ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಆಟ ಮೆಚ್ಚಿದ ದೋನಿ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಐಪಿಎಲ್ ಐದನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಲು ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಆರ್ಭಟಿಸಿದ ಮುರಳಿ ವಿಜಯ್ ಪ್ರದರ್ಶನಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ದೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

`ವಿಜಯ್ ಜೊತೆಗೆ ಮೈಕ್ ಹಸ್ಸಿ ಹಾಗೂ ಡ್ವೇನ್ ಬ್ರಾವೊ ಸಹ ಈ ಗೆಲುವಿಗೆ ಕಾಣಿಕೆ ನೀಡಿದರು. ಹಸ್ಸಿ ಹಾಗೂ ವಿಜಯ್ ಉತ್ತಮ ಆರಂಭ ಒದಗಿಸಿದರು~ ಎಂದು ದೋನಿ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಶುಕ್ರವಾರ ರಾತ್ರಿ ನಡೆದ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಸೂಪರ್ ಕಿಂಗ್ಸ್ 86 ರನ್‌ಗಳ ಗೆಲುವು ಸಾಧಿಸಿತ್ತು. ಈ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 222 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಡೆವಿಲ್ಸ್ 16.5 ಓವರ್‌ಗಳಲ್ಲಿ 136 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಗೆಲುವಿನ ಮೂಲಕ ದೋನಿ ಪಡೆ ಫೈನಲ್‌ಗೆ ಲಗ್ಗೆ ಇಟ್ಟಿತು.

ಮಾರ್ಕೆಲ್ ಬಿಟ್ಟು ತಪ್ಪು ಮಾಡಿದೆವು: `ಈ ಸಲದ ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್ ಪಡೆದು `ಆರೇಂಜ್ ಕ್ಯಾಪ್~ ಗಳಿಸಿದ್ದ ಮಾರ್ನ್ ಮಾರ್ಕೆಲ್ ಅವರನ್ನು ಮಹತ್ವದ ಪಂದ್ಯದಿಂದ ಕೈಬಿಟ್ಟು ತಪ್ಪು ಮಾಡಿದೆವು~ ಎಂದು ಡೇರ್‌ಡೆವಿಲ್ಸ್ ನಾಯಕ ವೀರೇಂದ್ರ ಸೆಹ್ವಾಗ್ ನುಡಿದರು.

`ಇರ್ಫಾನ್ ಪಠಾಣ್ ಗಾಯಗೊಂಡಿದ್ದ ಕಾರಣ ಅವರನ್ನು ಕೈ ಬಿಟ್ಟೆವು. ಆದರೆ, ಮಾರ್ಕೆಲ್ ಈ ಪಂದ್ಯಕ್ಕೆ ಅಗತ್ಯವಿತ್ತು~ ಎನ್ನುವ ಅಂಶವನ್ನು ಅವರು ಒತ್ತಿ ಹೇಳಿದರು. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯದ ವೇಳೆ ಪಠಾಣ್ ಕೈಗೆ ಗಾಯಮಾಡಿಕೊಂಡಿದ್ದರು.

`ಈ ಪಿಚ್‌ನಲ್ಲಿ 180 ರನ್ ಗಳಿಸಿದ್ದರೆ, ಗುರಿ ಮುಟ್ಟಲು ಸಾಧ್ಯವಿತ್ತು. ಆದರೆ 200 ರನ್ ಗಡಿ ದಾಟಿದ ಕಾರಣ ಗುರಿ ಕಷ್ಟವೆನಿಸಿತು. ಇದಕ್ಕೆ ಮುರಳಿ ಬ್ಯಾಟಿಂಗ್ ಕಾರಣವಾಯಿತು. ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತೇವೆ ಎನ್ನುವ ನಿರೀಕ್ಷೆ ಮಾಡಿರಲಿಲ್ಲ~ ಎಂದು ಸೆಹ್ವಾಗ್ ಹೇಳಿದರು.

ಸ್ಕೋರ್ ವಿವರ:
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 222
ಡೆಲ್ಲಿ ಡೇರ್‌ಡೆವಿಲ್ಸ್: 16.5 ಓವರುಗಳಲ್ಲಿ 136
ಮಾಹೇಲ ಜಯವರ್ಧನೆ ಬಿ ರವಿಚಂದ್ರನ್ ಅಶ್ವಿನ್  55
ಡೇವಿಡ್ ವಾರ್ನರ್ ಸಿ ಮುರಳಿ ವಿಜಯ್ ಬಿ ಬೆನ್ ಹಿಲ್ಫೆನ್ಹಾಸ್  03
ವೀರೇಂದ್ರ ಸೆಹ್ವಾಗ್ ಸಿ ಮೈಕ್ ಹಸ್ಸಿ ಬಿ ಅಲ್ಬಿ ಮಾರ್ಕೆಲ್  01
ರಾಸ್ ಟೇಲರ್ ಸಿ ಸುರೇಶ್ ರೈನಾ ಬಿ ಡ್ವೇನ್ ಬ್ರಾವೊ  24
ಆ್ಯಂಡ್ರೆ ರಸೆಲ್ ಸಿ ಡ್ವೇನ್ ಬ್ರಾವೊ ಬಿ ರವಿಚಂದ್ರನ್ ಅಶ್ವಿನ್  17
ನಮನ್ ಓಜಾ ಸಿ ಮುರಳಿ ವಿಜಯ್ ಬಿ ಶದಾಬ್ ಜಕಾತಿ  07
ವೈ.ವೇಣುಗೋಪಾಲ್ ರಾವ್ ರನ್‌ಔಟ್ (ಬ್ರಾವೊ/ಅಶ್ವಿನ್)  10
ಪವನ್ ನೇಗಿ ಔಟಾಗದೆ  08
ಸನ್ನಿ ಗುಪ್ತಾ ಸ್ಟಂಪ್ಡ್ ಮಹೇಂದ್ರ ಸಿಂಗ್ ದೋನಿ ಬಿ ಶದಾಬ್ ಜಕಾತಿ  00
ಉಮೇಶ್ ಯಾದವ್ ಬಿ ರವಿಚಂದ್ರನ್ ಅಶ್ವಿನ್  01
ವರುಣ್ ಆ್ಯರನ್ ರನ್‌ಔಟ್ (ಮಹೇಂದ್ರ ಸಿಂಗ್ ದೋನಿ)  00
ಇತರೆ: (ಬೈ-1, ಲೆಗ್‌ಬೈ-2, ವೈಡ್-7)  10
ವಿಕೆಟ್ ಪತನ: 1-17 (ಡೇವಿಡ್ ವಾರ್ನರ್; 2.2), 2-22 (ವೀರೇಂದ್ರ ಸೆಹ್ವಾಗ್; 3.4), 3-74 (ರಾಸ್ ಟೇಲರ್; 8.2), 4-106 (ಆ್ಯಂಡ್ರೆ ರಸೆಲ್; 11.4), 5-117 (ನಮನ್ ಓಜಾ; 13.2), 6-127 (ಮಾಹೇಲ ಜಯವರ್ಧನೆ; 14.4), 7-127 (ವೈ.ವೇಣುಗೋಪಾಲ್ ರಾವ್; 14.5), 8-135 (ಸನ್ನಿ ಗುಪ್ತಾ; 15.5), 9-136 (ಉಮೇಶ್ ಯಾದವ್; 16.3), 10-136 (ವರುಣ್ ಆ್ಯರನ್; 16.5).
ಬೌಲಿಂಗ್: ಬೆನ್ ಹಿಲ್ಫೆನ್ಹಾಸ್ 3-0-17-1 (ವೈಡ್-2), ಅಲ್ಬಿ ಮಾರ್ಕೆಲ್ 3-0-28-1, ಶದಾಬ್ ಜಕಾತಿ 4-0-40-2, ರವಿಚಂದ್ರನ್ ಅಶ್ವಿನ್ 3.5-0-23-3 (ವೈಡ್-1), ಡ್ವೇನ್ ಬ್ರಾವೊ 3-0-24-1 (ವೈಡ್-2).
ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 86 ರನ್‌ಗಳ ಗೆಲುವು.
ಪಂದ್ಯ ಶ್ರೇಷ್ಠ: ಮುರಳಿ ವಿಜಯ್ (ಸೂಪರ್ ಕಿಂಗ್ಸ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT