ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ಮಸೂದೆಗೆ ರಾಷ್ಟ್ರಪತಿ ಅಂಕಿತ

Last Updated 1 ಜನವರಿ 2014, 14:08 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೀರ್ಘಕಾಲದಿಂದ ನಿರೀಕ್ಷಣೆಯಲ್ಲಿದ್ದ ಲೋಕಪಾಲ ಮಸೂದೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಬುಧವಾರ ಅಂಕಿತ ಹಾಕಿದರು. ಕೆಲವು ಷರತ್ತುಗಳಿಗೆ ಒಳಪಟ್ಟು ಪ್ರಧಾನಿಯನ್ನು ಕೂಡಾ ತನ್ನ ವ್ಯಾಪ್ತಿಗೆ ತರುವ ಅಧಿಕಾರ ಉಳ್ಳ ಭ್ರಷ್ಟಾಚಾರ ವಿರೋಧಿ 'ಲೋಕಪಾಲ ಸಂಸ್ಥೆ' ರಚನೆಗೆ ಈ ಮಸೂದೆ ಅವಕಾಶ ಕಲ್ಪಿಸಿದೆ.

ಮಸೂದೆಗೆ ರಾಜ್ಯಸಭೆ ಡಿಸೆಂಬರ್ 17ರಂದು ಮತ್ತು ಲೋಕಸಭೆ ಡಿಸೆಂಬರ್ 18ರಂದು ಒಪ್ಪಿಗೆ ನೀಡಿದ್ದವು.
ಲೋಕಸಭಾ ಸಚಿವಾಲಯವು ಲೋಕಸಭಾ ಅಧ್ಯಕ್ಷೆ ಮೀರಾ ಕುಮಾರ್ ಅವರ ಸಹಿಯನ್ನು ಒಳಗೊಂಡಿದ್ದ ಮಸೂದೆಯ ಪ್ರತಿಯನ್ನು ಮಂಗಳವಾರ ಕಾನೂನು ಸಚಿವಾಲಯಕ್ಕೆ ಕಳುಹಿಸಿತ್ತು.

 ನಂತರ ಮಸೂದೆಯನ್ನು ರಾಷ್ಟ್ರಪತಿಯವರ ಅಂಕಿತಕ್ಕಾಗಿ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಷ್ಟ್ರಪತಿಯವರು ಮಸೂದೆಗೆ ಸಹಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT