ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಯಿಂಗ್: ಭಾರತಕ್ಕೆ 8 ಪದಕ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ತಂಡದವರು ದಕ್ಷಿಣ ಕೊರಿಯಾದ ಹಾಚಿಯೋನ್‌ನಲ್ಲಿ ನಡೆದ 14ನೇ ಸೀನಿಯರ್ ಹಾಗೂ 17ನೇ ಜೂನಿಯರ್ ಏಷ್ಯಾ ರೋಯಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನದ ಪದಕ ಸೇರಿದಂತೆ ಒಟ್ಟು 8 ಪದಕ ಜಯಿಸಿದ್ದಾರೆ.

ಲೈಟ್‌ವೇಟ್ ಡಬಲ್ ಸ್ಕಲ್ಲರ್ಸ್ ಶೋಕೇಂದರ್ ತೊಮರ್ ಹಾಗೂ ಸೋನು ಲಕ್ಷ್ಮನಾರಾಯಣ್   ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಹಾಂಗ್‌ಕಾಂಗ್, ದಕ್ಷಿಣ ಕೊರಿಯಾ ಹಾಗೂ ಚೀನಾ ತಂಡಗಳನ್ನು ಸೋಲಿಸುವಲ್ಲಿ ಅವರು ಮಹತ್ವದ ಪಾತ್ರ ನಿಭಾಯಿಸಿದರು. ಹಾಗಾಗಿ ಭಾರತ ಒಂದು ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆಲ್ಲಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT