ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಪತ್ನಿ ಹೆಸರಲ್ಲಿ ಭವ್ಯ ಬಂಗ್ಲೆ

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಸಂಡೂರು: ಸ್ಥಳೀಯ ಶಾಸಕ ಈ. ತುಕಾರಾಂ ಅವರು ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡು, ಪತ್ನಿ ಹೆಸರಲ್ಲಿ ಭವ್ಯ ಬಂಗ್ಲೆ ನಿರ್ಮಿಸಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಕಾರ್ಯಕರ್ತರು ಮಂಗಳವಾರ ಇಲ್ಲಿ ಆರೋಪಿಸಿದರು.

ಸಾರ್ವಜನಿಕರ ಬಳಕೆಗೆ ಮೀಸಲಿಟ್ಟ ಜಾಗದಲ್ಲಿ ಶಾಸಕರು ಅಕ್ರಮವಾಗಿ ಈ ಕಟ್ಟಡ ನಿರ್ಮಿಸಿದ್ದಾರೆ ಎಂದು ದಾಖಲೆಗಳ ಸಮೇತ ಮಾಧ್ಯಮ ಪ್ರತಿನಿಧಿಗಳ ಮುಂದೆ  ವಿವರಿಸಿದರು.14ನೇ ವಾರ್ಡಿನ ಸಿ.ಬಾಲಸುಬ್ರಹ್ಮಣ್ಯಂ ತಂದೆ ಚೆನ್ನಬಸಪ್ಪ ಅವರ ಸ.ನಂ.143/1ರಲ್ಲಿನ 1.30 ಎಕರೆ ಜಮೀನಿನಲ್ಲಿ ವಸತಿ ಉದ್ದೇಶಕ್ಕಾಗಿ ಅನುಮೋದನೆ ನೀಡಲು ಅವಕಾಶವಿರುವುದಿಲ್ಲ.
 
ಈ ಜಮೀನಿನಲ್ಲಿ ಸಮುದಾಯ ಭವನ ಮತ್ತು ಉದ್ಯಾನ ನಿರ್ಮಾಣಕ್ಕೆ ಮಾತ್ರ ಅವಕಾಶವಿದೆ. ಆದರೆ, ಶಾಸಕರು ತಮ್ಮ ಅಧಿಕಾರ ಬಳಸಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ. ಇದು ಕಾನೂನಿನ ಕಗ್ಗೊಲೆ~ ಎಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶ್ರೀಕಾಂತ ಗೊಂದಿ ಆರೋಪಿಸಿದರು.

`ಶಾಸಕರು ತಮ್ಮ ಪತ್ನಿ ಅನ್ನಪೂರ್ಣಾ ಅವರ ಹೆಸರಿನಲ್ಲಿ 60್ಡ80 ಅಡಿ ನಿವೇಶನವನ್ನು 5.28 ಲಕ್ಷ ರೂಪಾಯಿಗೆ ನೋಂದಣಿ ಮಾಡಿಸಿಕೊಂಡು, ಕಟ್ಟಡ ನಿರ್ಮಾಣಕ್ಕೆ ಪುರಸಭೆಯಿಂದ ಪರವಾನಗಿ ಪಡೆದಿದ್ದಾರೆ. ಇದರಲ್ಲಿ  ಕಂದಾಯ ಮತ್ತು ಪುರಸಭೆ ಅಧಿಕಾರಿಗಳು ಲೋಪವೆಸಗಿರುವುದು ಕಂಡುಬರುತ್ತದೆ~ ಎಂದು ಅವರು ದೂರಿದರು.

`ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ತೋರಣಗಲ್) ಈ ಜಮೀನಿನಲ್ಲಿ ಸಮುದಾಯ ಭವನ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಉದ್ಯಾನ ಮತ್ತು ವಾಹನ ನಿಲುಗಡೆಗೆ ಬಳಸಲು ಮಾತ್ರ ಯೋಗ್ಯವೆಂದು ಷರತ್ತು ಹಾಕಿದ್ದರೂ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ, ಸಮುದಾಯ ಭವನ ನಿರ್ಮಿಸುತ್ತೇವೆಂದು ಲಿಖಿತ ಹೇಳಿಕೆ ನೀಡಿ, ಮನೆ ಕಟ್ಟಿಕೊಂಡಿದ್ದಾರೆ~ ಎಂದು ಆಪಾದಿಸಿದರು.

ಶಾಸಕರ ಖಾಸಗಿ ಕಾರ್ಯದರ್ಶಿ ಶ್ರೀಕಂಠ ಹಿರೇಮಠ ಕೂಡ ಇದೇ ಜಾಗದಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂದು ವಕೀಲರಾದ ಸಿದ್ಧಪ್ಪ, ಕುಮಾರ ನಾಯ್ಕ, ದೇವೆಂದ್ರಪ್ಪ, ಮಾರಣ್ಣ ಆರೋಪಿಸಿದರು.

ಆರೋಪದಲ್ಲಿ ಹುರುಳಿಲ್ಲ; ತುಕಾರಾಂ:

`ನನ್ನ ವಿರುದ್ಧ ಅಕ್ರಮ ಕಟ್ಟಡ ನಿರ್ಮಾ ಣ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ಯಾವುದೇ ಅನ್ಯಾಯಮಾಡಿಲ್ಲ. ಸದರಿ ಆಸ್ತಿಯ ಒಡೆಯರಾದ ಯಶವಂತನಗರ ಸಿ.ಚೆನ್ನಬಸಪ್ಪನವರಿಂದ ಹಣ ನೀಡಿ ಪತ್ನಿಯ ಹೆಸರಿನಲ್ಲಿ ಖರೀದಿಸಿದ್ದೇನೆ. ನನ್ನನ್ನು ಕಳಂಕಿತನನ್ನಾಗಿಸಲು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ~ ಎಂದು ಶಾಸಕ ಈ. ತುಕಾರಾಂ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT