ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯ- ಡೈರೆಕ್ಟ್‌ರೇಟ್ ಆಫ್ ಡಿಸ್ಟನ್ಸ್ ಎಜ್ಯುಕೇಷನ್ (ಎಸ್‌ಎಂಯು-ಡಿಡಿಇ) ಕಾರ್ಯಕ್ರಮದ ಅಡಿ ವ್ಯಾಸಂಗ ಮಾಡುತ್ತಿರುವ 1500 ಪ್ರತಿಭಾವಂತ ವಿದ್ಯಾರ್ಥಿಗಳಿಗೆ `ವಿದ್ಯಾದೀಪ~ ರಾಷ್ಟ್ರೀಯ ಮಟ್ಟದ ಪ್ರತಿಭಾ ಪುರಸ್ಕಾರ ಪ್ರಕಟಿಸಲಾಗಿದೆ.
ವಿಶ್ವವಿದ್ಯಾಲಯದ ಅಡಿ ಎಸ್‌ಎಂಯು-ಡಿಡಿಇ ಓದುತ್ತಿರುವ ವಿದ್ಯಾರ್ಥಿಗಳು ಈ ಕಲಿಕೆಗೆ ಅರ್ಹರಾಗಿರುತ್ತಾರೆ. ಪ್ರತಿಭಾ ಪುರಸ್ಕಾರ ಶೇ.100ರಷ್ಟು ಟ್ಯೂಷನ್ ಶುಲ್ಕವನ್ನು ಒಳಗೊಂಡಿರುತ್ತದೆ. ಈ ಅವಕಾಶವನ್ನು ವಿವಿ ಅಡಿ ಐಟಿ, ಮ್ಯೋನೇಜ್‌ಮೆಂಟ್, ಪತ್ರಿಕೋದ್ಯಮ, ಫ್ಯಾಷನ್, ಹಾಸ್ಪಿಟಾಲಿಟಿ, ಪ್ರವಾಸೋದ್ಯಮ, ಅಲೈಡ್ ಹೆಲ್ತ್, ಬಯೊಟೆಕ್ನಾಲಜಿ ಹಾಗೂ ಬಯೊ ಇನ್‌ಫಾರ್ಮೆಟಿಸ್ ತರಬೇತಿ ಪಡೆಯುತ್ತಿರುವವರು ಪಡೆಯಬಹುದು.
ಪ್ರತಿಭಾ ಪುರಸ್ಕಾರ ಪಡೆದ 1500 ವಿದ್ಯಾರ್ಥಿಗಳಲ್ಲಿ 500 ಮಂದಿ ಈಶಾನ್ಯ ಭಾಗದಲ್ಲಿ ಕಲಿಯುವ ಅವಕಾಶ ಪಡೆಯಲಿದ್ದಾರೆ.
ವೆಬ್‌ಸೈಟ್ ವಿಳಾಸ:http://www.smude.edu.in/Admissions/Pages/Scholarships.aspx