಲ್ಲ. ರೈತ ಸಂಘಟನೆ ಬಲಗೊಂಡರೆ ಅಧಿಕಾರಿಗಳು ರೈತರ ಮನೆಯತ್ತಲೂ ಸುಳಿಯುವುದಿಲ್ಲ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಎಂ. ಗೋಪಾಲ್ ಮಾತನಾಡಿ, ಸರ್ಕಾರ ಹಂಪಿ ಉತ್ಸವ ಹಾಗೂ ಮಠ ಮಾನ್ಯಗಳಿಗೆ ನೀಡುವ ಹಣವನ್ನು ಅನ್ನ ನೀಡುವ ರೈತನ ಅಭ್ಯುದಯಕ್ಕಾಗಿ ಬಳಸಲಿ ಎಂದರು. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮೀಗಾ ಸಚಿನ್ ಮಾತನಾಡಿ, ಯಾವ ತೋಟಕ್ಕೆ ಕಾಯಿಲೆ ಇದೆಯೋ ಅಂತರ ರೈತರಿಗೆ ಔಷಧ ನೀಡಲಿ ಎಂದರು.

ತಾಲ್ಲೂಕು ರೈತ ಸಂಘ ಅಧ್ಯಕ್ಷ ಮಾಗಲು ಅಚ್ಯುತ, ಬಂಡ್ಲಾಪುರ ಶ್ರೀಧರರಾವ್ ತಹಸೀಲ್ದಾರ್‌ರವರಿಗೆ ರೈತರ ಪರವಾಗಿ ಮನವಿ ಸಲ್ಲಿಸಿದರು. ಕೆ.ಎನ್. ಆಶೋಕ ಹೆಗ್ಡೆ, ಹಳದಿ ಎಲೆ ರೋಗ ಸಮಿತಿ ಅಧ್ಯಕ್ಷ ಮಾರನಕೊಡಿಗೆ ನಟರಾಜ, ಕಾಂಗ್ರೆಸ್ ಮುಖಂಡ ಮಾತೊಳ್ಳಿ ಸತೀಶ್,  ಕಲ್ಕುಳಿ ವಿಠಲ ಹೆಗ್ಡೆ, ಕೆಲವಳ್ಳಿ ಕಳಸಪ್ಪ ಇದ್ದರು.

ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ಕಾರ್ಯಕರ್ತರು, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.  ಪ್ರತಿಭಟನೆ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಬ್ಯಾಂಕ್‌ಗಳಿಗೂ ಮನವಿಯನ್ನು ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT