ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಗಾಗಿ ಎಳ್ಳುಬೆಲ್ಲ ಮಿಶ್ರಿತ ಕುಸುರೆಳ್ಳು ತಯಾರಿ

Last Updated 15 ಜನವರಿ 2012, 10:20 IST
ಅಕ್ಷರ ಗಾತ್ರ

ಬಾಗಲಕೋಟೆ: ಅಕ್ಕರೆ ಸಿಹಿಯ ಸಕ್ಕರೆ ಮಾತಿನ ಹಬ್ಬವೆಂದೇ ಬಿಂಬಿತವಾಗುವ ಸಂಕ್ರಾಂತಿ ಹಬ್ಬ. ಎಲ್ಲರಲ್ಲಿ ಸಂತಸ ಮೀಯುವ  ಈ ಹಬ್ಬದಲ್ಲಿ ಎಳ್ಳುಬೆಲ್ಲ ಹಂಚಿಕೆ ಗಮನಾರ್ಹ. ಎಲ್ಲೆಡೆ ಎಳ್ಳುಬೆಲ್ಲವನ್ನು ಹಂಚಿ ವರ್ಷವಿಡೀ ಇರುವ ದ್ವೇಷವನ್ನು ಮರೆತು. ಸದಾ ನಗುನಗುತ್ತಾ ಇರೋಣ ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ.

ಬಹುತೇಕ ಕಡೆಗೆ ಈ ಎಳ್ಳುಬೆಲ್ಲ ವನ್ನು ಮನೆಯಲ್ಲಿ ಕೂಡಿಸಿ ತಯಾರಿಸಿ ದರು. ಇಂದು ಮಾರುಕಟ್ಟೆಯಲ್ಲಿ ಬೆಲ್ಲದ ಪಾಕದಿಂದ ತಯಾರಾದ ಕುಸರೆಳ್ಳು ಎಂದು ಕರೆಯಲ್ಪಡುವ ಎಳ್ಳುಬೆಲ್ಲ ಮಿಶ್ರಿತ ವಿನೂತನ ವಸ್ತುವನ್ನು ಉತ್ತರಕರ್ನಾಟಕದಲ್ಲಿ ಕಾಣುತ್ತೇವೆ. ಇದು ಬಾಗಲಕೋಟ ನಗರ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿದೆ.

ಕುಸರೆಳ್ಳುಗಳು, ಉತ್ತರ ಕರ್ನಾಟಕ ದಲ್ಲಿ ಸಂಕ್ರಾಂತಿ ಬಂತೆಂದರೆ ಸಾಕು ಎಲ್ಲೆಡೆ ಮಾರುಕಟ್ಟೆಯಲ್ಲಿ ರಾರಾಜಿ ಸುವ ಅತೀ ಮಹತ್ವದ ಸಿಹಿ ಸಕ್ಕರೆಗಳಿವು. ನೋಡಲು ಚಿಕ್ಕ ಚಿಕ್ಕವಾಗಿ ತಯಾರಿಸಿದರೂ ಬಾಯಲ್ಲಿ ಹಾಕಿದರೆ ಸಾಕು ಸಿಹಿಯೋ ಸಿಹಿ. ಇವುಗಳನ್ನು ಪಕ್ಕಾ ಸಕ್ಕರೆಯ ಪಾಕದಿಂದ ತಯಾರಿಸಲಾಗುತ್ತದೆ.

ಪಾಕ ತಯಾರಿಸೋ ಮುನ್ನ ಅದರಲ್ಲಿ ಎಳ್ಳನ್ನು ಕೂಡಾ ಶೇಖರಿಸಲಾಗುತ್ತದೆ. ಸಕ್ಕರೆಯನ್ನು ಕರಗಿಸಿ ಒಲೆ ಮೇಲೆ ಹೊತ್ತಿಸಿ ದೊಡ್ಡ ಕಡಾವಿಗೆಗಳಲ್ಲಿ ಸಂಪೂರ್ಣ ಕುದಿ ುವರೆಗೂ ಇಡಲಾಗುತ್ತದೆ.

 ನಂತರ ಕ್ರಮೇಣ ದೊಡ್ಡ ಗಾತ್ರದ ದುಂಡಾಕಾರದ ಮಸಿನ್‌ದಲ್ಲಿ ಸಕ್ಕರೆ ಪಾಕವನ್ನು ಪಾತ್ರೆಯಲ್ಲಿ ತೆಗೆದು ಕೊಂಡು ಜೋತು ಬಿಡಲಾಗು ತ್ತದೆ.ಇದರಿಂದ ನಿರಂತರವಾಗಿ ಸುರಿಯುವ ಪಾಕವು ಚಿಕ್ಕ ಚಿಕ್ಕ ಉಂಡೆಗಳಾಗಿ ಬಿದ್ದು ಸುರಳಿಯಾಕಾರದಲ್ಲಿ ತಿರುಗುತ್ತಾ ಹೋಗುತ್ತದೆ.
 
ಇವುಗಳನ್ನು ತಯಾರ ಕರು ಬಿಳಿ,ಕೆಂಪು ಹಳದಿ, ಹಸಿರು, ಹೀಗೆ ವಿವಿಧ ಬಣ್ಣಗಳಲ್ಲಿತಯಾರಿಸಿ ಅವುಗಳನ್ನು ಒಂದೇ ಕಡೆ ಕ್ರೂಡೀಕರಿಸಿದಾಗ ಅವುಗಳ ಅಂದ ನೋಡಲು ಚಎಂದ, ಸಿಹಿ ಸವಿಯಲು ಚೆಂದ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಎಳ್ಳುಬೆಲ್ಲವನ್ನು ನೀಡುವುದು ಕಡಿಮೆ ಆದ್ದರಿಂದ ವಿನೂತನ ರೀತಿಯಲ್ಲಿ ತಯಾರಾಗುವ ಸಾಂಸ್ಕೃತಿಕ ಪಡಿಯಚ್ಚಿನಲ್ಲಿ ನಿರ್ಮಾಣ ವಾಗಿ ಮಾರುಕಟ್ಟೆಗೆ ಬರುವ ಕುಸುರೆಳ್ಳುಗಳು ಈ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ.

 ಕಳೆದ 25 ವರ್ಷಗಳಿಂದ ತಯಾರಿಕೆ ಮಾಡುತ್ತಾ ಬಂದಿರುವ ಬಾಗಲಕೋಟೆ ಹಳಪೇಟೆ ಓಣಿಯ ಸುರೇಶ ಬಸಪ್ಪ ತಾಳಿಕೋಟಿ ಕುಟುಂಬ ಕುಸುರೆಳ್ಳು ತಯಾರಿಕೆ ಬಗ್ಗೆ ಹೆಮ್ಮೆ ಪಡುತ್ತಾರೆ.

ಇಂದಿಗೂ ಇದರ ವ್ಯಾಪಾರ ಕುಸಿದಿಲ್ಲ ಉತ್ತಮವಾಗಿಯೇ ಇದೆ. ಆದರೆ ವರ್ಷಕ್ಕೆ ಒಂದೇ ಬಾರಿ ಮಾತ್ರ ಇದನ್ನು ತಯಾರಿಸುತ್ತೇವೆ ಎಂದು ಸುರೇಶ ತಾಳಿಕೋಟಿ  `ಪ್ರಜಾವಾಣಿ~ಗೆ  ತಿಳಿಸಿದರು. 

ಸಂಕ್ರಾಂತಿಯ ದಿನದಂದು ಎಲ್ಲರೂ ಇವುಗಳ ಖರೀದಿಗೆ ಮುಗಿಬೀಳುತ್ತಾರೆ. ಮಕ್ಕಳಿಗಂತೂ ಇವುಗಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.ಕಿರಿಯರು ಹಿರಿಯರಿಗೆ ನೀಡುವುದು. ಮತ್ತು ಆಪ್ತರು ತಮ್ಮ ಸ್ನೇಹಿತರಿಗೆ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಈ ಹಬ್ಬದ ವಿಶೇಷವಾಗಿದೆ.

ಬಹುತೇಕಗ್ರಾಮೀಣ ಪ್ರದೇಶಗಳಲ್ಲಿ ಎಳ್ಳು ಮತ್ತು ಬೆಲ್ಲವನ್ನು ಕೂಡಿಸಿ ನೆರೆಹೊರೆಯವರಿಗೆ ಹಂಚುವದು ರೂಢಿ, ಆದರೆ ಬಹುತೇಕ ಎಳ್ಳನ್ನು ಕೂಡಿಸಿ ಸಕ್ಕರೆಯ ಪಾಕದಿಂದ ತಯಾರಿಸಿದ ಈ ಕುಸರೆಳ್ಳನ್ನು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಪಡೆಯ ಲಾಗುತ್ತದೆ.

ತಯಾರಕರು ಇದನ್ನು ನಿರಂತರವಾಗಿ ಮಾಡುತ್ತಾ ಬಂದಿ ದ್ದರೂ ಅವುಗಳ ಕೊಂಡು ಕೊಳ್ಳುವಿಕೆ ಮಾತ್ರ ನಿಂತಿಲ್ಲ. ವರ್ಷದಿಂದ ವರ್ಷಕ್ಕೆ ಇನ್ನೂ ಬೆಳೆಯುತ್ತಲೇ ಹೋಗುತ್ತಿದೆ. ಈ ವರ್ಷ 35 ಚೀಲಗಳನ್ನು ಕುಸುರೆಳ್ಳನ್ನು ಸಿದ್ದಪಡಿಸಲಾಗಿದೆ. ಜಿಲ್ಲೆಯ ವಿವಿಧ ಭಾಗದಿಂದ ಜನರು ಬಂದು ಖರೀದಿ ಮಾಡುತ್ತಾರೆಂದು ತಾಳಿಕೋಟಿ ಹೇಳಿದರು.

ಒಟ್ಟಿನಲ್ಲಿ ಆಧುನಿಕ ಭರಾಟೆಯಲ್ಲಿ ಸಂಕ್ರಾಂತಿ ಹಬ್ಬ ವಿನೂತನವಾಗಿ ಆಚರಣೆ ಮಾಡುವುದಷ್ಟೇ ಅಲ್ಲದೇ ಅಂದಿನ ಪ್ರತಿಯೊಬ್ಬರ ಕೈಯಲ್ಲಿರುವ ಕುಸುರೆಳ್ಳುಗಳಿಗೂ ಕೂಡಾ ಅಷ್ಟೇ ಮಹತ್ವ ಪಡೆದಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT