ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಟರಿ ಮೂಲಕ ರೈತ ಫಲಾನುಭವಿಗಳ ಆಯ್ಕೆ ಬೇಡ

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಸರ್ಕಾರ ತನ್ನ ಕೃಷಿ ಬಜೆಟ್‌ನಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮುಂಗಾರು ಕೃಷಿ ಚಟುವಟಿಕೆಗೆ ಅನುಕೂಲವಾಗಲು `ಸುವರ್ಣಭೂಮಿ~ ಯೋಜನೆ ಪ್ರಕಟಿಸಿ 1 ಎಕರೆಗೆ 5,000 ರೂ. 2 ಎಕರೆಗೆ ರೂ. 10,000 ಸಹಾಯಧನ ಪಡೆಯುವ ಸೌಲಭ್ಯ ಪ್ರಕಟಿಸಿದ್ದು ಬಡರೈತರಲ್ಲಿ ಆಶೆ ಮೂಡಿಸಿರುತ್ತದೆ.

ಅದರಂತೆ ರೈತರು ಕೃಷಿ ಸಂಪರ್ಕ ಕೇಂದ್ರಗಳ ಮುಂದೆ ಅರ್ಜಿ ಪಡೆಯಲು ಮತ್ತು ಸಲ್ಲಿಸಲು ವಾರಗಟ್ಟಲೆ ಕಷ್ಟಪಟ್ಟು ಅರ್ಜಿ ಸಲ್ಲಿಸಿ ಸೌಲಭ್ಯಕ್ಕಾಗಿ ಕಾದು ಕುಳಿತ ರೈತರಿಗೆ, ಲಾಟರಿ ಮೂಲಕ ಆಯ್ಕೆ ಮಾಡಿರುವುದು ಸೌಲಭ್ಯಕ್ಕಾಗಿ ಆಯ್ಕೆಯಾಗದ ಸಾವಿರಾರು ರೈತರಲ್ಲಿ ಆತಂಕ, ನಿರಾಶೆ ಮೂಡಿಸಿದೆ.
 
ಸರ್ಕಾರದ ಈ ಸುವರ್ಣಭೂಮಿ ಯೋಜನೆ ಸೌಲಭ್ಯ ಎಲ್ಲ ರೈತರಿಗೆ ಸಿಗುವಂತೆ ಯೋಜನೆ ರೂಪಿಸಿ ಜಾರಿಗೆ ತರುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಸೌಲಭ್ಯಕ್ಕಾಗಿ ರೈತರ ಆಯ್ಕೆ ಲಾಟರಿ ಮೂಲಕ ಮಾಡಿರುವುದು ರೈತರಲ್ಲಿ ಗಲಿಬಿಲಿ ಮೂಡಿಸಿದೆ.

ಅರ್ಜಿ ಸಲ್ಲಿಸಿದ ಪ್ರತಿ ಸಣ್ಣ ರೈತನಿಗೂ 5,000 ಅಥವಾ 10,000 ಬದಲಿಗೆ 1000 ಮತ್ತು 2000 ರೂಪಾಯಿಗಳನ್ನು ಪ್ರತಿ ರೈತನಿಗೆ ಸಹಾಯಧನದ ರೂಪದಲ್ಲಿ ನೀಡುವುದು ಒಳಿತು. ಸರ್ಕಾರ ಈ ಬಗ್ಗೆ ಚಿಂತಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT