ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‌್ಯಾಂಪ್ ನಡಿಗೆಯ ಥ್ರಿಲ್ ಸಿನಿಮಾ ಅಭಿನಯದ ಖುಷಿ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಇವರಿಗೆ ಮಾಡೆಲಿಂಗ್‌ಗೆ ಆಫರ್ ಸಿಕ್ಕಿದ್ದು ಮಾಲ್‌ನಲ್ಲಿ ಸುತ್ತಾಡುವಾಗ. `ಇ್ಲ್ಲಲ' ಎಂಬ ಉತ್ತರಕ್ಕೆ ಸಿಕ್ಕಿದ್ದು ಫೋನ್ ನಂಬರ್. `ಮಾಡೆಲಿಂಗ್ ಮಾಡಬೇಕು ಎಂದು ಯಾವತ್ತಾದರೂ ಅನಿಸಿದರೆ ಈ ನಂಬರ್‌ಗೆ ಕರೆ ಮಾಡಿ' ಎಂದು ಹೊರಟು ಹೋದ ಅನಾಮಿಕ ನೀಡಿದ್ದು ಪ್ರಸಾದ್ ಬಿದಪ್ಪ ಅವರ ಸಹಾಯಕರೊಬ್ಬರ ನಂಬರ್. ಒಂದೂವರೆ ವರ್ಷದ ನಂತರ ಫೋನಾಯಿಸಿದ ಅಖಿಲಾ ತಮ್ಮ ಬದುಕಿನ ಬಗ್ಗೆ ನಿರ್ಧರಿಸಿಯಾಗಿತ್ತು.

ಅಂದಿನಿಂದ ಪ್ರಾರಂಭಿಸಿದ ಮಾಡೆಲಿಂಗ್ ಬದುಕಿಗೀಗ ಎರಡೂವರೆ ವರ್ಷ. ಬದುಕಿನ ದಾರಿ ನಿರ್ಧರಿಸುವ ಸ್ವಾತಂತ್ರ್ಯವನ್ನು ತಂದೆ ನೀಡಿದ್ದರು. ಅವರ ಆಸೆಯಂತೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿ ಮಾಡೆಲಿಂಗ್‌ಗೆ ಕಾಲಿಟ್ಟ ಈ ಪೋರಿ ಸದ್ಯದಲ್ಲೇ ಮನೆಮಾತಾಗಲು ಹೊರಟಿದ್ದಾರೆ.
ಇವರ ಎತ್ತರ, ಸೌಂದರ್ಯ ಹಾಗೂ ಆತ್ಮವಿಶ್ವಾಸದ ನಡೆಯಿಂದ ಸಿನಿಮಾಗಳಲ್ಲೂ ಅವಕಾಶ ಸಿಗುತ್ತಿದೆ. ಈಗಾಗಲೇ `ಪದೇ ಪದೇ' ಶೂಟಿಂಗ್ ಮುಗಿದಿದೆ. `ಡಕೋಟಾ ಫ್ಯಾಮಿಲಿ' ಸಿನಿಮಾದಲ್ಲೂ ಅಭಿನಯ ಚಾಲ್ತಿಯಲ್ಲಿದೆ. `ನಾನು ಕನ್ನಡಿಗಳು. ಭಾಷೆ ಚೆನ್ನಾಗಿ ಗೊತ್ತು.

ಇಲ್ಲಿನವರ ಮನಸ್ಥಿತಿ ಅರಿತು ಸಿನಿಮಾಗಳಲ್ಲಿ ಅಭಿನಯಿಸುವುದು ನನಗೆ ಕಷ್ಟವಲ್ಲ. ಸದ್ಯಕ್ಕಂತೂ ಸಾಧಿಸಿದರೆ ಕನ್ನಡ ಸಿನಿಮಾದಲ್ಲೇ ಎಂಬುದು ನನ್ನ ದೃಢ ನಿರ್ಧಾರ. ಗೊತ್ತಿರುವ ಭಾಷೆ, ನೆಲವನ್ನು ಬಿಟ್ಟು ಬೇರೆಡೆ ಹೋಗಿ ಯಾಕೆ ಕಷ್ಟಪಡಬೇಕು ಎಂಬ ಜಾಯಮಾನದವಳು ನಾನು. ಆದರೂ ಭವಿಷ್ಯದ ಬಗೆಗಿನ ನಿರ್ಧಾರ ಹೇಳೋದು ಕಷ್ಟ...' ತುಸು ಹೊತ್ತು ಮೌನವಹಿಸಿ ಮತ್ತೆ ಮಾತಿಗೆ ಶುರುವಿಟ್ಟುಕೊಂಡಾಗ ಅಖಿಲಾ ದನಿಯಲ್ಲಿ ಉತ್ಸಾಹ.

`ಚಿಕ್ಕವಳಿರುವಾಗಿನ ಛಾಯಾಚಿತ್ರಗಳು ಎಂದರೆ ನನಗೆ ತುಂಬಾ ಇಷ್ಟ. ಅವುಗಳನ್ನೆಲ್ಲಾ ತೆಗೆದಿದ್ದು ಅಪ್ಪ. ಅವರೇ ನನ್ನ ನೆಚ್ಚಿನ ಫೋಟೊಗ್ರಾಫರ್. ಪ್ರತಿದಿನ ಬೆಳಿಗ್ಗೆ ರನ್ನಿಂಗ್ ಮಾಡ್ತೀನಿ. ಅನ್ನ ಎಂದರೆ ಪಂಚಪ್ರಾಣ. ಅಮ್ಮ ಮಾಡುವ ಅನ್ನ ಹುಳಿಯನ್ನಂತೂ ಚಪ್ಪರಿಸಿ ತಿನ್ನುತ್ತೇನೆ. ಹೊರಗಿನ ಊಟ ಮಾಡಲ್ಲ. ಇದು ನನ್ನ ಫಿಟ್‌ನೆಸ್ ಮಂತ್ರ' ಎನ್ನುತ್ತಾರೆ ಅವರು.

`ಹೆಚ್ಚಾಗಿ ರ‌್ಯಾಂಪ್ ಮಾಡೆಲಿಂಗ್‌ನ್ಲ್ಲಲೇ ನಾನು ಕಾಣಿಸಿಕೊಂಡಿದ್ದು. ಸಂಗೀತ ಇದ್ದರೆ ಮಾತ್ರ ನಾನು ಆತ್ಮವಿಶ್ವಾಸದಿಂದ ಹೆಜ್ಜೆ ಇಡುತ್ತೇನೆ. ರ‌್ಯಾಂಪ್ ಮೇಲೆ ನಡೆಯುವಾಗಿನ ಒಂದು ನಿಮಿಷ ಎಲ್ಲರ ಗಮನ ಸೆಳೆಯುವುದು ಒಂದು ಥರಾ ಥ್ರಿಲ್. ಹತ್ತಾರು ಸ್ನೇಹಿತರು ಸಿಗುತ್ತಾರೆ. ಹೊಸ ವಿಷಯ ಕಲಿಯಬಹುದು. ಬದಲಾಗುತ್ತಿರುವ ಹೊಸ ಟ್ರೆಂಡ್, ಸ್ಟೈಲ್‌ಗಳು ಬಹುಬೇಗ ತಿಳಿಯುತ್ತದೆ ಎಂಬುದು ಈ ಲೋಕದ ಹೆಗ್ಗಳಿಕೆ.

ಅಷ್ಟಕ್ಕೂ ನಾನು ಬ್ರಾಂಡ್, ಟ್ರೆಂಡ್‌ಗಳ ಹಿಂದೆ ಹೋಗುವವಳಲ್ಲ. ನಮ್ಮ ವ್ಯಕ್ತಿತ್ವಕ್ಕೆ ಯಾವ ಡ್ರೆಸ್ ಹೊಂದುತ್ತದೆ ಎಂಬುದನ್ನು ನಾವೇ ನಿರ್ಧರಿಸಬೇಕು. ಈ ವೃತ್ತಿಯಲ್ಲಿ ನಿಷ್ಠೆ ಮುಖ್ಯ. ಸಮಯಕ್ಕೆ ಸರಿಯಾಗಿ ನಾವು ಹಾಜರಿದ್ದರೆ ಮಾತ್ರ ಮರ್ಯಾದೆ. ಹಲವಾರು ಬಾರಿ ನಾವು ತುಂಬಾ ಹೊತ್ತು ಕಾಯಬೇಕಾಗುತ್ತದೆ. ಅದು ದೊಡ್ಡ ಕಿರಿಕಿರಿ. ಆದರೂ ಕೆಲವೊಮ್ಮೆ ಸಹಿಸಿಕೊಳ್ಳಬೇಕಾಗುತ್ತದೆ' ಎಂದು ತಾನು ಮೆಚ್ಚಿಕೊಂಡ ಕ್ಷೇತ್ರದ ಆಗುಹೋಗುಗಳನ್ನು ತೆರೆದಿಟ್ಟರು ಅಖಿಲಾ.

`ಪಾಂಡ್ಸ್‌ನವರು ಆಯೋಜಿಸಿದ್ದ ಸ್ಪರ್ಧೆಯಲ್ಲಿ ನನಗೆ ಮಿಸ್ ಫ್ಯಾಷನ್ ಐಕಾನ್ ಎಂದು ಕಿರೀಟ ತೊಡಿಸಿದರು. ಅದು ತುಂಬಾ ಖುಷಿ ಕೊಟ್ಟಿದೆ. ಇದುವರೆಗೆ ಫಾಸ್ಟ್ ಟ್ರ್ಯಾಕ್, ಆರ್ಫಾ ಗೋಲ್ಡ್ ಪ್ಯಾಲೇಸ್‌ಗೆ ಮಾಡೆಲಿಂಗ್ ಬಿಟ್ಟರೆ ಲೆಕ್ಕವಿಲ್ಲದಷ್ಟು ರ‌್ಯಾಂಪ್ ಶೋಗಳಲ್ಲಿ ಭಾಗವಹಿಸಿದ್ದೇನೆ. ಕರ್ನಾಟಕಿ ಸಂಗೀತ ಹಾಗೂ ಭರತನಾಟ್ಯದಲ್ಲಿ ಜೂನಿಯರ್ ತರಬೇತಿ ಪಡೆದಿದ್ದೇನೆ. ಕಾಲೇಜು ದಿನಗಳಲ್ಲಿ ಬಾಸ್ಕೆಟ್ ಬಾಲ್ ಟೀಂನಲ್ಲಿದ್ದೆ. ನಾಯಿ ಎಂದರೆ ನನಗೆ ತುಂಬಾನೇ ಪ್ರೀತಿ. ಮನೆಯಲ್ಲಿದ್ದಾಗ ಹೆಚ್ಚು ಹೊತ್ತು ನಾಯಿಗಾಗಿಯೇ ಮೀಸಲು'.

`ಕುಟುಂಬದಲ್ಲಿ ಹೆಚ್ಚಿನವರು ಡಾಕ್ಟರ್, ಎಂಜಿನಿಯರ್‌ಗಳೇ. ನಾನೊಬ್ಬಳೇ ಬೇರೆ ವೃತ್ತಿ ಆಯ್ದುಕೊಂಡೆ. ಮನೆಯವರ ಸಹಕಾರ ಇರುವುದರಿಂದ ಕಷ್ಟ ಎನಿಸಿಲ್ಲ. ನಾನು ಸ್ಟೈಲ್‌ಗಿಂತ ಹೆಚ್ಚಾಗಿ ಕಂಫರ್ಟ್‌ಗೆ ಹೆಚ್ಚು ಒತ್ತು ಕೊಡಬೇಕು' ಎಂಬುದು ಇವರ ಕಟ್ಟಳೆ.

`ಮಾಡೆಲಿಂಗ್ ತುಂಬಾ ಸರಳ ಎನ್ನುತ್ತಾರೆ ಕೆಲವರು. ಕ್ಯಾಮೆರಾ ಮುಂದೆ ಅಳುಕಿಲ್ಲದೆ ಸೂಕ್ತ ರೀತಿಯಲ್ಲಿ ನಿಲ್ಲಬೇಕು. ಆತಂಕ ಇದ್ದರೂ ಮುಖದಲ್ಲಿ ಆತ್ಮವಿಶ್ವಾಸ ಜಿನುಗಿಸಬೇಕು. ಒಮ್ಮಮ್ಮೆ ದಿನವಿಡೀ ಕಾರ್ಯಕ್ರಮ ಇದ್ದರೂ ನಮ್ಮ ಪ್ರದರ್ಶನಕ್ಕೆ ಯಾವುದೇ ತೊಂದರೆ ಆಗದಂತಿರಬೇಕು. ಮಾಡೆಲಿಂಗ್ ಒಂದು ಕಲೆ. ಈ ಕ್ಷೇತ್ರ ಪ್ರವೇಶಿಸಿದ ಮೇಲೆ ವಾಸ್ತವ ಅರಿವಾಗೋದು' ಎನ್ನುತ್ತಾ ಪೂರ್ವಗ್ರಹಪೀಡಿತರಿಗೆ ಸಂದೇಶ ನೀಡುತ್ತಾರೆ ಅಖಿಲಾ.

ಸೀರೆ ಉಡೋದು ಅವರಿಗೆ ಕಿರಿಕಿರಿಯಂತೆ. ಜೀನ್ಸ್ ಹಾಗೂ ಟೀಶರ್ಟ್‌ನಲ್ಲಿ ಆರಾಮವಾಗಿರಬಲ್ಲೆ ಎನ್ನುವ ಇವರಿಗೆ ಅತಿಯಾದ ಮೇಕಪ್ ಅಪಥ್ಯ. ಸದಾ ಕೂದಲನ್ನು ಸ್ಟೈಲಿಶ್ ಮಾಡಿಸಿ ಬೇಸರ ಬಂದಿದೆ. ಹೀಗಾಗಿ ಉಳಿದ ಸಂದರ್ಭಗಳಲ್ಲಿ ಸರಳವಾಗಿರೋದಕ್ಕೆ ಅವರು ಬಯಸುತ್ತಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT