ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ದಂಪತಿಯ ಎಮು, ಮೊಲ ಪ್ರೀತಿ

Last Updated 14 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

 ರೋಣ ಹೊರವಲಯದ ಹೊಲದಲ್ಲಿ 30 * 16 ಹಾಗೂ 40 * 40 ಜಾಗದಲ್ಲಿ ಮಂಜುನಾಥ ನವಲಗನ್ ದಂಪತಿ ಒಂದು ಚಿಕ್ಕ ಫಾರ್ಮ್ ಹೌಸ್ ತೆರೆಯುವ ಮೂಲಕ ಇಂದಿನ ನಿರುದ್ಯೋಗಿ ಯುವಕರಿಗೆ ಸ್ವ ಉದ್ಯೋಗದ ಪಾಠ ಬೋಧಿಸುತ್ತಿದ್ದಾರೆ.  ಮಂಜುನಾಥ ನವಲಗನ್ ಹಾಗೂ  ಅವರ ಪತ್ನಿ ನಾಗರತ್ನ ನವಲಗನ್  ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಹಾಗೂ ಮಂಜುನಾಥ್ ಅವರು ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಈ ದಂಪತಿ, ಪಟ್ಟಣದ ನವಲಗುಂದ ಎಂಬುವರ ಹೊಲದಲ್ಲಿ ವರ್ಷಕ್ಕೆ 15 ಸಾವಿರ ರೂಗಳಂತೆ ಜಾಗವನ್ನು ಗುತ್ತಿಗೆಗೆ ಪಡೆದು ಎಮು ಹಾಗೂ ಮೊಲ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ.

ಸಾಕಾಣಿಕೆ ಹೇಗೆ: 30*16 ಅಡಿ ಜಾಗದಲ್ಲಿ ಒಂದು ಚಿಕ್ಕ ತಗಡಿನ ಶೆಡ್ಡ್‌ನ್ನು ನಿರ್ಮಿಸಿ ಅದರಲ್ಲಿ 5 ಹೊಸ ತಳಿಯ 70 ಮೊಲಗಳನ್ನು ಸಾಕಲಾಗಿದೆ.

  ಅಮೆರಿಕಾ, ರಷ್ಯಾ  ಹಾಗೂ ಆಸ್ಟ್ರೇಲಿಯಾ ದೇಶದ ಹೊಸ ತಳಿಗಳ ಮೊಲಗಳು ತರಿಸಲಾಗಿದ್ದು ಪ್ರತಿ ಮೊಲವು 3ರಿಂದ 5 ಕೆ.ಜಿ.ವರೆಗೆ ತೂಗುತ್ತವೆ. ಮೊದಲು1ಲಕ್ಷ ರೂಗಳ ಬಂಡವಾಳ ತೊಡಗಿಸಿ 70 ಮೊಲಗಳನ್ನು ಸಾಕಿದ್ದು ಮೊಲಗಳಿಂದ ಉತ್ತಮ ಅದಾಯ ಬರುತ್ತಿದೆ ಎಂದು ಎನ್ನುತ್ತಾರೆ ಮಂಜುನಾಥ.

ಆಹಾರ ಪದ್ಧತಿ : ದಿನಂಪ್ರತಿ ಬೆಳಿಗ್ಗೆ ಗೋವಿನ ಜೋಳ, ಅಕ್ಕಿ, ಗೋಧಿ, ನುಚ್ಚಿನ ಜೊತೆಗೆ ನ್ಯೂಟ್ರಿಷಿಯನ್  ಪೌಡರ್‌ನ್ನು ಬಳಸಿ ಆಹಾರ ಸಿದ್ಧಪಡಿಸಿ ಪೂರೈಸಲಾಗುವುದು. ಒಂದು ದಿನಕ್ಕೆ 70 ಮೊಲಗಳಿಗೆ 15 ರಿಂದ 20 ರೂಗಳು ಖರ್ಚಾಗುತ್ತದೆ. ಅಲ್ಲದೆ ಮಧ್ಯಾಹ್ನ ಹಾಗೂ ರಾತ್ರಿ ಕುದರೆ ಮೆಂತೆ ಸೊಪ್ಪನ್ನು ಆಹಾರವಾಗಿ ನೀಡಲಾಗುತ್ತಿದೆ.

ಎಮು ಕೋಳಿ ಸಾಕಾಣಿಕೆ : 3ಲಕ್ಷ ರೂ ಗಳನ್ನು ತೊಡಗಿಸಿ 40*40 ರ ಜಾಗದಲ್ಲಿ 20 ಎಮು ಕೋಳಿಗಳನ್ನು ಸಾಕಿರುವ ಇವರು ಅದರ ಜೊತೆಗೆ ಲವ್ ಬರ್ಡ್  ಹಾಗೂ ಪಾರಿವಾಳಗಳನ್ನು ಸಲಹುತ್ತಿದ್ದಾರೆ. ಎಮು ಕೋಳಿಯಿಂದ ಬಹು ಲಾಭಂಶವನ್ನು ನಿರೀಕ್ಷೆ ಮಾಡಿರುವ ದಂಪತಿ,  ಎಮು ವಿಷಯದಲ್ಲಿ ಉತ್ತಮ ಮಾರುಕಟ್ಟೆ ಸೌಲಭ್ಯವಿದೆ ಎನ್ನುತ್ತಾರೆ. ಅಲ್ಲದೆ, ಈ ಕೋಳಿಯ ತತ್ತಿಯ ಬೆಲೆ ಒಂದಕ್ಕೆ 1500 ರಿಂದ 2000ಸಾವಿರದವರೆಗೆ ಸಿಗುತ್ತದೆ. ಅಲ್ಲದೆ, ಮಾಂಸ ಪ್ರತಿ ಕೆ.ಜಿ.ಗೆ 1200 ರೂಪಾಯಿವರೆಗೂ ಮಾರಾಟವಾಗುತ್ತದೆ. ಅಲ್ಲದೆ ಈ ಕೋಳಿಯಿಂದ ಉತ್ಪತ್ತಿಯಾಗುವ ಲವಣವನ್ನು ಔಷಧಿಗಳಿಗೆ ಬಳಕೆ ಮಾಡುತ್ತಿದ್ದು ಪ್ರತಿ ಲೀಟರ್‌ಗೆ 1200ರೂ ಗಳು ಸಿಗುತ್ತದೆ. 

 ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 30 ರಿಂದ 35 ತತ್ತಿಗಳನ್ನು ಎಮು ಕೋಳಿ ನೀಡುತ್ತದೆ. ಹೀಗೆ ಪ್ರತಿವರ್ಷ ತತ್ತಿಗಳನ್ನು ಒದಗಿಸುವ ಈ ಕೋಳಿ ತನ್ನ ರೋಮಗಳಿಂದ ಹಾಗೂ ಉಗುರುಗಳಿಂದ ಮತ್ತು ಚರ್ಮದಿಂದಲೂ ಲಾಭವನ್ನು ಒದಗಿಸುತ್ತದೆ.

ನಿರೀಕ್ಷೆ : ಈ ದಂಪತಿ ಚಿಕ್ಕ ಬಂಡವಾಳ ಹೂಡುವ ಮೂಲಕ ಅಧಿಕ ಲಾಭಂಶವನ್ನು ಹೊಂದಿದ್ದಾರೆ. ಈಗಾಗಲೆ 1 ಲಕ್ಷ ಹೂಡಿಕೆ ಮಾಡಿ ಮೊಲಗಳನ್ನು ಸಾಕಿರುವ ಇವರು ಇನ್ನು ಕೆಲವೇ ದಿನಗಳಲ್ಲಿ 75 ಸಾವಿರ ಹಣವನ್ನು ವಾಪಸ್ ಪಡೆಯಲಿದ್ದಾರೆ. ಅಲ್ಲದೆ ಎಮು ಕೋಳಿಯ 3 ತಿಂಗಳ ಮರಿಯ ಬೆಲೆ 15 ಸಾವಿರವಿದ್ದು ಈಗಾಗಲೇ ಬಾಗಲಕೋಟೆಗೆ ರಪ್ತು ಮಾಡಲು ಯೋಚಿಸಲಾಗಿದೆ ಎನ್ನುತ್ತಾರೆ. ಮಂಜುನಾಥ್.

ಆಸಕ್ತಿವುಳ್ಳವರು 8123247903.8147235074. ನಂಬರಗಳಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ  ಪಡೆದುಬಹುದು. 

ಕಿವಿಮಾತು
ವಿದ್ಯೆ ಕಲಿತ ಮಾತ್ರಕ್ಕೆ ಸರಕಾರಿ ಹುದ್ದೆ ನಿರೀಕ್ಷೆ ಇರಬೇಕು. ಅದಕ್ಕಾಗಿ ಕಾಯಬಾರದು. ಇದ್ದ ಸಮಯದಲ್ಲಿ ಸ್ವ ಉದ್ಯೋಗ ಹೊಂದಬೇಕು.  ಚಿಕ್ಕ ಉದ್ಯೋಗಕ್ಕೆ ಸ್ವಲ್ಪ ಬಂಡವಾಳ ಹಾಕಿ ದುಡಿಯಬೇಕು. ಅಧಿಕ ಲಾಭಾಂಶ ಬರುವುದರಲ್ಲಿ ಸಂಶಯವಿಲ್ಲ. ಯುವಕರು ಸ್ವಉದ್ಯೊಗದತ್ತ ಮನಸ್ಸು ಮಾಡಬೇಕು. ಅಂದಾಗ ಭವಿಷ್ಯ ಉಜ್ವಲವಾಗಲು ಸಾಧ್ಯ ಎನ್ನುತ್ತಾರೆ ಮಂಜುನಾಥ ನವಲಗನ್‌ದಂಪತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT