ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ವಿದೇಶ ಸುದ್ದಿ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಡ್ರೋನ್‌ ದಾಳಿ: ಕಳವಳ
ಇಸ್ಲಾಮಾಬಾದ್‌ (ಐಎಎನ್‌ಎಸ್‌):
ಪಾಕಿಸ್ತಾನದ ಬುಡಕಟ್ಟು ಪ್ರದೇಶದ ಮೇಲೆ ಅಮೆರಿಕ ಡ್ರೋನ್‌ ದಾಳಿ ಮುಂದು­ವರಿಸಿರುವುದರ ಬಗ್ಗೆ ಪ್ರಧಾನಿ ನವಾಜ್‌ ಷರೀಫ್‌ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಚಕ್‌ ಹೆಗಲ್‌ ಅವರೊಂದಿಗೆ ಸೋಮ­ವಾರ ಮಾತು­ಕತೆ ನಡೆಸಿದ ಅವರು, ಡ್ರೋನ್‌ ದಾಳಿ­ಯಿಂದ  ಭಯೋತ್ಪಾದ­ನೆ  ವಿರುದ್ಧ ನಡೆಸುತ್ತಿ­ರುವ ಹೋರಾ­ಟ­ಕ್ಕೆ ತೀವ್ರ ಹಿನ್ನಡೆ­ಯಾ­ಗುತ್ತಿದೆ ಎಂದು ಕಳ­ವಳ ವ್ಯಕ್ತಪಡಿಸಿದರು.

ಬಸಿತ್‌ ಪಾಕ್‌ ಹೈಕಮಿಷನರ್‌
ಇಸ್ಲಾಮಾಬಾದ್ (ಪಿಟಿಐ):
ಕೊನೆಯ ಗಳಿಗೆಯಲ್ಲಿ ತನ್ನ ನಿರ್ಧಾರ ಬದಲಿಸಿದ ಪಾಕಿಸ್ತಾನ ಸರ್ಕಾರ ಸೈಯದ್‌ ಇಬ್ನ್‌ ಅಬ್ಬಾಸ್‌  ಬದಲಾಗಿ ಜರ್ಮನಿಯಲ್ಲಿ­ರುವ ತನ್ನ ರಾಯಭಾರಿ ಅಬ್ದುಲ್‌ ಬಸಿತ್‌ ಅವರನ್ನು ಭಾರತದ ಹೊಸ ಹೈಕಮಿಷನರ್‌ ಹುದ್ದೆಗೆ ನಿಯೋಜಿ­ಸಲು ಮುಂದಾಗಿದೆ. ಈ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಚೀನಾ: ಉಪಗ್ರಹ ವಿಫಲ
ಬೀಜಿಂಗ್‌ (ಪಿಟಿಐ)
: ಚೀನಾ ಉಡಾ ವಣೆ ಮಾಡಿದ ಜಿಯುಆನ್‌ ಐ03 ದೂರ ಸಂವೇದಿ ಉಪಗ್ರಹ  ತನ್ನ ಕಕ್ಷೆ ತಲುಪುವಲ್ಲಿ ವಿಫಲವಾಗಿದೆ.
ಬ್ರೆಜಿಲ್‌ ಸಹಯೋಗದಲ್ಲಿ ಸಿದ್ಧಪಡಿ ಸಿದ್ದ ಈ ಉಪಗ್ರಹವನ್ನು  ಸೋಮವಾರ ಉಡಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT