ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಸಮ್ಮೇಳನದಲ್ಲಿ...

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ಗಾಯನ ಸಮಾಜ: 43ನೇ ಸಂಗೀತ ಸಮ್ಮೇಳನದಲ್ಲಿ ಶನಿವಾರ ಬೆಳಿಗ್ಗೆ 10ಕ್ಕೆ ಪ್ರೊ.ಎಸ್.ಆರ್.ಜಾನಕಿರಾಮನ್ ಮತ್ತು ಡಾ.ಶಚಿದೇವ್ ಅವರಿಂದ ವಿವಾದಿ ರಾಗಗಳ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ. ಸಂಜೆ 4.15ಕ್ಕೆ ಯುವ ಕಲಾವಿದ ಅಭಿಲಾಶ್ ಅವರಿಂದ ಗಾಯನ.

ಎಂ.ಪಿ.ಆದಿತ್ಯ (ವಯಲಿನ್), ಅವಿನಾಶ್ ಕೃಷ್ಣ (ಮೃದಂಗ). ಸಂಜೆ 6ಕ್ಕೆ ರಂಜಿನಿ ಮತ್ತು ಗಾಯಿತ್ರಿ ಗಾಯನ. ಪಕ್ಕವಾದ್ಯದಲ್ಲಿ: ಚಾರುಮತಿ ರಘುರಾಮ್ (ವಯಲಿನ್), ಎಚ್.ಎಸ್.ಸುಧೀಂದ್ರ (ಮೃದಂಗ), ಸುಕನ್ಯಾ ರಾಮ್‌ಗೋಪಾಲ್ (ಘಟ).

ಭಾನುವಾರ ಬೆಳಿಗ್ಗೆ 10.30ರಿಂದ ವಿದ್ವತ್ ಸದಸ್. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಂದ ಸಮ್ಮೇಳನಾಧ್ಯಕ್ಷ ನೇದನೂರಿ ಕೃಷ್ಣಮೂರ್ತಿ ಅವರಿಗೆ `ಸಂಗೀತ ಕಲಾರತ್ನ, ಜ್ಯೋತಿ ಸುಬ್ರಮಣ್ಯ ಮತ್ತು ವಿ.ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿಗಳ~ ಪ್ರದಾನ.

ಕಲಾವಿದರಾದ ವಿದ್ವಾನ್ ಲಕ್ಷ್ಮೀಕಾಂತ ಕಡಬ, ಜಿ.ಎಸ್. ರಾಜಲಕ್ಷ್ಮಿ ಮತ್ತುಜಿ.ಎಸ್. ಕಮಲಾ (ಗಾಯನ), ರತ್ನಪ್ರಭಾ ಕೃಷ್ಣ (ವೀಣೆ), ಆರ್. ಕೃಷ್ಣಮೂರ್ತಿ (ಮೃದಂಗ), ಮಾಲತಿ ಶರ್ಮಾ (ಸುಗಮ ಸಂಗೀತ), ಹೊಸಳ್ಳಿ ವೆಂಕಟರಾಮ್ (ವಯಲಿನ್) ಮತ್ತು ಜಿ.ಎಲ್.ಎನ್. ಅಯ್ಯ (ಕಲಾ ಪ್ರೋತ್ಸಾಹ) ಅವರಿಗೆ ವಾರ್ಷಿಕ ಕಲಾವಿದ ಪ್ರಶಸ್ತಿ ಪ್ರದಾನ. ವಿಶೇಷ ಸನ್ಮಾನಿತರು: ಪದ್ಮಭೂಷಣ ಡಾ. ಆರ್.ಕೆ. ಶ್ರೀಕಂಠನ್. ಅಧ್ಯಕ್ಷತೆ: ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್. ಅತಿಥಿಗಳು: ಆರ್. ಅಶೋಕ್ ಮತ್ತು ಮನು ಬಳಿಗಾರ್.

ಸಂಜೆ 6ಕ್ಕೆ ಮೋಹನ ವೀಣಾ ಖ್ಯಾತಿಯ ವಿಶ್ವಮೋಹನ್ ಭಟ್ ಮತ್ತು ಮೈಸೂರು ಮಂಜುನಾಥ್ ಜುಗಲ್ ಬಂದಿ. ಸ್ಥಳ: ಕೆ.ಆರ್.ರಸ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT