ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನ ಮುಂದೆ ಮೋಹಿನಿ ಭಸ್ಮಾಸುರ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹಗದೂರಿನಲ್ಲಿರುವ ಸರ್ವ ಸಿದ್ದಿ ವಿನಾಯಕನ ದೇವಾಲಯದಿಂದಲೇ ಈ ಬಡಾವಣೆಯು ವಿನಾಯಕ ನಗರವೆಂದು ಹೆಸರಾಯಿತು.ಬೆಂಗಳೂರು ಪೂರ್ವ ತಾಲ್ಲೂಕಿನ ಹಗದೂರು ವಿನಾಯಕನ ದೇಗುಲವನ್ನು ಸ್ಥಳೀಯರು ಕೇವಲ ಪೂಜೆಗೆ ಸೀಮಿತವಾಗಿಲ್ಲ.
 
ಸಾಂಸ್ಕೃತಿಕ ಚಟುವಟಿಕೆಯ ತಾಣವಾಗಿದೆ. ಊರ ಮುಂಖಂಡ ಪಿ.ಟಿ. ಅಪ್ಪಾಜಿ ಗೌಡರ ಮುಂದಾಳತ್ವದಲ್ಲಿ  ವಿನಾಯಕನ ಆಲಯದ ಆವರಣದಲ್ಲಿ ಪ್ರತಿವರ್ಷ ಶಿವರಾತ್ರಿಯಂದು ನಾಡಿನ ಪ್ರಸಿದ್ಧ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಈಗ ಗಣೇಶನ ಗುಡಿಯ ಮಹಾದ್ವಾರದಲ್ಲಿ ಧ್ಯಾನ ಮಗ್ನ ಶಿವನ 21 ಅಡಿ ಪ್ರತಿಮೆ ಪ್ರತಿಷ್ಠಾಪನೆಯಾಗಿದೆ. ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ಅತಿ ಎತ್ತರದ ಶಿವ ಪ್ರತಿಮೆಗಳಲ್ಲಿ ಇದೂ ಒಂದು.


ಇದೇ 18.02.2012 ರಂದು ಇಲ್ಲಿ ಸಾಂಸ್ಕೃತಿಕ ತಂಡ ಪ್ರಭಾತ್ ಕಲಾವಿದರಿಂದ ಮೋಹಿನಿ ಭಸ್ಮಾಸುರ, ಪುಣ್ಯಕೋಟಿ ನೃತ್ಯ ನಾಟಕಗಳ ಪ್ರಸ್ತುತಿ. ಜೊತೆಗೆ ವಿಜಯೋತ್ಸವ ಎಂಬ ಸಂಗೀತ ನಾಟಕವನ್ನು ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT