ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಕರಿಗೆ ಶಾಪ ಇಲ್ಲವೆ?

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಅನ್ಯಧರ್ಮ ಸೇರ್ಪಡೆ: ಶಾಪ ನಿಶ್ಚಿತ’ (ಜ.26) ಎಂಬ ಸಂದೇಶ ಸಾರಿದ ಪೇಜಾವರ ಶ್ರೀಗಳ ಮಾತು ದಿಗ್ಭ್ರಮೆಗೊಳಿಸಿದೆ. ತಲೆ ತಲಾಂತರದಿಂದ (ಇಂದಿಗೂ) ಅನುಭವಿಸಿದ ಅವಮಾನ, ದಬ್ಬಾಳಿಕೆ. ಶೋಷಣೆಗಳು ನಿರಂತರವಾಗಿ ನಡೆದು ಬಂದಿರುವುದು ಶ್ರೀಗಳಿಗೆ ತಿಳಿಯದ ಸಂಗತಿಯೇನಲ್ಲ.

ಅಸ್ಪೃಶ್ಯತೆ ಅವಮಾನದ ನೋವನ್ನು ಮೌನವಾಗಿ ಅನುಭವಿಸುತ್ತಾ ಅತ್ತವರೆಷ್ಟೊ ಬೆಂಕಿಯಲ್ಲಿ ಬೆಂದವರೆಷ್ಟೊ? ಇಷ್ಟೆಲ್ಲ ಆದರೂ ಇನ್ನೂ ಅದೇ ಧರ್ಮದ ಶೋಷಣೆಯನ್ನೆ ಒಪ್ಪಿಕೊಳ್ಳಿ ಎಂದರ್ಥವೆ?

ನಿಜಕ್ಕೂ ಇವರ ಮನೋಧರ್ಮ ಹೇಗಿದೆ ಎಂಬುದನ್ನು ಗಮನಿಸಿದಾಗ ಆಶ್ಚರ್ಯವಾಗುತ್ತಿದೆ.  ಧರ್ಮದಲ್ಲಿರುವ ಶೋಷಣೆಯನ್ನು ತಿದ್ದಲಾರದೆ ಅನ್ಯಧರ್ಮ ಸೇರ್ಪಡೆ ಬೇಡ ಎಂಬುದೆಷ್ಟು ಸಮಂಜಸ.

‘ನಮಗೆ ಮತಾಂತರದಿಂದ ಸ್ವಾತಂತ್ರ್ಯ ಸಿಕ್ಕುವುದಾದರೆ ಹಿಂದೂ ಧರ್ಮದ ಸುಧಾರಣೆ ಹೊಣೆಗಾರಿಕೆಯನ್ನು ನಾವೇಕೆ ಹೊರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದುಂಟು. ಇಂದಿಗೂ ಹಳ್ಳಿಗಳಲ್ಲಿ ದೇವಾಲಯಗಳಿಗೆ ಪ್ರವೇಶವಿಲ್ಲ.  ಆಧ್ಯಾತ್ಮಿಕ ಹಕ್ಕು ಧರ್ಮದ ಕಗ್ಗಂಟಲ್ಲೆ ಇದೆ.
ಅನ್ಯಧರ್ಮದ ಸೇರ್ಪಡೆಯಿಂದ ಶಾಪ ಹೊಂದುವುದಾದರೆ ಶೋಷಣೆ ಮಾಡುವವರಿಗೆ ಶಾಪದಿಂದ ವಿಮುಕ್ತಿ ಸಿಗುವುದೇ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT