ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳಿಂದ ಸಮಾಜ ಬದಲಾವಣೆ: ಅಜೇಂದ್ರ

Last Updated 27 ಡಿಸೆಂಬರ್ 2012, 8:42 IST
ಅಕ್ಷರ ಗಾತ್ರ

ಶಹಾಪುರ: ಬಸವಣ್ಣನವರ ಮನಸ್ಸು ನೊಂದವರ, ಶೋಷಿತರ, ತಳವರ್ಗದವರ ಕಡೆಗೆ ಹರಿದು ಹೋದುದಲ್ಲದೆ ಸಮಾಜವನ್ನು ಅಮೂಲಾಗ್ರವಾಗಿ ಬದಲಾಯಿಸುವ ಶಕ್ತಿಯನ್ನು ಅದು ಹೊಂದಿತ್ತು ಎಂದು ಹುಮನಾಬಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಿ.ಅಜೇಂದ್ರಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಏರ್ಪಡಿಸಿದ್ದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯ ಬಸವ ಬೆಳಗು- 15 ರ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಜನ ಸಾಮಾನ್ಯರಿಗೆ ತಿಳಿಯದ ಭಾಷೆಯ ಮೂಲಕ ಮೋಸಗೊಳಿಸುತ್ತ ಹೊರಟ ಪುರೋಹಿತಶಾಹಿಯ ಬೇರಿನ ಬುಡಕ್ಕೆ ಬಸವಣ್ಣ ವಿಚಾರದ ಬೆಂಕಿ ಇಟ್ಟರು. ಆತ್ಮ ಸಂಗಾತಕ್ಕೆ ಇರುವ ದೇವರನ್ನು ಗುಡಿ ಗುಂಡಾರಗಳಿಂದ ಮುಕ್ತಗೊಳಿಸಿ, ಪ್ರಜ್ಞೆಯ ಕುರುಹನ್ನು ಪ್ರತಿಯೊಬ್ಬರು ಧರಿಸುವುದಕ್ಕೆ ಅವಕಾಶ ಒದಗಿಸಿಕೊಟ್ಟರು. ವಚನಗಳು ರಚಿಸಬೇಕೆಂದೆ ರಚಿಸಿದ ಸಾಹಿತ್ಯಿಕ ಕೃತಿಗಳಲ್ಲ. ಶಬ್ಧ ಚಮತ್ಕಾರದ ನುಡಿಗಳಲ್ಲ. ಶರಣರ ಬದ್ಧತೆಯ ಬದುಕಿಗೆ ಹಿಡಿದ ಕೈಗನ್ನಡಿಗಳು. ನಡೆ- ನುಡಿ ಸಿದ್ದಾಂತದ ಪ್ರತೀಕಗಳು.

ವಿಶ್ವಮಾನವ ತತ್ವವಾದ ವಚನ ಸಾಹಿತ್ಯ ಹಾಗೂ ಬಸವಣ್ಣನವರು ಜಗತ್ತಿಗೆ ಹೆಚ್ಚು ಪ್ರಚಾರವಾಗದೆ ಇರುವುದಕ್ಕೆ ಕಾರಣ ದರಿದ್ರರ ಮನೆಯಲ್ಲಿ ಭಾಗ್ಯವಂತ ಹುಟ್ಟಿದಂತೆ ಎಂಬ ಡಾ.ಎಂ.ಎಂ.ಕಲ್ಬುರ್ಗಿಯವರ ಮಾತನ್ನು ಪ್ರಸ್ತಾಸುತ್ತ,ವೈಜ್ಞಾನಿಕ, ವೈಚಾರಿಕವಾಗಿರುವ ವಚನಗಳು  ನಿತ್ಯ ಓದುವುದರಿಂದ ಕೇಳುವುದರಿಂದ ಮನುಷ್ಯರ ಬದುಕಿನಲಿ ್ಲಬಹುದೊಡ್ಡ ಬದಲಾವಣೆ ಬರುತ್ತದೆ ಎಂದು ತಿಳಿಸಿದರು.

ಭಾರತ ಸಂವಿಧಾನ ಕೊಡಮಾಡಿದ ಹಲವಾರು ಸಂಗತಿಗಳು ವಚನ ಸಾಹಿತ್ಯದಲಿ ್ಲಇವೆ. ಮನಸ್ಸಿನ ಕತ್ತಲೆಯನ್ನು ಕಳೆಯುವ ವಚನಗಳು ಬದುಕಿಗೆ ಅನಿವಾರ್ಯವಾಗಿವೆ. ಸಮಾಜದ ಎಲರ‌್ಲನ್ನು ಅಪ್ಪ- ಅಣ್ಣ- ಅಕ್ಕ ಎಂದು ಅಪ್ಪಿಕೊಂಡ ಕಕ್ಕುಲಾತೆಯ ಮನಸ್ಸು ಬಸವಣ್ಣನವರದು ಎಂದು ಮೈಸೂರು ಜೆ.ಎಂ.ಎಫ್.ಸಿ.ಕೋರ್ಟ್ ನ್ಯಾಯಮೂರ್ತಿ ಸಾಯಬಣ್ಣಬಣ್ಣ ಮೇಲಗಲ್ ಅಭಿಪ್ರಾಯಪಟ್ಟರು.

ಬಸವ ಬೆಳಗು ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಸೌಹಾರ್ದ ವಾತಾವರಣ ಉಂಟಾಗುತ್ತಿದೆ. ಶರಣರ ವಿಚಾರಧಾರೆಯ ಅಡಿಯಲ್ಲಿ ಮನುಷ್ಯರೆಲ್ಲ ತಮ್ಮ ತಮ್ಮ ಮನಸ್ಸಿನ ಆಳಕ್ಕೆ ಇಳಿದು ಚಿಂತಿಸುವ ಕ್ರಿಯೆಗೆ ಕಾರಣವಾಗಿದೆ. ಸತ್ಯಂಪೇಟೆ ಲಿಂಗಣ್ಣನವರು ಕನಸಿನ ವಚನೋತ್ಸವ ಹರಿಗಡಿಯದೆ ನಡೆದಿರುವುದು ನಮ್ಮೆಲ್ಲರ ಭಾಗ್ಯ ಎಂದು ತಾಲೂಕಿನ ಗ್ರಾಮೀಣ ಸಿ.ಪಿ.ಐ. ಜೆ.ಎಸ್. ನ್ಯಾಮಗೌಡರು ಹೇಳಿದರು.

ಡಾ. ಪಾರ್ವತಿ ಕಟ್ಟೀಮನಿ, ಹುಸನಪ್ಪ ಕಟ್ಟೀಮನಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮಾದಾರ ಚನ್ನಯ್ಯನ ಜಯಂತೋತ್ಸವವ ನಿಮಿತ್ಯ  ಹಮ್ಮಿಕೊಂಡ ಸಭೆಯಲ್ಲಿ ಮಾದಾರ ಚೆನ್ನಯ್ಯನ ಕುರಿತು ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೆ ಸಂದರ್ಭದಲ್ಲಿ ಕಾಯಕಯೋಗಿ ಯಲ್ಲಪ್ಪ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.

ಶರಣಕುಮಾರ ಜಾಲಹಳ್ಳಿ ವಚನಗಳನ್ನು ಹಾಡಿದರು. ಶಿವರಂಜನ್ ಸತ್ಯಂಪೇಟೆ ಸ್ವಾಗತಿಸಿದರು. ಡಾ.ಗಂಗಮ್ಮ ಸತ್ಯಂಪೇಟೆ ವಂದಿಸಿದರು. ಶಿವಣ್ಣ ಇಜೇರಿ ಸಭೆಯನ್ನು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT