ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಅನಿವಾರ್ಯ

Last Updated 6 ಜನವರಿ 2012, 9:40 IST
ಅಕ್ಷರ ಗಾತ್ರ

ಹುಣಸೂರು: ಪಠ್ಯ ಬೋಧನೆಯೊಂದಿಗೆ ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಾಯೋಗಿಕ ಬೋಧನೆ ಅನಿವಾರ್ಯವಾಗಿದೆ ಎಂದು ರೋಟರಿ ಸಂಸ್ಥೆಯ 2013ರ ಉಪ ರಾಜ್ಯಪಾಲ ಜವರೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ಪಠ್ಯೋಪಕರಣ ಮೇಳವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಸಾಮಾನ್ಯ ಜ್ಞಾನದ ಅವಶ್ಯಕತೆ ಹೆಚ್ಚಿದೆ. ಶಿಕ್ಷಕರು ಪಠ್ಯಪುಸ್ತಕಕ್ಕೆ ಸೀಮಿತಗೊಳ್ಳದೆ ವಿಜ್ಞಾನಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನವನ್ನು ತಿಳಿ ಹೇಳಬೇಕಾಗಿದೆ ಎಂದರು.

ವಿಜ್ಞಾನ ತಿಳಿದಿರುವವ ಪ್ರಪಂಚದ ಯಾವುದೇ ಭಾಗದಲ್ಲಾದರೂ ಯಶಸ್ಸು ಕಾಣಬಹುದು. ಭಾರತ ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಮಾಹಿತಿ ತಂತ್ರಜ್ಞಾನದಲ್ಲಿ ದಾಪುಗಾಲು ಇಡುತ್ತಿದೆ ಎಂದರು.

ಹುಣಸೂರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಆನಂದರಾಜ್ ಮಾತನಾಡಿ, ವಿಜ್ಞಾನ ಜೀವನದ ಪ್ರಮುಖ ಭಾಗವಾಗಿದೆ. ವಿಜ್ಞಾನವಿಲ್ಲದ ಬದುಕು ಸಾಗಿಸಲು ಅಸಾಧ್ಯ ಎಂಬ ಹಂತಕ್ಕೆ ನಾವೀಗ ತಲುಪಿದ್ದೇವೆ ಎಂದರು.

ಭಾರತವನ್ನು ಮುಂದುವರೆದ ರಾಷ್ಟ್ರಗಳು ಆರ್ಥಿಕ ಮತ್ತು ವೈಜ್ಞಾನಿಕವಾಗಿ ಹಿಂದುಳಿದ ದೇಶ ಎನ್ನುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಕಂಪ್ಯೂಟರ್ ಯುಗದಲ್ಲಿ ಇತಿಹಾಸವನ್ನೇ ನಿರ್ಮಿಸಿದ ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ರೋಟರಿ ಶಾಲೆ ಅಧ್ಯಕ್ಷ ತಿಮ್ಮೆಗೌಡ ಮಾತನಾಡಿ, ಮಕ್ಕಳಲ್ಲಿ ತಿದ್ದಿಕೊಳ್ಳುವ ಮನೋಭಾವ ಹುಟ್ಟಿಸಬೇಕು. ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರತಿಯೊಂದು ಹಂತದಲ್ಲಿ ಪ್ರಶ್ನಿಸಿ ಉತ್ತರ ಪಡೆಯುವ ಪ್ರವೃತ್ತಿಯನ್ನು ಬೆಳೆಸಬೇಕಾಗಿದೆ. ಪ್ರಶ್ನೆಗಳು ಮಕ್ಕಳ ಮನಸ್ಸಿನಲ್ಲಿ ಹುಟ್ಟಿಟಿದಾಗ ಆ ಮಗುವಿಗೆ ಸಂಬಂಧಿಸಿದ ವಿಷಯ ಅರ್ಥವಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷೆ ಡಾ. ಸರೋಜಿನಿ ವಿಕ್ರಂ, ರೋಟರಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಚ್.ಎಸ್. ಸಚ್ಚಿತ್, ಸದಸ್ಯರಾದ ಟಿ.ಎಸ್. ರಾಮಚಂದ್ರನ್, ಡಾ.ವೃಷಬೇಂದ್ರಪ್ಪ, ತಂಗಮಾರಿಯಪ್ಪನ್, ನಾಗೇಂದ್ರ, ಶಿವಕುಮಾರ್, ಹನಗೋಡು ನಟರಾಜ್ ಇದ್ದರು.

ವಿಜ್ಞಾನ ಮೇಳದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳು ವಿವಿಧ ಮಾದರಿಗಳನ್ನು ಸಿದ್ಧಪಡಿಸಿ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT