ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ಕೌಶಲ ತರಬೇತಿ ಕೇಂದ್ರ ಆರಂಭ

Last Updated 22 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಿರುದ್ಯೋಗಿ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಉಚಿತ ವಾಗಿ ಹೊಲಿಗೆ, ಮೇಣದ ಬತ್ತಿ ತಯಾರಿ ಬಗ್ಗೆ ಕೌಶಲ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಲೋಕಿ ಪೌಂಡೇಷನ್ ಅಧ್ಯಕ್ಷ ಬಳುವನಹಳ್ಳಿ ಲೊಕೇಶ್ ತಿಳಿಸಿದರು.

ತಾಲ್ಲೂಕಿನಿಂದ ದೇವನಹಳ್ಳಿ, ಯಲಹಂಕ, ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಲು ತಾಲ್ಲೂಕಿನ ನೂರಾರು ಮಹಿಳೆಯರು ದಿನನಿತ್ಯ ಹೋಗುತ್ತಿದ್ದಾರೆ. ಆದರೆ ಇವರಲ್ಲಿ ಬಹುತೇಕರು ವೃತ್ತಿ ಕೌಶಲದಿಂದ ವಂಚಿತ ರಾಗಿರುವುದರಿಂದ ಕಡಿಮೆ ಸಂಬಳ ಪಡೆಯುತ್ತಿದ್ದಾರೆ.

ಅದನ್ನು ತಪ್ಪಿಸುವುದಕ್ಕಾಗಿ ಉತ್ತಮ ತಂತ್ರಜ್ಞಾನಾಧಾರಿತ ಪವರ್‌ಮಿಷನ್ ಬಳಕೆ ಕುರಿತು ತರಬೇತಿ ನೀಡಲಾಗುತ್ತದೆ. ನಮ್ಮ ಸಂಸ್ಥೆ ಯು ಕೆಲ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿ ಕೊಂಡಿದೆ. ಇಲ್ಲಿ ಅರ್ಹತೆ ತಕ್ಕ ಕೆಲಸ ಮತ್ತು ವೇತನ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಉತ್ಪಾದನೆಗೆ ಅಗತ್ಯ  ಕಚ್ಚಾ ವಸ್ತುಗಳನ್ನು ಸಂಸ್ಥೆ ವತಿಯಿಂದಲೇ ವಿತರಿಸಲಾಗುತ್ತದೆ. ಆಸಕ್ತರು ಮೇಣದ ಬತ್ತಿ ಹಾಗೂ ಅಗರಬತ್ತಿ ತಯಾರು ಮಾಡುವ ಯಂತ್ರವನ್ನು ಖರೀದಿಸಲು ಮಾತ್ರ ಬಂಡವಾಳ ಹೂಡಬೇಕಾಗುತ್ತದೆ. ಯಂತ್ರ ಖರೀ ದಿಗೆ ಸಾಲ ಸೌಲಭ್ಯ ಕೊಡಿಸಲು ಬ್ಯಾಂಕಿನವರ ಜತೆಗೆ ಮಾತನಾಡಿ ಸಾಲ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಲೊಕೇಶ್ ಹೇಳಿದರು.

 ಮುಂದಿನ ವಾರದೊಳಗೆ ತರಬೇತಿ ಕೇಂದ್ರವನ್ನು ಪಟ್ಟಣದ ಸಂಸ್ಥೆ ಕಚೇರಿಯಲ್ಲಿ  ಆರಂಭಿಸಲಾಗು ವುದು. ಇದೀಗ 8 ಪವರ್ ಮಿಷನ್‌ಗಳಿದ್ದು ಅಗತ್ಯವಾದಲ್ಲಿ ಅವುಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಲಾಗುವುದು. ಮುಂದಿನ ವಾರ ಕೇಂದ್ರವನ್ನು ಆರಂಭಿಸ ಲಾಗುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಮ್ಮ ಭಾರ ದ್ವಾಜ್ ಉದ್ಘಾಟಿಸಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಸುರೇಖಾ ಮತ್ತಿತರರು ಭಾಗವಹಿಸುವರು ಎಂದು ಹೇಳಿದರು.

ಆಸಕ್ತರು ಲೋಕಿ ಪೌಂಡೇಷನ್ ಕಚೇರಿ, ಕ್ರಸೆಂಟ್ ಶಾಲೆ ಸಮೀಪ, ಶಿಡ್ಲಘಟ್ಟ. ಮೊ.9342449969 ಅಥವಾ 94482 63396 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT