ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಸ್ವಾಧೀನಕ್ಕೆ ಮುಂದಾದ ಮಾಲ್ಡೀವ್ಸ್

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಮಾಲೆ/ನವದೆಹಲಿ (ಪಿಟಿಐ): ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ ವಿವಾದದಲ್ಲಿ ಗುತ್ತಿಗೆ ರದ್ದು ಆದೇಶಕ್ಕೆ ಸಿಂಗಪುರ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಅದನ್ನು ಗೌರವಿಸದ ಮಾಲ್ಡೀವ್ಸ್ ಸರ್ಕಾರ, ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ.

ಈ ವಿಷಯದಲ್ಲಿ ತನ್ನ ನಿಲುವನ್ನು ಭಾರತಕ್ಕೆ ಮನವರಿಕೆ ಮಾಡಿಕೊಡಲು ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸುವುದಾಗಿಯೂ ಹೇಳಿದೆ.

ಭಾರತೀಯ ಮೂಲದ ನಿರ್ಮಾಣ ಕಂಪೆನಿ `ಜಿಎಂಆರ್' ಪಡೆದಿದ್ದ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ ಗುತ್ತಿಗೆಯನ್ನು ರದ್ದು ಮಾಡಿದ್ದ ಮಾಲ್ಡೀವ್ಸ್ ಸರ್ಕಾರದ ಆದೇಶಕ್ಕೆ ಸಿಂಗಪುರದ ಹೈಕೋರ್ಟ್ ಸೋಮವಾರವಷ್ಟೆ ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT