ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ತತ್ವ ಪಾಲಿಸಲು ಸಲಹೆ

Last Updated 1 ಏಪ್ರಿಲ್ 2013, 11:17 IST
ಅಕ್ಷರ ಗಾತ್ರ

ಸಿಂದಗಿ: ಲಿಂಗತತ್ವ ಸಾಧಿಸುವ ಬಹುಮುಖ ಸಾಮರಸ್ಯವು ಶರಣರ ವಚನಗಳಿಂದ ಅರಿತುಕೊಳ್ಳಬೇಕು ಮತ್ತು ಆಚರಿಸಬೇಕು ಎಂದು ದಕ್ಷಿಣ ಸೊಲ್ಲಾಪುರದ ಮಂದ್ರೂಪ ಮಠದ ಶ್ರೀ ರೇಣುಕ ಶಿವಾಚಾರ್ಯರು ಹೇಳಿದರು.

ಸ್ಥಳೀಯ ಎಂ.ಸಿ. ಮನಗೂಳಿಯವರ ತೋಟದಲ್ಲಿ ಸೊಲ್ಲಾಪುರದ ಬಂಕಲಗಿಯ ಮಲ್ಲಿಕಾರ್ಜುನ ಕಲಾ ಸಾಹಿತ್ಯ, ಸಂಸ್ಕೃತಿಯ ವೇದಿಕೆಯ ಆಶ್ರಯದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಾರ್ಥಿಗಳಿಗೆ ಏರ್ಪಡಿಸಿದ್ದ ಶರಣ ಸಾಹಿತ್ಯ ಸಂಸ್ಕೃತಿ ಚಿಂತನಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧಾರ್ಮಿಕ ಮತ್ತು ಅಧ್ಯಾತ್ಮ  ಕ್ರಿಯೆಗಳ ವಿಚಾರಗಳಲ್ಲಿ ಆಚಾರದಿಂದ ಜೀವನಕ್ಕೆ ಮೌಲ್ಯ ಪ್ರಾಪ್ತವಾಗುವುದು. ಸದಾಚಾರದಿಂದ ಸದ್ಗತಿಯುಂಟು, ಲಿಂಗತತ್ವ ಕೇವಲ ಧಾರ್ಮಿಕ ಆಚರಣೆಯಲ್ಲಿ ಸಮಾವೇಶಗೊಳ್ಳುವ ಉಪಾಸನಾ ಕಾರ್ಯಕ್ರಮವಲ್ಲ, ಅದು ಜೀವನ ಪದ್ಧತಿಯನ್ನು ಉದಾತ್ತಿಕರಣಗೊಳಿಸುವ ಸರಳ ವಿಧಾನ. ಇಷ್ಟಲಿಂಗದ ಮೂಲಕ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ಮಹೋನ್ನತಿಗೊಳಿಸಲು ಅಣ್ಣ ಬಸವಣ್ಣ 12ನೇ ಶತಮಾನದಲ್ಲಿ ತಿಳಿಸಿ ಕೊಟ್ಟಿದ್ದಾರೆ ಎಂದರು.

ಅತಿಥಿ ಉಪನ್ಯಾಸಕರಾಗಿ ವಿಜಾಪುರ ಸಿಕ್ಯಾಬ ಮಹಿಳಾ ಕಾಲೇಜಿನ ಪ್ರೊ. ಯು.ಎನ್. ಕುಂಟೋಜಿ ಮಾತನಾಡಿ, ನಾವೆಲ್ಲರೂ ಬದುಕುವ ಜೀವನ ನಶ್ವರ. ಆದ್ದರಿಂದ ನಮ್ಮ ಜೀವನದ ಹುಟ್ಟು-ಸಾವು ಮಧ್ಯೆ ಸಾಮಾಜಿಕ ಮತ್ತು ಧಾರ್ಮಿಕ  ಕಾರ್ಯಗಳನ್ನು ಪೂರೈಸುವ ಮೂಲಕ ಶಾಶ್ವತವಾದ ಹೆಸರು ಪಡೆಯಬೇಕು. ಅದಕ್ಕೆ ಶರಣ ತತ್ವದ ಪರಿಪಾಲನೆ ಅವಶ್ಯವಾಗಿದೆ. ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಸನ್ಮತಿ ಪಡೆಯಬೇಕು ಎಂದು ಹೇಳಿದರು.

ಗೊಳಸಾರದ ಅಭಿನವ ಪುಂಡಲೀಕ ಸ್ವಾಮೀಜಿ, ನಾಗಠಾಣದ ಉದಯಲಿಂಗೇಶ್ವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ವಿಜಾಪುರ ಷಣ್ಮುಖಾರೂಢ ಮಠದ ಶಂಕರಾನಂದ ಸ್ವಾಮೀಜಿ ಹುಲ್ಲೂರದ ಸಿದ್ದಾರೂಢಮಠದ ಶ್ರೀ ಸಂಗಮನಾಥ ಶರಣರು ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವರಾದ ಎಂ.ಸಿ. ಮನಗೂಳಿ, ಮಾಣಿಕರಾವ ದೇಶಮುಖ, ಚಂದ್ರಶೇಖರ ಕುರೆ, ಬಂಡೆಪ್ಪ ತೇಲಿ, ಪ್ರೊ. ಎನ್.ಜಿ. ಕೊಟ್ಯಾಳ, ಸಿದ್ದಣ್ಣ ಶಿರಕನಹಳ್ಳಿ, ಶಿವಶಂಕರ ಯಾತಗಿರಿ, ಪ್ರೊ. ಸುಭಾಸ ಕನ್ನೂರ, ಪ್ರೊ. ಎಸ್.ಜಿ. ಇಜೇರಿ, ಶಿವಾನಂದ ಕಲ್ಬುರ್ಗಿ, ದೊಡ್ಡನಗೌಡ ಪಾಟೀಲ, ಶ್ರಿಶೈಲ ಸಗರ, ಬೈರಪ್ಪ ಗೊಣರೆ, ಬಸವರಾಜ ಅಗಸರ, ಶಿವಾನಂದ ಕುಂಬಾರ, ಶಂಕ್ರಯ್ಯ ಮಠ  ಮುಂತಾದವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಈ ಸಂದರ್ಭಲಿದಲ್ಲಿ ಮಹಾದೇವ ಕುರೆ ಸ್ವಾಗತಿಸಿದರು.  ಶರಣಗೌಡ ಪಾಟೀಲ ನಿರೂಪಿಸಿದರು.  ಆರ್.ಎನ್. ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT