ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರ್ವ: ವಿಷ್ಣುಮೂರ್ತಿ ಬ್ರಹ್ಮಕಲಶೋತ್ಸವ 26ರಿಂದ

Last Updated 22 ಫೆಬ್ರುವರಿ 2012, 10:35 IST
ಅಕ್ಷರ ಗಾತ್ರ

ಶಿರ್ವ(ಕಟಪಾಡಿ): ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರಗೊಂಡಿರುವ ಶಿರ್ವ ಮಹತೋಭಾರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ-ಜಾತ್ರಾ ಮಹೋತ್ಸವ ಇದೇ 26ರಿಂದ ಮಾ. 9ರವರೆಗೆ ನಡೆಯಲಿದೆ.

ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶರ್ವ ಮುನಿಯಿಂದ ಗುರುತಿಸಿದ ಶಿರ್ವದಲ್ಲಿ ವಿಷ್ಣುಮೂರ್ತಿ ಪ್ರಧಾನ ದೇವರು. 800 ವರ್ಷ ಪುರಾತನ ನಡಿಬೆಟ್ಟು ಕುಟುಂಭಿಕರ ನೇತೃತ್ವದಲ್ಲಿ ಭಾರ್ಗವ ಮುನಿಗಳು ದೇವರನ್ನು ಪ್ರತಿಷ್ಠಾಪಿಸಿದರು ಎಂಬ ಐತಿಹ್ಯವಿದೆ ಎಂದರು.

ದಾನಿಗಳು, ಭಕ್ತರ ಸಹಕಾರದಲ್ಲಿ ದೇವಾಲಯವನ್ನು ಸಮಗ್ರವಾಗಿ ಜೀರ್ಣೋದ್ಧಾರಗೊಳಿಸಲಾಗಿದೆ. ಶಿಲಾಮಯ ಗರ್ಭಗುಡಿ ನಿರ್ಮಾಣ ಸೇರಿದಂತೆ ತಾಮ್ರದ ಹೊದಿಕೆ ಅಳವಡಿಕೆ, ಶಿಲಾಮಯ ತೀರ್ಥ ಮಂಟಪ, ದುರ್ಗಾಪರಮೇಶ್ವರಿ ಗುಡಿ, ಸುತ್ತು ಪೌಳಿ, ನೂತನ ಸಭಾಂಗಣ ನಿರ್ಮಾಣ ಮತ್ತು ಗ್ರಾನ್ೈ ಹಾಸು, ಸ್ವಾಗತ ಗೋಪುರ, ವ್ಯಾಘ್ರ ಚಾಮುಂಡಿ ಗುಡಿ, ಧ್ವಜಸ್ತಂಭ, ಮಹಾ ಬಲಿಪೀಠ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ನಡೆದಿವೆ ಎಂದರು.

26ರಂದು ಹೊರೆಕಾಣಿಕೆ ಸಮರ್ಪಣೆ. ಮಾ. 1ರಂದು ವಿಷ್ಣುಮೂರ್ತಿ ದೇವರ ಬಿಂಬ ಪುನರ್‌ಪ್ರತಿಷ್ಠೆ, 5ರಂದು ಬ್ರಹ್ಮಕಲಶೋತ್ಸವ, 8ರಂದು ಮಹಾ ರಥೋತ್ಸವ ಹಿರಿಯ ಆಗಮ ಶಾಸ್ತ್ರಜ್ಞ ದೇರೆಬೈಲು ಹರಿಕೃಷ್ಣ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿ ಸಗ್ರಿ ಹರಿದಾಸ ಐತಾಳ್ ಅವರ ನೇತೃತ್ವದಲ್ಲಿ, ಅರ್ಚಕ ರಘುಪತಿ ಗುಂಡುಭ್, ಶ್ರೀನಿವಾಸ ಭ್ ಉಪಸ್ಥಿತಿಯಲ್ಲಿ ನೆರವೇರಲಿವೆ ಎಂದರು.

ಶೀರೂರು ಮಠಾಧೀಶ ಲಕ್ಷ್ಮೆವರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾದೀಶ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಆಯುರ್ ಆಶ್ರಮದ ವಿದ್ಯಾವಾಚಸ್ಪತಿ ವಿಶ್ವಭಾರತಿ ಸಂತೋಷ್ ಗುರೂಜಿ, ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ, ಒಡಿಯೂರು ಸಂಸ್ಥಾನದ  ಗುರುದೇವಾನಂದ ಸ್ವಾಮೀಜಿ, ಧರ್ಮಾದಿಕಾರಿ ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭಾಗವಹಿಸಲಿದ್ದಾರೆ ಎಂದರು.ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷ ವಿ.ಸುಬ್ಬಯ್ಯ ಹೆಗ್ಡೆ, ಕೋಶಾಧಿಕಾರಿ ರತ್ನವರ್ಮ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT