ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀತಲ ಕೇಂದ್ರದಲ್ಲಿ ಶೀಘ್ರ ಪ್ಯಾಕಿಂಗ್ ಘಟಕ ಸ್ಥಾಪನೆ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಆನೇಕಲ್:  ಇಲ್ಲಿನ  ಶೀತಲ ಕೇಂದ್ರದಲ್ಲಿ 12ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಯಾಕಿಂಗ್ ಘಟಕ ಸ್ಥಾಪಿಸುವುದಾಗಿ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ದಿಬ್ಬೂರು ಜಯಣ್ಣ ನುಡಿದರು.

ಶೀತಲ ಕೇಂದ್ರಕ್ಕೆ ಏಕಾಏಕಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ಗ್ರಾಹಕರಿಗೆ ಗುಣಮಟ್ಟದ ಹಾಗೂ ತಾಜಾ ಹಾಲು ನೀಡುವ ನಿಟ್ಟಿನಲ್ಲಿ ಒಕ್ಕೂಟವು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದರು.

ಸ್ವಚ್ಛತೆ ಕಾಪಾಡುವ ದಿಸೆಯಲ್ಲಿ ಹಾಲಿನ ಕ್ಯಾನ್‌ಗಳನ್ನು ಬೀಸಿ ನೀರಿನಿಂದ ತೊಳೆಯಲಾಗಿತ್ತಿದ್ದು, ಇದಕ್ಕಾಗಿ ನೂತನ ಬಾಯ್ಲರ್‌ಗಳನ್ನು ಖರೀದಿಸಿ ಶೀಥಲ ಕೇಂದ್ರಗಳಗೆ ನೀಡಲಾಗಿದೆ ಎಂದರು.

ಬಮುಲ್ ನಿರ್ದೇಶಕ ಆರ್.ಕೆ. ರಮೇಶ್ ಮಾತನಾಡಿ, 2 ವರ್ಷಗಳ ಪ್ರಯತ್ನದ ಫಲವಾಗಿ ಆನೇಕಲ್‌ಗೆ ಪ್ಯಾಕಿಂಗ್ ಘಟಕ ಮಂಜೂರಾಗಿದ್ದು ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ಹಾಲಿನ ದರ ಏರಿಕೆಗೆ ಸಹಕರಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ,  ಒಕ್ಕೂಟದ ಅಧ್ಯಕ್ಷ ಸೋಮಶೇಖರ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ದಿಬ್ಬೂರು ಜಯಣ್ಣ ಹಾಗೂ ರಮೇಶ್ ತಿಳಿಸಿದರು. ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ ಎಂದರು.

ದೇವನಹಳ್ಳಿ ನಿರ್ದೇಶಕ ಸೋಮಣ್ಣ, ಪೂರ್ವ ತಾಲ್ಲೂಕು ನಿರ್ದೇಶಕ ಮುನಿಸುಬ್ಬಯ್ಯ, ನಾಮನಿರ್ದೇಶಕ ಸದಸ್ಯ ಯಲಹಂಕ ರಾಜಣ್ಣ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT