ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಮಸೂದೆ: ವಿರೋಧ ಪಕ್ಷ ಸಮ್ಮತಿ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾಮರ್ಥ್ಯದ ಹೆಚ್ಚಳವಾಗಬೇಕಾದರೆ ನೆನೆಗುದಿಗೆ ಬಿದ್ದಿರುವ ಪ್ರಮುಖ ಶಿಕ್ಷಣ ಮಸೂದೆಗಳು ಜಾರಿಯಾಗುವುದು ಅಗತ್ಯ ಎಂದು ಪ್ರತಿಪಾದಿಸಿರುವ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್, ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇವುಗಳಿಗೆ ಪ್ರತಿಪಕ್ಷಗಳು ಸಮ್ಮತಿ ನೀಡುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ-ನ್ಯೂಜಿಲೆಂಡ್ ಶಿಕ್ಷಣ ಮಂಡಳಿಯ ಮೊದಲ ಸಭೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಮಸೂದೆ, ವಿದೇಶಿ ಶಿಕ್ಷಣ ನೀಡಿಕೆ ಮಸೂದೆ ಮತ್ತಿತರ ಮಸೂದೆಗಳು ಜಾರಿಗೆ ಬರುವತನಕ ದೇಶದಲ್ಲಿ ಖಾಸಗಿ ಹಾಗೂ ವಿದೇಶಿ ಸಂಸ್ಥೆಗಳು ವಿಶ್ವವಿದ್ಯಾಲಯ ಇಲ್ಲವೆ ಕಾಲೇಜುಗಳನ್ನು ಸ್ಥಾಪಿಸಲು ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟರು.

2020ರ ವೇಳೆಗೆ 45 ದಶಲಕ್ಷ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತುವ ಸಾಧ್ಯತೆ ಇದ್ದು, ಉನ್ನತ ಶಿಕ್ಷಣ ರಂಗದಲ್ಲಿನ ಬೇಡಿಕೆಯನ್ನು ಈಡೇರಿಸಲು ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ ಎಂದರು. ಪ್ರಮುಖ ಶಿಕ್ಷಣ ಮಸೂದೆಗಳ ಕುರಿತು ಸಂಸತ್ತಿನ ಸ್ಥಾಯಿ ಸಮಿತಿ ಒಪ್ಪಿಗೆ ನೀಡಿದ್ದರೂ ವಿರೋಧ ಪಕ್ಷಗಳು ಮಾತ್ರ ಈ ಕುರಿತು ಚರ್ಚೆ ನಡೆಸಲು ಸಿದ್ಧವಿಲ್ಲ ಎಂದು ವಿಷಾದಿಸಿದರು.

ಇತರೆ ಕ್ಷೇತ್ರಗಳ ಜತೆಗೆ ಸಂಶೋಧನೆ ಹಾಗೂ ಕೌಶಲ ಅಭಿವೃದ್ಧಿ ವಿಷಯದಲ್ಲಿ ಭಾರತ ನ್ಯೂಜಿಲೆಂಡ್ ಜತೆ ಅಗತ್ಯ ಸಹಕಾರ ನೀಡಲು ಸಿದ್ಧವಿದ್ದು ಈ ಸಂಬಂಧ ಕೆಲ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ತಿಳಿಸಿದರು. 

ಕಡಿಮೆ ವೆಚ್ಚದಲ್ಲಿ ನಿರ್ಮಿತ ಆಕಾಶ್ ಟ್ಯಾಬ್ಲೆಟ್‌ನ್ನು ನ್ಯೂಜಿಲೆಂಡ್ ಶಿಕ್ಷಣ ಸಚಿವರಿಗೆ ಪರಿಚಯಿಸಿದ್ದು, ಮುಂದಿನ ಐದರಿಂದ ಏಳು ವರ್ಷಗಳ ಒಳಗಡೆ ಇಂತಹ ಉಪಕರಣವನ್ನು ದೇಶದ ಪ್ರತಿ ವಿದ್ಯಾರ್ಥಿಗೂ ನೀಡಲಾಗುವುದು ಎಂದು ಸಿಬಲ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT