ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿಕೆಗಿಂತ ಹೆಚ್ಚು ಮಳೆ

Last Updated 1 ಆಗಸ್ಟ್ 2013, 10:38 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಈ ಬಾರಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1,669.86 ಮಿ.ಮೀ.ಗಳಾಗಿದ್ದು, 2013ರ ಜನವರಿಯಿಂದ ಜುಲೈ ಅಂತ್ಯದವರೆಗೆ 2,284.67 ಮಿ.ಮೀ. ಮಳೆಯಾಗಿದ್ದು, ಶೇ 136.82 ರಷ್ಟು ಮಳೆ ಹೆಚ್ಚಾಗಿದೆ. 2012ರಲ್ಲಿ 945.05 ಮಿ.ಮೀ. ಮಳೆಯಾಗಿದ್ದರೆ, 2011ರಲ್ಲಿ 1,609.23 ಮಿ.ಮೀ. ಮಳೆಯಾಗಿತ್ತು. 

ಮಡಿಕೇರಿ ತಾಲ್ಲೂಕಿನಲ್ಲಿ 2013ರ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1,992.30 ಮಿ.ಮೀ.ಗಳಾಗಿದೆ. 2013ರ ಜನವರಿಯಿಂದ ಜುಲೈ 31 ರವರೆಗೆ 3,233.67 ಮಿ.ಮೀ. ಮಳೆಯಾಗಿದೆ. ಈ ಬಾರಿ ಜನವರಿಯಿಂದ ಜುಲೈ ಅಂತ್ಯದವರೆಗೆ ಶೇ 136.82ರಷ್ಟು ಮಳೆ ಸುರಿದಿದೆ. 

ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1,294 ಮಿ.ಮೀ.ಗಳಾಗಿದ್ದು, 2013ರ ಜನವರಿಯಿಂದ ಇಲ್ಲಿಯವರೆಗೆ 1,943.24 ಮಿ.ಮೀ.ರಷ್ಟು ಮಳೆಯಾಗಿದೆ. 

ವಿರಾಜಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1,723.30 ಮಿ.ಮೀ.ಗಳಾಗಿದ್ದು, 2013ರ ಜನವರಿಯಿಂದ ಇಲ್ಲಿಯವರೆಗಿನ 1,677.09 ಮಿ.ಮೀ.ರಷ್ಟು ಮಳೆಯಾಗಿದೆ.

ಮಳೆ ಅಬ್ಬರ: ಕೋಟ್ಯಂತರ ಹಾನಿ
ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜೂನ್ 1 ರಿಂದ ಇಲ್ಲಿಯವರೆಗೆ ಪ್ರವಾಹದಿಂದ ಕೋಟ್ಯಂತರ ಮೊತ್ತದ ಆಸ್ತಿ ಹೆಚ್ಚು ಹಾನಿಯಾಗಿದೆ ಎಂದು ಉಪ ವಿಭಾಗಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.

ಮೂವರು ವ್ಯಕ್ತಿಗಳು ಪ್ರವಾಹಕ್ಕೆ ತುತ್ತಾಗಿದ್ದಾರೆ. ಏಳು ಜಾನುವಾರುಗಳು ಮೃತಪಟ್ಟಿವೆ. 161 ಮನೆಗಳು ಭಾಗಶಃ ಮತ್ತು 7 ಮನೆಗಳು ಪೂರ್ಣ ಹಾನಿಯಾಗಿದ್ದು, 7 ಮನೆ ಸಂಪೂರ್ಣ ಹಾನಿಗೊಂಡಿವೆ.

ಲೋಕೋಪಯೋಗಿ ವ್ಯಾಪ್ತಿಯ ರಸ್ತೆಗಳು ಸುಮಾರು ರೂ 71.70 ಲಕ್ಷ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ರೂ 237 ಲಕ್ಷ ಹಾಗೆಯೇ ಸೆಸ್ಕ್ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಸುಮಾರು ರೂ 64.73 ಲಕ್ಷ ಹಾನಿ ಉಂಟಾಗಿದೆ. ತೋಟಗಾರಿಕೆ ಬೆಳೆ 39.96 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದ್ದು ಸುಮಾರು ರೂ 66.59 ಲಕ್ಷ, ಕೃಷಿ ವ್ಯಾಪ್ತಿಯಲ್ಲಿ 25.76 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT