ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ನಿರಾಶಾದಾಯಕ ಆರಂಭ

Last Updated 21 ಡಿಸೆಂಬರ್ 2010, 10:55 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆಯ ಸೋಮವಾರದ ವಹಿವಾಟಿನ ಮೇಲೆ ರಜಾ ದಿನಗಳ ಮುಂಚಿನ ದಿನಗಳ ಮನೋಭಾವ ಪ್ರಭಾವ ಬೀರಿದ್ದು, ಸಂವೇದಿ ಸೂಚ್ಯಂಕವು ಸಾಕಷ್ಟು ಏರಿಳಿತ ಕಂಡರೂ ಅಂತಿಮವಾಗಿ ಕೇವಲ 24 ಅಂಶಗಳ ಹೆಚ್ಚಳದೊಂದಿಗೆ ವಹಿವಾಟು ಕೊನೆಗೊಳಿಸಿತು.

ಪ್ರಮುಖ ಷೇರು ಹೀರೊ ಹೊಂಡಾ ಮತ್ತು ಇನ್ಫೋಸಿಸ್ ಟೆಕ್ನಾಲಜೀಸ್‌ನ ಷೇರುಗಳ ಖರೀದಿ ಭರಾಟೆ ನಡೆದರೂ ಸೂಚ್ಯಂಕವು ಗಮನಾರ್ಹವಾಗಿ ಏರಿಕೆ ಕಾಣಲಿಲ್ಲ. ಅಂತಿಮವಾಗಿ ಸೂಚ್ಯಂಕವು 24 ಅಂಶಗಳ ಏರಿಕೆಯೊಂದಿಗೆ 19,888 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕವು 20,006ರವರೆಗೆ ಏರಿಕೆಯಾಗಿತ್ತು. ಆದರೆ, ಎಚ್ಚರಿಕೆಯ ಮನೋಭಾವ ಮತ್ತು ಆಯ್ದ ಷೇರುಗಳ ಖರೀದಿ ಪ್ರವೃತ್ತಿ ಫಲವಾಗಿ ಇದೇ ಉತ್ಸಾಹ  ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ರಜಾ ದಿನಗಳ ಮನೋಭಾವದ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯ ಧೋರಣೆ ತಳೆದಿದ್ದಾರೆ.

 ಹೀರೊ ಹೊಂಡಾದ ಷೇರುಗಳ ಖರೀದಿ ಭರಾಟೆಯೂ ನಿರಾಶಾದಾಯಕ ವಹಿವಾಟಿನ ಗತಿಗೆ ಚೇತರಿಕೆ ನೀಡಲಿಲ್ಲ. ಐ.ಟಿ ಷೇರುಗಳೂ ಹೂಡಿಕೆದಾರರ ಗಮನ ಸೆಳೆದಿವೆ. ಇನ್ಫೋಸಿಸ್, ಐಟಿಸಿ ಮತ್ತು ವಿಪ್ರೊ ಷೇರುಗಳು ಲಾಭ ಬಾಚಿಕೊಂಡವು. ಹೊಸ ವರ್ಷದಲ್ಲಷ್ಟೇ ಪೇಟೆಯಲ್ಲಿ ವಹಿವಾಟಿನ ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT