ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರೋಟರಿ ಕ್ಲಬ್ ಮಾದರಿ'

Last Updated 12 ಏಪ್ರಿಲ್ 2013, 20:14 IST
ಅಕ್ಷರ ಗಾತ್ರ

ಬೆಂಗಳೂರು: `ರೋಟರಿ ಕ್ಲಬ್ ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ' ಎಂದು ಹಿರಿಯ ನಟ ಶ್ರೀನಾಥ್ ಶ್ಲಾಘಿಸಿದರು.

ರೋಟರಿ ಬೆಂಗಳೂರು ಡೌನ್ ಟೌನ್ ಕ್ಲಬ್ ನಗರದ ಪಿ.ಡಿ ಹಿಂದುಜಾ ಸಿಂಧಿ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ  ಸಮಾರಂಭದಲ್ಲಿ `ನವೀಕೃತ ಡಯಾಲಿಸಿಸ್' ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. `ಆರೋಗ್ಯ ಮತ್ತು ಶೈಕ್ಷಣಿಕ ಸೇವೆ ನೀಡುವತ್ತ ರೋಟರಿ ಕ್ಲಬ್ ಹೆಚ್ಚಿನ ಮಹತ್ವ ನೀಡುತ್ತಿದ್ದು, ಮಾನವೀಯತೆಗೆ ಹೊಸ ವ್ಯಾಖ್ಯಾನ ಒದಗಿಸುವಲ್ಲಿ ತನ್ನದೇ ಹಾದಿ ತುಳಿದಿದೆ. ರೋಟರಿ ಸಮಾಜಸೇವಾ ಕಾರ್ಯದೊಂದಿಗೆ ನನ್ನ ಸಂಸ್ಥೆ ದಿಶಾ ಕಲಾ ಪ್ರತಿಷ್ಠಾನವೂ ಕೈಜೋಡಿಸಲಿದೆ' ಎಂದರು.

ಕ್ಲಬ್‌ನ ಅಧ್ಯಕ್ಷ ಬಿ.ಎಸ್.ಶ್ರೀರಾಮ್, `ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ರೋಟರಿ ಸಂಸ್ಥೆಯು `ಡಯಾಲಿಸಿಸ್ ಕೇಂದ್ರ'ಗಳನ್ನು ಆರಂಭಿಸಿದೆ. ಈ ಬಾರಿಪಿ.ಡಿ.ಹಿಂದೂಜಾ ಆಸ್ಪತ್ರೆಗೆ  ಹೆಚ್ಚುವರಿ ಐದು ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗಿದೆ. ಇತರೆ ಕೇಂದ್ರಗಳಲ್ಲಿ ಡಯಾಲಿಸಿಸ್‌ಗೆ ರೂ 1,500 ವೆಚ್ಚ ತಗುಲಿದರೆ, ರೋಟರಿ ನಡೆಸುವ ಕೇಂದ್ರಗಳಲ್ಲಿ  ರೂ800 ಮಾತ್ರ' ಎಂದು ಮಾಹಿತಿ ನೀಡಿದರು. ಕಾರ್ಯದರ್ಶಿ ಇ.ವಿವೇಕಾನಂದ, ಶ್ರೀಕಾಂತ್ ಛತ್ರಪತಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT