ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿ

Last Updated 26 ಏಪ್ರಿಲ್ 2013, 7:18 IST
ಅಕ್ಷರ ಗಾತ್ರ

`ಕಲ್ಲು ತೂರಾಟ: ಕಾಂಗ್ರೆಸ್ಸಿಗೆ ಸಂಬಂಧವಿಲ್ಲ'

ಬಾಗಲಕೋಟೆ: `ಜಿಲ್ಲೆಯ ಬೀಳಗಿ ಮತಕ್ಷೇತ್ರದ ಕಾಡರಕೊಪ್ಪ ಗ್ರಾಮದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ' ಎಂದು ಕಾಂಗ್ರೆಸ್ ಮುಖಂಡ ಅನೀಲ ದಿಡ್ಡಿ ಸ್ಪಷ್ಟಪಡಿಸಿದರು.

`ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಈ ಘಟನೆಯನ್ನು ರಾಜಕೀಕರಣಗೊಳಿಸಬಾರದು. ನಿರಾಣಿ ಅವರು ಸೋಲಿನ ಹತಾಶ ಭಾವನೆಯಿಂದ ಕಾಂಗ್ರೆಸ್ ಮೇಲೆ ಆರೋಪಿಸುತ್ತಿದ್ದಾರೆ. ನಿರಾಣಿ ಅವರ ಎಡಗೈ ಮತ್ತು ಬಲಗೈ ಬಂಟರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ನಿರಾಣಿ ಅವರಿಗೆ ಪ್ರಚಾರಕ್ಕೆ ಕಾರ್ಯಕರ್ತರು ಇಲ್ಲದಂತಾಗಿದೆ. ಬಾಡಿಗೆ ಕಾರ್ಯಕರ್ತರನ್ನು ಕರೆತಂದು ಪ್ರಚಾರ ನಡೆಸುತ್ತಿದ್ದಾರೆ' ಎಂದು ಆರೋಪಿಸಿದರು.

`ಕಾಡರಕೊಪ್ಪ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನಿರಾಣಿ ಅವರಿಗೆ 5 ವರ್ಷಗಳ ಕಾಲ ನಡೆಸಿದ ಆಡಳಿತದಲ್ಲಿ ನಮಗೆ ಒಂದೂ ಮನೆ ಕೊಟ್ಟಿಲ್ಲ ಎಂದು ಕೇಳಿದಾಗ ಸದಸ್ಯ ಲಿಂಗಪ್ಪ ಸಣ್ಣಕ್ಕಪ್ಪನವರ ನನ್ನುನ್ನು ಥಳಿಸಿದರು. ನಂತರ ಸಭೆಯಲ್ಲಿ ಏನಾಯಿತು ಎಂಬುದು ಗೊತ್ತಿಲ್ಲ. ಆದರೆ ನಾನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಲ್ಲ' ಎಂದರು.

`ಕಾಂಗ್ರೆಸ್ಸಿಗೆ ಮಾದಿಗ ಸಮಾಜದ ಬೆಂಬಲ'
ಬಾಗಲಕೋಟೆ:
`ಬೀಳಗಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಮಾದಿಗ ಸಮಾಜವನ್ನು ವೈರಿಗಳಂತೆ ನೋಡುಕೊಳ್ಳುತ್ತಿದ್ದು, ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಮಾದಿಗ ಸಮಾಜ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಲಿದೆ' ಎಂದು ಮಾದಿಗ ಸಮಾಜದ ಮುಖಂಡ ಪೀರಪ್ಪ ಮ್ಯೋಗೇರಿ ತಿಳಿಸಿದರು.

`ಬೀಳಗಿ ಮತಕ್ಷೇತ್ರದಲ್ಲಿ 30 ಸಾವಿರ ಮೂಲ ಅಸ್ಪೃಶ್ಯರಿದ್ದು, ಹಿಂದಿನ ಚುನಾವಣೆಯಲ್ಲಿ ಮಾದಗಿ ಸಮಾಜದವರ ಬೆಂಬಲದಿಂದ ಆಯ್ಕೆಯಾದ ನಿರಾಣಿಯವರು ಅಧಿಕಾರದ ರುಚಿಯನ್ನು ಅನುಭವಿಸಿದರು. ಮಾದಿಗ ಸಮಾಜದವರ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿಲ್ಲ' ಎಂದು    ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.

`ಹಿಂದೆ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿಯಿಂದ ಮುರನಾಳ ಮತಕ್ಷೇತ್ರಕ್ಕೆ ಸ್ಪರ್ಧಿಸಿದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸದೆ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ನಿಂತರು. ಇಂತಹ ನಾಯಕರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಾಗುವುದು. ನಿರಾಣಿಯವರ ವಿರುದ್ಧ ಮಾದಿಗ ಸಮಾಜ ಮತ ಚಲಾಯಿಸಲಿದೆ' ಎಂದು ತಿಳಿಸಿದರು.

`ಪೋನ್ ಮೂಲಕ ಬೆದರಿಕೆ': `ಮುರುಗೇಶ ನಿರಾಣಿ ಅವರು ದೂರವಾಣಿ ಮೂಲಕ ತಮಗೆ ಹಾಗೂ ದಲಿತ ಸಮಾಜದ ಮುಖಂಡರಿಗೆ ಬೆದರಿಕೆ ಹಾಕುತ್ತಿದ್ದು, ಚುನಾವಣೆಯಲ್ಲಿ ನನ್ನ ವಿರುದ್ಧ ನಡೆದುಕೊಂಡರೆ ನಿಮ್ಮನ್ನು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ಹಾಗೂ ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು' ಎಂದರು.

`ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸದೆ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿ, ಗೆಲ್ಲಿಸಿದ್ದಾರೆ' ಎಂದು ಆರೋಪಿಸಿದರು.
ಶಂಕರ, ಅಶೋಕ ಮುರನಾಳ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT