ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಕೇತ ಮಾತು' ಪುಸ್ತಕ ಬಿಡುಗಡೆ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಎಸ್‌ಜಿಎಸ್ ವಾಗ್ದೇವಿ ಇಂಟಿಗ್ರೇಟೆಡ್ ಸ್ಕೂಲ್ : ಶ್ರೀ ಗಣಪತಿ ಸಚ್ಚಿದಾನಂದ ವಾಗ್ದೇವಿ ಸಂವಹನ ನ್ಯೂನತೆಯುಳ್ಳವರ ಪುನಶ್ಚೇತನ ಕೇಂದ್ರವು ತನ್ನ ಹದಿನೇಳನೇ ವಾರ್ಷಿಕೋತ್ಸವವನ್ನು ಶನಿವಾರ ಆಚರಿಸುತ್ತಿದೆ. ಅದರ ಜೊತೆಗೆ “ಕಿವುಡು ಮಕ್ಕಳ ಪೋಷಕರ ತರಬೇತಿ ಕೇಂದ್ರ” ಕಟ್ಟಡದ ಉದ್ಘಾಟನೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಅನುಭವವಿರುವ ಮತ್ತು ಕೇಂದ್ರದ ನಿರ್ದೇಶಕರಾದ ಡಾ. ಶಾಂತಾ ರಾಧಾಕೃಷ್ಣ ಅವರು ಬರೆದ “ಕಿವುಡು ಮಕ್ಕಳ ಸಂಕೇತ ಮಾತು” ಸಚಿತ್ರ ಪುಸ್ತಕದ ಬಿಡುಗಡೆ ಆಗಲಿದೆ. ಬೆಂಗಳೂರಿನ ಮೇಯರ್ ವೆಂಕಟೇಶ ಮೂರ್ತಿ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಮತ್ತು `ಪ್ರಜಾವಾಣಿ'ಯ ಆರ್. ಪೂರ್ಣಿಮಾ ಅತಿಥಿಗಳಾಗಿ ಭಾಗವಹಿಸುತ್ತಾರೆ. ಸ್ಥಳ: ಎಸ್‌ಜಿಎಸ್ ವಾಗ್ದೇವಿ ಸೆಂಟರ್, 3ನೇ ಸಿ ಮೇನ್, 7 ನೇ ಕ್ರಾಸ್, ಗಿರಿನಗರ 2ನೇ ಹಂತ (ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪಕ್ಕ), ಸಂಜೆ: 6.

ಮೆಗಾ ಜಾಬ್ ಫೇರ್'
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜಾಬ್ ಓರಿಯೆಂಟೆಡ್ ಟ್ರೈನಿಂಗ್: ಶನಿವಾರ `ಮೆಗಾ ಜಾಬ್ ಫೇರ್' ಆಚರಿಸಲಾಗುತ್ತದೆ. ಐಟಿ, ಬ್ಯಾಕಿಂಗ್, ಚಿಲ್ಲರೆ ವ್ಯಾಪಾರೋದ್ಯಮದವರು ಭಾಗವಹಿಸಲಿದ್ದು ಆಯ್ಕೆಯಾದ ಪ್ರತಿಭಾನ್ವಿತರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು. ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರುವ ಯಾವುದೇ ಅಭ್ಯರ್ಥಿ ಫೇರ್‌ನಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ- 18002666777 (ಕರೆ ಉಚಿತ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT