ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಅಗ್ನಿನಿರೋಧಕ ಉಡುಪು

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ಅಗ್ನಿಶಾಮಕ ಸಿಬ್ಬಂದಿ ಹಾಗೂ ಬೆಂಕಿ ಸಂಬಂಧಿ ಉದ್ದಿಮೆಗಳಲ್ಲಿ ತೊಡಗಿರುವವರಿಗೆ ಸಂತಸ ಸುದ್ದಿಯೊಂದನ್ನು ಅಹಮದಾಬಾದ್ ಜವಳಿ ಉದ್ದಿಮೆಗಳ ಸಂಶೋಧನಾ ಸಂಸ್ಥೆ ನೀಡಿದೆ.

ಬೆಂಕಿ ನಿರೋಧಕ ಇಂತಹ ಉಡುಪನ್ನು ಸದ್ಯ ಆಮದು ಮಾಡಿಕೊಳ್ಳಬೇಕಿದ್ದು ಇಂತಹ ಉಡುಪಿನ ಬೆಲೆ ಅಂದಾಜು ರೂ 1.5 ಲಕ್ಷ ಆಗಲಿದೆ.

ದುಬಾರಿ ದರದ ಇಂತಹ ಮಾದರಿಯ ಉಡುಪನ್ನು ಕಡಿಮೆ ದರದಲ್ಲಿ ನಮ್ಮಲ್ಲೇ ಸಿದ್ಧಪಡಿಸುವ ತಂತ್ರಜ್ಞಾನಕ್ಕೆ ನಾವೀಗ ಆದ್ಯತೆ ನೀಡಿದ್ದು ಇವುಗಳು ಅಗ್ನಿಶಾಮಕ ಸಿಬ್ಬಂದಿಗೆ ವರದಾನವಾಗಲಿವೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎ.ಕೆ. ಶರ್ಮ ತಿಳಿಸುತ್ತಾರೆ.

ತೈಲ ಸಂಬಂಧಿ ಉದ್ದಿಮೆಗಳಲ್ಲಿ ತೊಡಗಿರುವ ಸಿಬ್ಬಂದಿ ರಕ್ಷಣೆಗಾಗಿ ಬೆಂಕಿ ನಿರೋಧಕ ಬಟ್ಟೆಯನ್ನು ಅಭಿವೃದ್ಧಿಪಡಿಸಿದ ಕೀರ್ತಿಯೂ ನಮ್ಮ ಸಂಸ್ಥೆಯದೇ ಎನ್ನುವ ಶರ್ಮಾ, ಭಾರತೀಯ ಕಾರ್ಮಿಕರ ಕೆಲಸದ ಸ್ಥಳದ ಸ್ಥಿತಿಗತಿಗೆ ಅನುಗುಣವಾಗಿ ಇಂತಹ ಬಟ್ಟೆಯನ್ನು ಅಂತರರಾಷ್ಟ್ರೀಯ ಗುಣಮಟ್ಟದೊಂದಿಗೆ ಸಿದ್ಧಪಡಿಸಲಾಗುತ್ತಿದೆ.

ಉಕ್ಕು, ಗಣಿ ಇಲ್ಲವೆ ಫೌಂಡ್ರಿ ಉದ್ದಿಮೆಗಳ ಕಾರ್ಮಿಕರಿಗೆ ಸರಿಹೊಂದುವ ಬೆಂಕಿ ನಿರೋಧಕ ವಸ್ತ್ರ ಸಿದ್ಧಪಡಿಸುವಲ್ಲಿಯೂ ನಾವು ಗಮನಹರಿಸುತ್ತಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT