ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಅನ್ನಭಾಗ್ಯ ಯೋಜನೆಗೆ ಚಾಲನೆ

Last Updated 18 ಜುಲೈ 2013, 8:44 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿಯ ವಿವಿಧ ನ್ಯಾಯಬೆಲೆ ಅಂಗಡಿಗಳು ಮತ್ತು ಸಹಕಾರ ಸಂಘಗಳಲ್ಲಿ ಬುಧವಾರ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು.

ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ್ ಅವರು ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿಯನ್ನು ವಿತರಿಸಿದರು, ಸಂಘದ ಮಾಜಿ ಅಧ್ಯಕ್ಷ ಮುರುಳಿಧರ್, ಸಂಘದ ಆಡಳಿತ ಅಧಿಕಾರಿ ಮಧು ಇದ್ದರು.

ಹೋಬಳಿಯ ಆರಕೆರೆ ಮತ್ತು ಮತಿಘಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಿ.ಜಿ. ಅಂಬಿಕಾರಾಮಕೃಷ್ಣ ಅಕ್ಕಿ ವಿತರಿಸಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಮತಿಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜಾಚಾರ್ ಉಪಾಧ್ಯಕ್ಷೆ ರತ್ನಮ್ಮ ಇದ್ದರು.

ಸಕಲೇಶಪುರ ವರದಿ: ತಾಲ್ಲೂಕಿನ ಯಸಳೂರು ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಗೆ  ಸಂಘದ ಅಧ್ಯಕ್ಷ ಕೆ.ಕೆ. ಕೆಂಚೇಗೌಡ ಅವರು ಬುಧವಾರ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೈ.ಜೆ.ದೇವೇಂದ್ರ, ಮಾಜಿ ಅಧ್ಯಕ್ಷ ತಾಸಿನಾ ಸಿರಾಜ್, ಸದಸ್ಯರುಗಳಾದ ಬಿ.ಡಿ.ಮಮತ ದೇವರಾಜ್, ತಾಲ್ಲೂಕು ಕೃಷಿ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಸನ್ನಕುಮಾರ್, ಮಾಜಿ ನಿರ್ದೇಶಕ ಕೆ.ಸಿ. ಶಶಿಶೇಖರ್, ಸಂಘದ ಆಡಳಿತ ಮಂಡಳಿ ಸದಸ್ಯರಾದ ಕೆ.ಸಿ. ತಿರುಮಲಪ್ಪ, ಬಿ.ಎಸ್. ಚಂದ್ರ ಶೇಖರ್, ವೈ.ಎಲ್. ಯೋಗೇಶ್. ಟಿ.ಎಸ್. ಗುರುಮೂರ್ತಿ, ಟಿ.ಎಸ್. ಉಮಾದೇವಿ, ಯಸಳೂರು ಕಾಂಗ್ರೆಸ್ ಮುಖಂಡ ಎಂ.ಎನ್. ಧರ್ಮಪ್ಪ, ವಿಜಯ್‌ಕುಮಾರ್, ಚನ್ನಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT