ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೂಪಾಕ್ಷನ ಸನ್ನಿಧಿಯಲ್ಲಿ ರಂಗಪ್ರವೇಶ

Last Updated 30 ಜೂನ್ 2011, 6:25 IST
ಅಕ್ಷರ ಗಾತ್ರ

ಹೊಸಪೇಟೆ: ಧಾರವಾಡದ ಸರ್ವೇಶ್ ಮನ್ವಾಚಾರ್ ಹಾಗೂ ಸೃಷ್ಟಿ ಕುಲಕರ್ಣಿ ದಕ್ಷಿಣ ಕಾಶಿ ಎಂದೇ ಖ್ಯಾತವಾದ ಹಂಪಿಯ ವಿರೂಪಾಕ್ಷನ ಸನ್ನಿದಿಯಲ್ಲಿ ಭರತನಾಟ್ಯ ಪ್ರದರ್ಶಿಸುವ ಮೂಲಕ ತಮ್ಮ ಹರಕೆಯ ಮೂರನೆ ಪ್ರದರ್ಶನ ತೀರಿಸಿದರು.

ಈಗಾಗಲೇ ಇಡಗುಂಜಿ ಬಾದಾಮಿ- ಬನಶಂಕರಿಯಲ್ಲಿ ಸೇವೆ ಮುಗಿಸಿರುವ ಇವರು ಮಂಗಳವಾರ ರಾತ್ರಿ ಹಂಪಿಯಲ್ಲಿ ಸೇವೆ ಮಾಡಿದರು.ನಂತರ ಶೃಂಗೇರಿ ಹಾಗೂ ಮೈಸೂರಿನ ಜಾಮುಂಡೇಶ್ವರಿಯ ಮುಂದೆ ನಾಟ್ಯ ಸೇವೆ ಸಲ್ಲಿಸುವ ಮೂಲಕ ನಾಟ್ಯರಂಗ ಪ್ರವೇಶ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಹಂಪಿ ವಿರೂಪಾಕ್ಷ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಹೇಶ ನಮ್ಮ ಸಾಂಪ್ರದಾಯಿಕ ಕಲಾ ಸೇವೆಯನ್ನು ಮುಂದುವರೆಸುವ ಕಾಯಕ ಯುವ ಪೀಳಿಗೆಯಿಂದಾಗ ಬೇಕು ಇಂತಹ ಕಾರ್ಯ ನಿರ್ವಹಿಸಿದ ಇವರ ಸೇವೆ ಅನುಕರಣೀಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT