ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೋತೃಗಳನ್ನು ರಂಜಿಸಿದ ಸಪ್ತಕ ಸಂಗೀತ

Last Updated 23 ಜುಲೈ 2013, 19:59 IST
ಅಕ್ಷರ ಗಾತ್ರ

ಸಪ್ತಕ ಹಾಗೂ ಮಲ್ಲೇಶ್ವರದ ಎಂ.ಇ.ಎಸ್. ಕಲಾವೇದಿ ಆಶ್ರಯದಲ್ಲಿ ಕಳೆದ ಶನಿವಾರ ನಡೆದ ಇಂದಿರಾ ಮತ್ತು ನಾರಾಯದಾಸ್ ನೆನಪಿನ ಸಂಗೀತ ಕಾರ್ಯಕ್ರಮ ಕಲಾಭಿಮಾನಿಗಳಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು.

ಗೋಪಾಲಕೃಷ್ಣ ಭಾಗವತ ಯಲ್ಲಾಪುರ ಅವರು ಪೂರಿಯಾ ಕಲ್ಯಾಣ್ ರಾಗದಲ್ಲಿ ಪರಂಪರಾನುಗತ ಬಂಧಿಶ್ `ಆಜಸೋಬನ'ದಲ್ಲಿ ವಿಸ್ತಾರವಾಗಿ ಆಲಾಪ ಮಾಡಿ ಆಕರ್ಷಕ ಬೋಲ್‌ತಾನ್ ಹಾಗೂ ತಾನ್‌ಗಳೊಂದಿಗೆ ಹಾಡಿ ಧ್ರುತ್ ತೀನ್‌ತಾಲ್‌ದಲ್ಲಿ `ಬಹುತ ದಿನ ಬಿತೇ'ಯನ್ನು ಸುಂದರವಾಗಿ ಪ್ರಸ್ತುತಪಡಿಸಿದರು.

ನಂತರ ಶ್ರೋತೃಗಳ ಕೋರಿಕೆಯಂತೆ ಹಾಡಿದ ಋತು ರಾಗ ಮಿಯಾ ಮಲ್ಹಾರ್‌ದಲ್ಲಿ `ಬರಸನ ಲಾಗೆ ಬುಂದರಿಯಾ' ಸ್ವರ ಲಯಗಳ ಸಂಗಮದಲ್ಲಿ ಸುಂದರವಾಗಿ ಮೂಡಿ ಬಂದಿತು.

`ಅಂತರಂಗದಲ್ಲಿ ಅರಿವಾದೊಡೇನು' ಹಾಗೂ `ನೀರಿಗೆ ನೈದಿಲೆಯೇ ಶೃಂಗಾರ', ಭೈರವಿಯಲ್ಲಿನ `ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ' ವಚನಗಳನ್ನು ಸುಶ್ರಾವ್ಯ ಮತ್ತು ಭಾವಪೂರ್ಣವಾಗಿ ಹಾಡಿದರು.

ತಬಲಾದಲ್ಲಿ ಎನ್. ಜಿ. ಹೆಗಡೆ, ಕಪ್ಪೆಕೆರೆ ಹಾಗೂ ಹಾರ‌್ಮೋನಿಯಂನಲ್ಲಿ ಗಜಾನನ ಸಭಾಹಿತ ಗುಣವಂತೆ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT