ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಲ್ಲೇ ಸೋರುತ್ತಿರುವ ಮಿನಿ ವಿಧಾನಸೌಧ!

Last Updated 25 ಜುಲೈ 2013, 6:25 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಇಲ್ಲಿನ ಮಿನಿ ವಿಧಾನಸೌಧದ ಎಲ್ಲ ಕೋಣೆಗಳು ಉದ್ಘಾಟನೆಗೊಂಡ ಕೇವಲ ಒಂದು ವರ್ಷದಲ್ಲಿಯೇ ಸೋರುತ್ತಿದೆ. ಹೀಗಾಗಿ ಇನ್ನೂ ಕಂಪ್ಯೂಟರ್‌ಗೆ ಅಳವಡಿಸಬೇಕಾ ಗಿರುವ ಅಮೂಲ್ಯ ದಾಖಲೆಗಳು ಹಾಳಾಗುವ ಸಂಭವವಿದೆ.

ರೂ.1.63 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ ಅಧಿಕೃತ ಗುತ್ತಿಗೆದಾರರು ಆರ್.ಎಂ. ದಾಯಗೊಂಡ. ಆದರೆ ಅದನ್ನು ಅವ ರಿಂದ ಎರವಲು ಪಡೆದು ನಿರ್ಮಿಸಿದ ವರು ಬಿರಾದಾರ ಎನ್ನುವವರು. 2006ರಲ್ಲಿ ಕೇವಲ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ವಾಗಬೇಕಿದ್ದ ಈ ಕಟ್ಟಡದ ಕಾಮಗಾರಿ ಮೊತ್ತವನ್ನು 2011ರಲ್ಲಿ ಪರಿಷ್ಕೃತ ಗೊಳಿಸಿ 1.63 ಕೋಟಿ ರೂಪಾಯಿಗೆ ಏರಿಸಲಾಯಿತು. ಸತತ ಕುಂಟುತ್ತಲೇ ಸಾಗಿದ್ದ ಈ ಕಟ್ಟಡವನ್ನು 2012ರ ಮಾರ್ಚ್‌ನಲ್ಲಿ. ಆಗ ಮುಖ್ಯಮಂತ್ರಿ ಯಾಗಿದ್ದ ಜಗದೀಶ ಶೆಟ್ಟರ್ ಉದ್ಘಾಟಿಸಿದ್ದರು.

ಮಿನಿ ವಿಧಾನಸೌಧದ ಮೇಲೆ ಈಗಲೂ ನೀರು ನಿಂತಿದ್ದು, ಅದು ಸರಳವಾಗಿ ಹರಿದುಹೋಗದಂತೆ ಹರನಾಳಿಗೆಗಳನ್ನು ಸಹ ಮಾಡಿಲ್ಲ ಎಂಬುದು ಕಂಡುಬರುತ್ತದೆ.

`ಗುತ್ತಿಗೆದಾರರು ಮಾಡಿದ ಕಾಮ ಗಾರಿಯನ್ನು ಪರೀಕ್ಷಿಸಿ ಪ್ರಮಾಣಪತ್ರ ನೀಡಿದ ಬಳಿಕ ಸಂಬಂಧಿಸಿದ ಎಂಜಿನಿ ಯರ್ ಹಾಗೂ ಮುಖ್ಯ ಎಂಜಿನಿಯರ್ ಮೇಲೆ ಕ್ರಮ ಜರುಗಿಸಬೇಕು. ಗುತ್ತಿಗೆ ದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರಿಗೆ ಸರ್ಕಾರದ ಯಾವುದೇ ಟೆಂಡರ್ ದೊರೆಯದಂತೆ ಮಾಡ ಬೇಕು' ಎನ್ನುತ್ತಾರೆ ಪಟ್ಟಣದ ಬಸವೇಶ್ವರ ಬ್ಯಾಂಕ್ ಉಪಾಧ್ಯಕ್ಷ ಬಿ.ಎಸ್.ಮೇಟಿ.

`ಸರ್ಕಾರದ ಮುಖ್ಯ ಆಡಳಿತದ ಕಟ್ಟಡವನ್ನೇ ಸರಿಯಾಗಿ ಕಟ್ಟಿಲ್ಲ. ಬಿಲ್ ಹೇಗೆ ಪಾಸ್ ಮಾಡಿದರೋ ಆಶ್ಚರ್ಯ ಎನ್ನುತ್ತಾರೆ ಸಮಾಜಸೇವಕ ರಾಜು ದಡ್ಡಿ.

`ಈ  ಮೊದಲು ತಹಶೀಲ್ದಾರ್ ಆಗಿದ್ದ ಗೆಣ್ಣೂರ ಸಾಹೇಬ್ರು ಗುತ್ತಿಗೆ ದಾರರ ವಿರುದ್ಧ ರಿಪೋರ್ಟ್ ಬರೆ ದಿದ್ದರು. ಮುಂದೇನಾಯ್ತೋ      ಗೊತ್ತಿಲ್ಲ, ನಾವೇ ಕೈಲೆ ರೊಕ್ಕ ಹಾಕಿ ಈ ಪ್ಲಾಸ್ಟಿಕ್ ಹಾಳಿ ಹಾಕಿವ್ರಿ, ನಿನ್ನೆ ರಾತ್ರಿ ಬಕೀಟ್ಲೇ ನೀರು ತುಂಬಿ ಚೆಲ್ಲಿವ್ರಿ' ಎಂದು ಭೂ ದಾಖಲೆಗಳ ವಿಭಾಗದಲ್ಲಿ ಗುಮಾಸ್ತ ಕುಲಕರ್ಣಿ ಹಾಗೂ ಸಿಪಾಯಿ ಎಸ್.ಎಸ್.ಬಿರಾದಾರ.

`ನಾನು ಇಲ್ಲಿಗೆ ಬಂದಾಗ ಕಾಮಗಾರಿ ಮುಗಿಯುವುದರಲ್ಲಿತ್ತು' ಎಂದು ಹೇಳುತ್ತಾರೆ ತಾಲ್ಲೂಕು ಅಧಿಕಾರಿ ಗಳಾದ ಸಿ.ಎನ್.ಪಾಟೀಲ.
`ಎಕ್ಸ್‌ಪಾನ್ಸನ್ ಜ್ಯಾಯಿಂಟ್ ಇರ‌್ತದ, ಅಲ್ಲಿ ಲೀಕ್ ಆಗಾಕ್‌ಹತ್ಯಾದ, ಗುತ್ತಿಗೆದಾರರಿಗೆ ಹೇಳಿದ್ದೇವೆ, ಅವರು ಮಾಡುತ್ತಾರೆ' ಎನ್ನುತ್ತಾರೆ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಮುಖ್ಯಸ್ಥ ಆರ್.ಬಿ.ಪಾಟೀಲ.

`ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಹಾಗೂ ಅದನ್ನು ತಪಾಸಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಗಳಿಗೆ ಲಿಖಿತ ಮನವಿ ನೀಡಿದ್ದೇವೆ  ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಮಾಯಾಚಾರಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT