ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ಶುಲ್ಕ: ಚುನಾವಣೆ ಬಳಿಕ ಮರುಪರಿಶೀಲನೆ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಐಎಎನ್‌ಎಸ್):  ವೀಸಾ ಶುಲ್ಕ ಹೆಚ್ಚಳ ವಿಚಾರವನ್ನು ಅಧ್ಯಕ್ಷೀಯ ಚುನಾವಣೆಯ ಬಳಿಕ ಮರುಪರಿಶೀಲಿಸುವುದಾಗಿ ಅಮೆರಿಕ ಭಾರತಕ್ಕೆ ಹೇಳಿದೆ.

ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ವಿದೇಶಾಂಗ  ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅವರ ನಡುವಿನ ಮಾತುಕತೆಯ ವೇಳೆ ಅಮೆರಿಕ ಈ ವಿಚಾರವನ್ನು ಭಾರತಕ್ಕೆ ಮನವರಿಕೆ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವೀಸಾ ಶುಲ್ಕ ಹೆಚ್ಚಳ ವಿಚಾರದಲ್ಲಿ ಭಾರತ ವ್ಯಕ್ತಪಡಿಸಿರುವ ಕಳವಳ ಅಮೆರಿಕಕ್ಕೆ ಅರ್ಥವಾಗುತ್ತದೆ. ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ಬಳಿಕ ಈ ವಿಚಾರವನ್ನು ಸರ್ಕಾರ ವಿಸ್ತೃತವಾಗಿ ಪುನರ್ ಪರಿಶೀಲನೆ ನಡೆಸಲಿದೆ ಎಂದು ಹಿಲರಿ ಕ್ಲಿಂಟನ್ ಅವರು ಎಸ್. ಎಂ. ಕೃಷ್ಣ ಅವರಿಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

ವೃತ್ತಿಪರರಿಗೆ ನೀಡುವ ವೀಸಾದ ಶುಲ್ಕವನ್ನು ಅಮೆರಿಕ 2010ರಲ್ಲಿ ಏರಿಸಿತ್ತು. ಇದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT