ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ದ್ವಿತೀಯಾರ್ಧ ಮಾರಾಟ ಪ್ರಗತಿ: ಮಾರುತಿ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಪ್ರಥಮಾರ್ಧದಲ್ಲಿ ಮಾರುತಿ ಕಾರು ಮಾರಾಟ ಆಶಾದಾಯಕವಾಗಿಲ್ಲದೇ ಇದ್ದರೂ, ದ್ವಿತೀಯಾರ್ಧದಲ್ಲಿ ಶೇ 8ರಿಂದ 10ರಷ್ಟು ಪ್ರಗತಿ ನಿರೀಕ್ಷಿಸಲಾಗಿದೆ ಎಂದು `ಮಾರುತಿ ಸುಜುಕಿ ಇಂಡಿಯ~(ಎಂಎಸ್‌ಐ) ಕಾರ್ಯನಿರ್ವಾಹಕ ನಿರ್ದೇಶಕ ಸಿ.ವಿ.ರಾಮನ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ `ಆಲ್ಟೊ-800~ ನೂತನ ಮಾದರಿ ಕಾರನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಅವರು, ಈ ಚಿಕ್ಕ ಕಾರನ್ನು ಮುಂದಿನ ಜನವರಿಯಿಂದ ಲ್ಯಾಟಿನ್ ಅಮೆರಿಕ ಮತ್ತು ದಕ್ಷಿಣ ಏಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲಾಗುವುದು ಎಂದರು.

`ಆಲ್ಟೊ ಮಾರಾಟವೇ ಕಳೆದ ವರ್ಷ 3 ಲಕ್ಷದಷ್ಟಿತ್ತು. ಈ ವರ್ಷದ ಪ್ರಥಮಾರ್ಧದಲ್ಲಿ ಕಾರ್ಮಿಕ ಗಲಭೆ ಕಾರಣದಿಂದ ಎಲ್ಲ ಕಾರುಗಳ ಮಾರಾಟವೂ ತಗ್ಗಿತು. ಈ ವರ್ಷ ಒಟ್ಟು ಮಾರಾಟದಲ್ಲಿ ಶೇ 3-5 ಪ್ರಗತಿ ನಿರೀಕ್ಷೆಇದೆ~ ಎಂದರು.

 

ಆಲ್ಟೊ ಹೊಸ ಮಾದರಿ ಅಭಿವೃದ್ಧಿಗೆ ರೂ. 470 ಕೋಟಿ ವೆಚ್ಚವಾಗಿದೆ. ಈ ಪುಟ್ಟ ಕಾರಿಗೆ ಡೀಸೆಲ್ ಎಂಜಿನ್ ಅಳವಡಿಸುವ ಚಿಂತನೆ ಸದ್ಯಕ್ಕಿಲ್ಲ. ಬಿಡಿಭಾಗ ದುಬಾರಿ, ಪೆಟ್ರೋಲ್-ಡೀಸೆಲ್ ದರಏರಿಕೆ.. ಕಾರು ಉದ್ಯಮಕ್ಕೆ ಎದುರಾಗಿರುವ ದೊಡ್ಡ ಸವಾಲುಗಳು ಎಂದು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕದ 1000 ಮಂದಿ ಸೇರಿದಂತೆ 10 ಸಾವಿರ ಗ್ರಾಹಕರು ಹೊಸ ಕಾರಿಗೆ ಬೇಡಿಕೆ ಸಲ್ಲಿಸಿದ್ದಾರೆ. ಬೆಂಗಳೂರಿ ನಿಂದ 600 ಬೇಡಿಕೆ ಬಂದಿದೆ ಎಂದು `ಎಂಎಸ್‌ಐ~ನ ಪ್ರಾದೇಶಿಕ ವ್ಯವಸ್ಥಾಪಕ ವಿವೇಕ್ ಆನಂದ್ ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT